ETV Bharat / entertainment

ಧನುಷ್-ರಶ್ಮಿಕಾ ನಟನೆಯ 'ಕುಬೇರ' ಪೋಸ್ಟರ್ ಅನಾವರಣ, ಶುಕ್ರವಾರ ಕಂಪ್ಲೀಟ್​ ಲುಕ್ ರಿವೀಲ್ - Rashmika Kubera Poster

author img

By ETV Bharat Karnataka Team

Published : Jul 3, 2024, 10:36 AM IST

ಬಹುನಿರೀಕ್ಷಿತ 'ಕುಬೇರ' ಚಿತ್ರದಿಂದ ನಟಿ ರಶ್ಮಿಕಾ ಮಂದಣ್ಣ ಅವರ ಪೋಸ್ಟರ್ ಅನಾವರಣಗೊಂಡಿದ್ದು, ಇದೇ ಶುಕ್ರವಾರ ಸಂಪೂರ್ಣ ಲುಕ್ ರಿವೀಲ್​ ಆಗಲಿದೆ.

Dhanush, Rashmika Poster
ಧನುಷ್, ರಶ್ಮಿಕಾ ಪೋಸ್ಟರ್ (ANI Photo)

ಶೇಖರ್ ಕಮ್ಮುಲ ನಿರ್ದೇಶನದ ಮುಂದಿನ ಚಿತ್ರ 'ಕುಬೇರ' ಸಿನಿಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಚಿತ್ರದಲ್ಲಿ ಧನುಷ್, ನಾಗಾರ್ಜುನ, ರಶ್ಮಿಕಾ ಮಂದಣ್ಣ ಮತ್ತು ಜಿಮ್ ಸರ್ಭ್ ನಟಿಸಿದ್ದು ಸಾಕಷ್ಟು ನಿರೀಕ್ಷೆಗಳಿವೆ. ಚಿತ್ರತಂಡ ರಶ್ಮಿಕಾ ಮಂದಣ್ಣ ಅವರ ಪೋಸ್ಟರ್ ಅನಾವರಣಗೊಳಿಸಿದೆ. ಸಂಪೂರ್ಣ ನೋಟ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ಮಂಗಳವಾರ ನಿರ್ಮಾಪಕರು ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ರಶ್ಮಿಕಾ ಕ್ಯಾಮರಾಗೆ ಬೆನ್ನು ಮಾಡಿ ನಿಂತಿರುವುದನ್ನು ನೋಡಬಹುದು. ನಟಿಯ ಮುಖ ಅಥವಾ ಚಿತ್ರದಲ್ಲಿನ ಅವರ ಸಂಪೂರ್ಣ ನೋಟ ಗೋಚರಿಸದೇ ಇದ್ದರೂ, ಜುಲೈ 5ಕ್ಕೆ ಪಾತ್ರವನ್ನು ಬಹಿರಂಗಪಡಿಸುವ ಬಗ್ಗೆ ಪೋಸ್ಟರ್ ಸುಳಿವು ನೀಡಿದೆ. ಅಂದು 'ಕುಬೇರ'ದಿಂದ ರಶ್ಮಿಕಾ ಮಂದಣ್ಣರನ್ನು ಭೇಟಿ ಮಾಡಿ ಎಂದು ಪೋಸ್ಟ್​​ಗೆ ಕ್ಯಾಪ್ಷನ್​​ ಕೊಡಲಾಗಿದೆ.

