90ರ ದಶಕದ ಬಹುಬೇಡಿಕೆಯ ತಾರೆ ರವೀನಾ ಟಂಡನ್ ಮತ್ತು ಚಲನಚಿತ್ರ ವಿತರಕ ಅನಿಲ್ ಥಡಾನಿ ದಂಪತಿಯ ಪುತ್ರಿ ರಾಶಾ ಥಡಾನಿ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. ಅಭಿಷೇಕ್ ಕಪೂರ್ ಅವರ ಮುಂಬರುವ ಸಿನಿಮಾದಲ್ಲಿ ರವೀನಾ ಪುತ್ರಿ ಕಾಣಿಸಿಕೊಳ್ಳಲಿದ್ದಾರೆ. ನಟ ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವ್ಗನ್ ಜೊತೆಗೆ ರಾಶಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸ್ಟಾರ್ ಕಿಡ್ಸ್ ಸಿನಿಮಾ ನೆಪೋಟಿಸಂ ಬಗ್ಗೆ ಚರ್ಚೆ ಹುಟ್ಟುಹಾಕಲಿದೆ. ಅದಾಗ್ಯೂ, ರವೀನಾ ತಮ್ಮ ಮಗಳು ಈ ಜಗತ್ತಿನಲ್ಲಿ ಹೇಗೆ ಮುನ್ನಡೆಯಬೇಕೆಂಬುದರ ಬಗ್ಗೆ ಸಂಪೂರ್ಣ ಸಿದ್ಧಗೊಳಿಸಿದಂತಿದೆ.
ರವೀನಾ ಟಂಡನ್ ಅವರು ಇತ್ತೀಚೆಗೆ ರಿವೇಂಜ್ ಡ್ರಾಮಾ 'ಕರ್ಮ ಕಾಲಿಂಗ್'ನಲ್ಲಿ ಕಾಣಿಸಿಕೊಂಡರು. ಇದೀಗ ಸಿನಿಮೀಯ ಪ್ರಯಾಣ ಪ್ರಾರಂಭಿಸುತ್ತಿರುವ ಮಗಳಿಗೆ ಸಲಹೆ ನೀಡಲು ಸಮಯ ತೆಗೆದುಕೊಂಡರು. ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ಮಕ್ಕಳಿಗೆ ಜೀವನದ ಏರಿಳಿತಗಳನ್ನು ಅನುಭವಿಸಲು ಅವಕಾಶ ನೀಡುವುದರ ಹಿಂದಿನ ಮಹತ್ವವನ್ನು ಒತ್ತಿಹೇಳಿದರು. ಅನುಭವಿ ನಟಿ ಚಲನಚಿತ್ರೋದ್ಯಮದ ಪ್ರಮುಖ ಅಂಶಗಳಾದ ಕಠಿಣ ಪರಿಶ್ರಮ, ಪ್ರತಿಭೆ, ಪ್ರಾಮಾಣಿಕತೆ ಮತ್ತು ಅದೃಷ್ಟದ ಬಗ್ಗೆ ಕೂಡ ಹೇಳಿದರು.
"ಪ್ರೇಕ್ಷಕರೇ ಕಿಂಗ್, ಸಿನಿಮಾದ ಕಂಟೆಂಟ್ ಕಿಂಗ್. ಪ್ರಮುಖವಾಗಿ ನೀವು ಈ ವೇದಿಕೆಯಲ್ಲಿ ಉಳಿಯಬೇಕೆ ಅಥವಾ ಪ್ಯಾಕ್ ಅಪ್ ಮಾಡುವ ಸಮಯ ಬಂದಿದೆಯೇ ಎಂಬುದನ್ನು ಪ್ರೇಕ್ಷಕರು ನಿರ್ಧರಿಸುತ್ತಾರೆ. ನೀವು ಕಷ್ಟಪಟ್ಟು ದುಡಿಯುವವರಾಗಿರಬೇಕು, ನೀವು ಪ್ರತಿಭಾವಂತರಾಗಿರಬೇಕು, ನಿಮ್ಮ ಕೆಲಸದಲ್ಲಿ ಪ್ರಾಮಾಣಿಕವಾಗಿರಬೇಕು. ಸ್ವಲ್ಪ ಅದೃಷ್ಟ ಕೂಡ ಬೇಕು'' ಎಂದು ರವೀನಾ ಟಂಡನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ನಾಳೆ ಹೊರಬೀಳಲಿದೆ ವರುಣ್ ಧವನ್-ಕೀರ್ತಿ ಸುರೇಶ್ ಸಿನಿಮಾದ 'ಬಿಗ್ ಅಪ್ಡೇಟ್'
ಸೂಪರ್-ಹಿಟ್ ಕೆಜಿಎಫ್ನಲ್ಲಿನ ಶ್ಲಾಘನೀಯ ನಟನೆಯ ಹೊರತಾಗಿಯೂ, ರವೀನಾ ತಮ್ಮ ಮುಂದಿನ ಚಿತ್ರಗಳನ್ನು ಆಯ್ದುಕೊಳ್ಳುವಲ್ಲಿ ಎದುರಾದ ಸವಾಲುಗಳನ್ನು ಬಹಿರಂಗಪಡಿಸಿದರು. ತಮಗೆ ಸವಾಲು ಎನಿಸುವ ಅಥವಾ ವಿಶಿಷ್ಟ ಸಿನಿಮೀಯ ಅನುಭವವನ್ನು ನೀಡುವ ಪಾತ್ರಗಳನ್ನು ಆರಿಸಿಕೊಂಡರು. ಈ ಸ್ಟ್ರಾಟಜಿಕ್ ನಿರ್ಧಾರವು, ಕಥೆ ರವಾನಿಸುವುದರ ಹಿಂದಿರುವ ಅವರ ಉತ್ಸಾಹಕ್ಕೆ ಹೊಂದಿಕೆಯಾಗುವ ಯೋಜನೆಗಳನ್ನು ಆಯ್ಕೆ ಮಾಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಇದನ್ನೂ ಓದಿ: 'ಬ್ಲ್ಯಾಕ್'ಗೆ 19 ವರ್ಷ: ರಾಷ್ಟ್ರಪ್ರಶಸ್ತಿ ಗೆದ್ದ ಪಾತ್ರಕ್ಕೆ ಒಂದು ಪೈಸೆಯನ್ನೂ ಪಡೆದಿರಲಿಲ್ಲ ಬಚ್ಚನ್
ರಾಶಾ ಥಡಾನಿ ಅವರ ಬಾಲಿವುಡ್‌ನ ಚೊಚ್ಚಲ ಚಿತ್ರ ಒಂದು ಆ್ಯಕ್ಷನ್ ಸಿನಿಮಾವಾಗಿದೆ. ರಾಶಾ ಮತ್ತು ಸಹನಟ ಅಮನ್ ದೇವ್ಗನ್ ಇಬ್ಬರೂ ತಮ್ಮ ಪಾತ್ರಗಳಿಗಾಗಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ. ಅನುಭವಿ ನಿರ್ದೇಶಕ ಅಭಿಷೇಕ್ ಅವರ ನಿರ್ದೇಶನದಲ್ಲಿ ತಮ್ಮ ಸಿನಿಮೀಯ ಪ್ರಯಾಣದ ಪ್ರಾರಂಭಿಸಲು ಕುತೂಹಲರಾಗಿದ್ದಾರೆ.