ETV Bharat / entertainment

ಆರ್​​​​ಸಿ ಸ್ಟುಡಿಯೋ ಜೊತೆ ಹ್ಯಾಟ್ರಿಕ್ ಹೀರೋ ಹೊಸ ಸಿನಿಮಾ ಘೋಷಣೆ - Shiva Rajkumar new movie - SHIVA RAJKUMAR NEW MOVIE

ನಿರ್ದೇಶಕ ಆರ್​. ಚಂದ್ರು ಅವರ ಆರ್​.ಸಿ. ಸ್ಟುಡಿಯೋಸ್​ ಅಡಿ ನಟ ಶಿವರಾಜ್​ ಕುಮಾರ್ ಅವರ ಹೊಸ ಚಿತ್ರವನ್ನು ಘೋಷಣೆ ಮಾಡಿದ್ದಾರೆ.

ಆರ್​​ ಸಿ ಸ್ಟುಡಿಯೋ ಜೊತೆ ಹ್ಯಾಟ್ರಿಕ್ ಹೀರೋ ಹೊಸ ಸಿನಿಮಾ

author img

By ETV Bharat Karnataka Team

Published : Apr 1, 2024, 1:14 PM IST

ಮೈಲಾರಿ 2010 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರ ಮನಗೆದ್ದು ಸೂಪರ್ ಹಿಟ್​​ ಆದ ಸಿನಿಮಾ. ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಜತೆ ನಿರ್ದೇಶನ ಮಾಡಿದ ಆರ್​ ಚಂದ್ರುಗೆ ದೊಡ್ಡ ಮಟ್ಟದಲ್ಲಿ ಮೈಲಾರಿ ಯಶಸ್ಸು ತಂದ ಕೊಟ್ಟ ಸಿನಿಮಾ.

ಈ ಸಿನಿಮಾದ ಮುಹೂರ್ತ ನಡೆದು ಇಂದಿಗೆ 14 ವರ್ಷಗಳು ಕಳೆದಿವೆ. ಇದೇ ಖುಷಿಯಲ್ಲಿ ಆರ್​. ಸಿ ಸ್ಟುಡಿಯೋಸ್​ ಅಡಿ ಶಿವಣ್ಣನ ಜೊತೆ ನಿರ್ದೇಶಕ ಆರ್​. ಚಂದ್ರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆರ್.‌ಸಿ. ಸ್ಟುಡಿಯೋಸ್​ನ ಆರನೇ ಚಿತ್ರವಾಗಿದೆ. ಈ ಚಿತ್ರದಲ್ಲಿ ನಟ ಶಿವರಾಜ್​ ಜತೆ ಯಾವ ನಟ, ನಟಿಯರು ಅಭಿನಯಿಸಲಿದ್ದಾರೆ, ಚಂದ್ರು ಈ ಬಾರಿ ಯಾವ ರೀತಿ ಕಥೆ ಮಾಡಿದ್ದಾರೆ‌, ಶಿವರಾಜ್ ಕುಮಾರ್ ಪಾತ್ರ ಹೇಗಿರುತ್ತೆ ಅನ್ನುವ ಮಾಹಿತಿ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ನಟ ಶಿವರಾಜ್​ ಕುಮಾರ್ , ನಿರ್ದೇಶಕ ಆರ್​. ಚಂದ್ರು

ಇನ್ನು ಕನ್ನಡದಲ್ಲಿ ಸಾಕಷ್ಟು ಸೂಪರ್​​​ ಹಿಟ್​​ ಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ನಿರ್ಮಿಸಿರುವ ಆರ್​. ಚಂದ್ರು ಇತ್ತೀಚೆಗೆ ಆರ್​.ಸಿ. ಸ್ಟುಡಿಯೋಸ್​ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿ, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಏಕಕಾಲಕ್ಕೆ ಐದು ಚಿತ್ರಗಳಿಗೆ ಚಾಲನೆ ನೀಡಿದ್ದರು. ಈಗ ಇದೇ ಸ್ಟುಡಿಯೋಸ್ ಸಂಸ್ಥೆ ಮೂಲಕ ಆರನೇ ಚಿತ್ರದ ಘೋಷಣೆಯಾಗಿದೆ. ತಮ್ಮ ಸಂಸ್ಥೆಯಿಂದ ಆರನೇ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಈ ಕುರಿತು ಆರ್ ಚಂದ್ರು ಅವರು ಎಕ್ಸ್​ನಲ್ಲಿ ಪೋಸ್ಟ್​ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

ಶಿವರಾಜ್​ಕುಮಾರ್ ಅವರು ಸದ್ಯ ತಮ್ಮ ಪತ್ನಿ ಗೀತಾ ಶಿವರಾಜ್​ಕುಮಾರ್​ ಅವರ ಎಲೆಕ್ಷನ್ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಗೀತಾ ಶಿವರಾಜ್​ಕುಮಾರ್ ಅವರು ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, ಅವರ ಪರವಾಗಿ ಶಿವಣ್ಣ ಪ್ರಚಾರ ಮಾಡುತ್ತಿದ್ದಾರೆ. ಬಹುಶಃ ಎಲೆಕ್ಷನ್ ಫಲಿತಾಂಶ ಬಂದ‌ ಮೇಲೆ ಈ ಸಿನಿಮಾಗೆ ಮುಹೂರ್ತ ಮಾಡುವ ಪ್ಲಾನ್​ನಲ್ಲಿ ನಿರ್ದೇಶಕರಿದ್ದಾರೆ.

ಇದನ್ನೂ ಓದಿ: 'ಮ್ಯಾಟ್ನಿ' ನೋಡಲು ಸ್ನೇಹಿತರ ಜೊತೆಗೂಡಿದ ಸತೀಶ್ ನಿನಾಸಂ - Matney Movie

ETV Bharat Logo

Copyright © 2024 Ushodaya Enterprises Pvt. Ltd., All Rights Reserved.