ಈ ಹಿಂದೆ ಚಿತ್ರ ತಯಾರಕರು ನಾಗಾರ್ಜುನ ಅಕ್ಕಿನೇನಿ ಪಾತ್ರದ ಒಂದು ನೋಟ ಅನಾವರಣಗೊಳಿಸಿದ್ದರು. ಮಳೆಯಲ್ಲಿ ನಟ ಛತ್ರಿ ಹಿಡಿದು ನಿಂತಿರುವ ನೋಟ ಇದಾಗಿತ್ತು. ನಟನ ಹಿಂದೆ ಕರೆನ್ಸಿ ನೋಟುಗಳನ್ನು ತುಂಬಿದ ವಾಹನವಿದೆ. ಇದು ಕಮ್ಮುಲರ ಕಥೆ ಹೇಳುವ ಒಂದು ವಿಶಿಷ್ಟ ಶೈಲಿಯಾಗಿದ್ದು, ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಮುಂಬೈನ ಧಾರಾವಿ ಪ್ರದೇಶದಲ್ಲಿ ಕುಬೇರ ಚಿತ್ರದ ಧನುಷ್‌ ಪಾತ್ರದ ಪ್ರಯಾಣ ಸಾಗಲಿದೆ ಎಂದು ವರದಿಯಾಗಿದೆ. ನೆಲೆಸಲು ಮನೆಯಿಲ್ಲದ ವ್ಯಕ್ತಿ, ಹೇಗೆ ಮಾಫಿಯಾ ವ್ಯಕ್ತಿಯಾಗಿ ಬದಲಾಗುತ್ತಾನೆ ಅನ್ನೋದೇ ಕಥೆ. ಧನುಷ್ ಮತ್ತು ನಿರ್ದೇಶಕ ಶೇಖರ್ ಕಮ್ಮುಲ ಇದೇ ಮೊದಲ ಬಾರಿಗೆ ಕೈಜೋಡಿಸಿದ್ದು, ಸಿನಿಮಾ ನಿರ್ಮಾಣ ಹಂತದಲ್ಲಿದೆ. ಪ್ರಮುಖ ನಟರು ಇತ್ತೀಚೆಗೆ ಮುಂಬೈನಲ್ಲಿ 10 ದಿನಗಳ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಡಿಸೆಂಬರ್ 31ರಂದು ಚಿತ್ರ ರಿಲೀಸ್ ಆಗಲಿದೆ.

ಇದನ್ನೂ ಓದಿ: ಶಾರುಖ್ ಖಾನ್‌ಗೆ​ ಪ್ರತಿಷ್ಠಿತ 'ಲೊಕಾರ್ನೋ ಪ್ರಶಸ್ತಿ' ಗರಿ - Locarno Award To Shah Rukh Khan

ರಶ್ಮಿಕಾ ಮಂದಣ್ಣ ಸದ್ಯ ಬಿಡುವಿಲ್ಲದೇ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಜೊತೆಗಿನ 'ಪುಷ್ಪ 2' ನಟಿಯ ಮುಂದಿನ ಬಹುನಿರೀಕ್ಷಿತ ಚಿತ್ರ. 2022ರ ಬ್ಲಾಕ್​ಬಸ್ಟರ್ ಚಿತ್ರದ ಸೀಕ್ವೆಲ್​​​ ಇದೇ ಸಾಲಿನ ಡಿಸೆಂಬರ್ 6ಕ್ಕೆ ಬಿಡುಗಡೆ ಆಗಲಿದೆ. ದಿ ಗರ್ಲ್​ಫ್ರೆಂಡ್​​, ರೈನ್​ಬೋ ಮತ್ತು ಛಾವಾ ಚಿತ್ರಗಳು ನಟಿ ಬಳಿ ಇವೆ. ಅಲ್ಲದೇ ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಜೊತೆಗಿನ ಸಿಖಂದರ್ ಚಿತ್ರವನ್ನೂ ಹೊಂದಿದ್ದಾರೆ. ಮತ್ತೊಂದೆಡೆ, ಆಯುಷ್ಮಾನ್ ಖುರಾನಾ ಜೊತೆ 'ವಂಪೈರ್ಸ್ ಆಫ್ ವಿಜಯ್ ನಗರ್' ಎಂಬ ಹಾರರ್ ಕಾಮಿಡಿ ಸಿನಿಮಾ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕಿರುತೆರೆಗೆ ಮರಳಿದ 'ಅಶ್ವಿನಿ ನಕ್ಷತ್ರ' ಖ್ಯಾತಿಯ ಮಯೂರಿ - Actress Mayuri

ETV Bharat Logo

Copyright © 2024 Ushodaya Enterprises Pvt. Ltd., All Rights Reserved.