ETV Bharat / entertainment

ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ಮೈಸೂರಿನಲ್ಲಿ ಸೆಟ್ಟೇರಿತು ರಾಮ್​ಚರಣ್​ ಅಭಿನಯದ 'ಆರ್​ಸಿ 16' - RAM CHARAN RC16

ರಾಮ್​​ ಚರಣ್​​, ಜಾಹ್ನವಿ ಕಪೂರ್ ಅಭಿನಯದ 'ಆರ್​ಸಿ 16' ಚಿತ್ರದ ಚಿತ್ರೀಕರಣವಿಂದು ಮೈಸೂರಿನಲ್ಲಿ ಶುರುವಾಗಿದೆ. ಇದೇ ನವೆಂಬರ್​ 25ರಂದು ನಾಯಕ ನಟ ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ.

Janhvi Kapoor, Ram Charan
ಜಾಹ್ನವಿ ಕಪೂರ್, ರಾಮ್​​ ಚರಣ್​​ (Photo: IANS)
author img

By ETV Bharat Entertainment Team

Published : Nov 22, 2024, 3:27 PM IST

'ಆರ್​ಆರ್​ಆರ್​' ಮೂಲಕ ಜಾಗತಿಕ ವೇದಿಕೆಯಲ್ಲಿ ಗಮನ ಸೆಳೆದಿರುವ ಮೆಗಾಸ್ಟಾರ್​ ಚಿರಂಜೀವಿ ಪುತ್ರ ರಾಮ್​​ ಚರಣ್​​ ತಮ್ಮ ಮತ್ತೊಂದು ಪವರ್​ಫುಲ್​​ ಆ್ಯಕ್ಟಿಂಗ್​ ಮೂಲಕ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಅವರ ಮುಂದಿನ ಬಹುನಿರೀಕ್ಷಿತ ಚಿತ್ರವನ್ನು ತಾತ್ಕಾಲಿಕವಾಗಿ 'RC 16' ಎಂದು ಹೆಸರಿಸಲಾಗಿದ್ದು, ಈಗಾಗಲೇ ಸಖತ್​ ಸದ್ದು ಮಾಡಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬುಚ್ಚಿ ಬಾಬು ಸನಾ ನಿರ್ದೇಶನದ ಈ ಪ್ರಾಜೆಕ್ಟ್​ನಲ್ಲಿ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಧಿಕೃತವಾಗಿಂದು ಶೂಟಿಂಗ್ ಶುರುವಾಗಿದೆ.

'ಉಪ್ಪೇನ'ದಂತಹ ಸಿನಿಮಾಗಳಿಂದ ಹೆಸರುವಾಸಿಯಾಗಿರುವ ನಿರ್ದೇಶಕ ಬುಚ್ಚಿ ಬಾಬು ಸನಾ ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಜೊತೆಗೆ ಅಪ್ಡೇಟ್ಸ್ ಹಂಚಿಕೊಂಡಿದ್ದಾರೆ. ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದೆದುರು 'ಆರ್‌ಸಿ 16' ಸ್ಕ್ರಿಪ್ಟ್ ಹಿಡಿದು ನಿಂತಿರುವ ತಮ್ಮ ಫೋಟೋ ಶೇರ್ ಮಾಡಿದ್ದಾರೆ.

ತಮ್ಮ ಈ ಪೋಸ್ಟ್‌ನಲ್ಲಿ, ಶ್ರೀ ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ಸಿನಿಮಾ ಪ್ರಾರಂಭಿಸಿರುವುದಾಗಿ ತಿಳಿಸಿದ್ದು, ಮುಂದಿನ ಪ್ರಯಾಣಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. "ಇದು ಬಹಳ ದೊಡ್ಡ ದಿನ. ಚಾಮುಂಡೇಶ್ವರಿ ಮಾತೆಯ ಆಶೀರ್ವಾದದೊಂದಿಗೆ ಬಹು ನಿರೀಕ್ಷಿತ ಕ್ಷಣ ಪ್ರಾರಂಭವಾಯಿತು. ಮೈಸೂರಿನ ಆಶೀರ್ವಾದದ ಅಗತ್ಯವಿದೆ" ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ. ನಿರ್ದೇಶಕರ ಪೋಸ್ಟ್​ ದೊಡ್ಡ ಮಟ್ಟದ ಉತ್ಸಾಹ ವ್ಯಕ್ತಪಡಿಸಿದೆ. ನಾಯಕ ನಟಿ ಜಾಹ್ನವಿ ಕಪೂರ್​ ಪ್ರೀತಿ ಮತ್ತು ಉತ್ಸಾಹದ ಎಮೋಜಿಗಳೊಂದಿಗೆ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: 'ಬಘೀರ'​ ಸೇರಿ ಒಟಿಟಿ ಪ್ರವೇಶಿಸಿದ ಕನ್ನಡದ ಹಿಟ್​​ ಚಿತ್ರಗಳಿವು

ಚಿತ್ರಕ್ಕೆ ಸಂಬಂಧಿಸಿದ ಮತ್ತೊಂದು ಅಪ್​ಡೇಟ್​​ನಲ್ಲಿ, ಜನಪ್ರಿಯ ನಟ ಜಗಪತಿ ಬಾಬು 'ಆರ್‌ಸಿ 16' ತಂಡ ಸೇರಿಕೊಂಡಿದ್ದಾರೆ. ಚಿತ್ರತಂಡ ಸ್ಪೆಷಲ್​ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅವರನ್ನು ಸ್ವಾಗತಿದೆ. ನಟನ ಪವರ್​ಫುಲ್​ ಲುಕ್​ ಅನ್ನು ಹಂಚಿಕೊಂಡು, "ಆರ್​​ಸಿ16 ತಂಡ ಎಲ್ಲರನ್ನೂ ಮೆಚ್ಚಿಸುವ ಕಮಾಂಡಿಂಗ್ ಪಾತ್ರಕ್ಕಾಗಿ ಪ್ರತಿಭಾವಂತ ಜಗಪತಿ ಬಾಬು ಅವರನ್ನು ಸ್ವಾಗತಿಸುತ್ತಿದೆ" ಎಂದು ಬರೆದುಕೊಂಡಿದ್ದಾರೆ. ಜಗಪತಿ ಬಾಬು ಅವರ ಎಂಟ್ರಿ ಪ್ರಾಜೆಕ್ಟ್ ಮೇಲಿನ ಸಿನಿಪ್ರಿಯರ ನಿರೀಕ್ಷೆಯನ್ನು ಹೆಚ್ಚಿಸಿದೆ.

ಪ್ರಮುಖ ಪಾತ್ರದಲ್ಲಿ ಶಿವಣ್ಣ: ಆರ್‌ಸಿ 16 ಗ್ರಾಮೀಣ ಸ್ಪೋರ್ಟ್ಸ್ ಡ್ರಾಮಾವಾಗಿ ಬರುವ ಭರವಸೆ ನೀಡಿದೆ. ಚಿತ್ರದ ಕಥಾಹಂದರ ಭಾವನಾತ್ಮಕ ಮತ್ತು ಆ್ಯಕ್ಷನ್‌ನಿಂದ ಕೂಡಿದ್ದು, ಸೌತ್​ ಸೂಪರ್​ ಸ್ಟಾರ್ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ, ಜಾಹ್ನವಿ ಕಪೂರ್ ಟಾಲಿವುಡ್‌ನಲ್ಲಿ ಎರಡನೇ ಸಿನಿಮಾದಲ್ಲಿ ಭಾಗಿಯಾಗಿದ್ದಾರೆ. ಅವರ ಚೊಚ್ಚಲ ತೆಲುಗು ಚಿತ್ರ 'ದೇವರ' ಈಗಾಗಲೇ ಬಿಡುಗಡೆ ಆಗಿದ್ದು, ಜೂನಿಯರ್ ಎನ್‌ಟಿಆರ್ ಜೊತೆ ತೆರೆಹಂಚಿಕೊಂಡಿದ್ದರು. ಇನ್ನೂ ಸ್ಯಾಂಡಲ್​ವುಡ್​​ ಸೂಪರ್‌ ಸ್ಟಾರ್ ಶಿವರಾಜ್‌ಕುಮಾರ್ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದು, ತಂಡಕ್ಕೆ ಮತ್ತಷ್ಟು ಸ್ಟಾರ್ ಪವರ್ ಸೇರಿಸಲಿದ್ದಾರೆ. ಇನ್ನೂ, ಆರ್‌ಸಿ 16ಗೆ ಪ್ರಸಿದ್ಧ ಆಸ್ಕರ್ ವಿಜೇತ ಸಂಯೋಜಕ ಎ.ಆರ್.ರೆಹಮಾನ್ ಸಂಗೀತ ಒದಗಿಸಲಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​​ ಸ್ಪರ್ಧಿ ಹನುಮಂತುಗೆ ಬಟ್ಟೆ ಕಳುಹಿಸಿಕೊಟ್ಟ ಸುದೀಪ್‌: ಹೃದಯಸ್ಪರ್ಶಿ ಪತ್ರದಲ್ಲೇನಿದೆ?

ನವೆಂಬರ್ 25ರಂದು ರಾಮ್ ಚರಣ್ ಅವರು ತಮ್ಮ ಪಾತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಅವರ ಮುಂದಿನ 'ಗೇಮ್ ಚೇಂಜರ್' ಬಹುನಿರೀಕ್ಷಿತ ಚಿತ್ರಗಳಲ್ಲೊಂದಾಗಿದ್ದು, ಸಂಕ್ರಾಂತಿ ಹಬ್ಬದ ಸಮಯದಲ್ಲಿ ಅಂದರೆ 2025ರ ಜನವರಿ 10ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.