ETV Bharat / entertainment

ಮೋದಿ ಉದ್ಘಾಟಿಸಿದ ಅಟಲ್ ಸೇತುವೆ ಹೊಗಳಿದ ರಶ್ಮಿಕಾ ಮಂದಣ್ಣಗೆ ಚೇತನ್ ಅಹಿಂಸಾ ಟಾಂಗ್ - Rashmika Mandanna - RASHMIKA MANDANNA

ಅಟಲ್​​ ಸೇತು ಮತ್ತು ದೇಶದ ಪ್ರಗತಿ ಬಗ್ಗೆ ಮಾತನಾಡಿರುವ ನಟಿ ರಶ್ಮಿಕಾ ಮಂದಣ್ಣ ಹೇಳಿಕೆಗಳಿಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ. ಮತ್ತೊಂದೆಡೆ, ನಟಿಯ ಹೇಳಿಕೆಗಳನ್ನು ನಟ ಚೇತನ್​ ಟೀಕಿಸಿದ್ದಾರೆ.

Chethan, Modi, Rashmika
ಚೇತನ್​, ಪ್ರಧಾನಿ ಮೋದಿ, ರಶ್ಮಿಕಾ ಮಂದಣ್ಣ (ETV Bharat)
author img

By ETV Bharat Karnataka Team

Published : May 17, 2024, 9:24 AM IST

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನ ದೇಶದ ಅತಿದೊಡ್ಡ ಸಮುದ್ರ ಸೇತುವೆ (ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತುವೆ) ಬಗ್ಗೆ ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಕೆಲಸಗಳ ಬಗ್ಗೆ ಪರೋಕ್ಷ ಗುಣಗಾನ ಮಾಡಿದ್ದರು. ಇದಾದ ಬಳಿಕ ತಮ್ಮ ಅಧಿಕೃತ ಇನ್​​​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು, ಅಭಿವೃದ್ಧಿಗಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿದ್ದರು.

ಜನವರಿ ಎರಡನೇ ವಾರದಲ್ಲಿ ನರೇಂದ್ರ ಮೋದಿ ಅವರು ಅಟಲ್​ ಸೇತುವೆ ಉದ್ಘಾಟಿಸಿದ್ದರು. ಈ ಸೇತುವೆ ಮುಂಬೈ ಸಾರಿಗೆ ವ್ಯವಸ್ಥೆ ಮೇಲೆ ಅದ್ಭುತ ಪರಿಣಾಮ ಬೀರಿದೆ ಎಂದು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತ ಮುನ್ನುಗ್ಗುತ್ತಿದೆ ಎಂದು ಖುಷಿಪಟ್ಟಿದ್ದರು. ಈ ಬೆನ್ನಲ್ಲೇ ನಟ ಹಾಗು ಸಾಮಾಜಿಕ ಹೋರಾಟಗಾರ ಚೇತನ್​​ ಕುಮಾರ್​​ ಪರೋಕ್ಷವಾಗಿ ನಟಿಗೆ ಟಾಂಗ್​ ಕೊಟ್ಟಿದ್ದಾರೆ.

Chethan Tweet
ಚೇತನ್ ಟ್ವೀಟ್ (Chethan X post)

ಚೇತನ್​ ಅಹಿಂಸಾ ಸೋಷಿಯಲ್​​ ಮೀಡಿಯಾ ಪೋಸ್ಟ್​: 'ಕಳೆದ 10 ವರ್ಷಗಳಲ್ಲಿ, ಭಾರತದ ಆದಾಯ ಅಸಮಾನತೆ ಗಗನಕ್ಕೇರಿದೆ. ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳು ದಾಳಿಗೆ ಒಳಗಾಗಿವೆ. ಯಾವುದೇ ಮೂರ್ಖ ಪಕ್ಷವು ಕಾಂಕ್ರೀಟ್​​ ಸುರಿಯಬಹುದು ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸಬಹುದು. ಸಮಾಜವನ್ನು ಸುಸ್ಥಿರವಾಗಿ ಮತ್ತು ಸಮಾನವಾಗಿ ಅಭಿವೃದ್ಧಿಪಡಿಸಲು ನಿಜವಾದ ಒಳನೋಟದ ಅಗತ್ಯವಿದೆ. ಸೆಲೆಬ್ರಿಟಿಗಳ ಅಜ್ಞಾನವು ಸವಲತ್ತುಗಳ 'ಫ್ರ್ಯಾಕಿಂಗ್‌ ಬ್ರಿಲಿಯಂಟ್' ರೂಪವಾಗಿದೆ' ಎಂದು ಬರೆದುಕೊಂಡಿದ್ದಾರೆ.

ಇಲ್ಲಿ ರಶ್ಮಿಕಾ ಮಂದಣ್ಣ ಹೆಸರು ಉಲ್ಲೇಖಿಸಿಲ್ಲ. ನೆಟ್ಟಿಗರು ಈ ಪೋಸ್ಟ್​ ನಟಿಗೆ ಕೊಟ್ಟ ಟಾಂಗ್​​ ಎಂದು ಊಹಿಸಿದ್ದಾರೆ. ಮತ್ತೊಂದೆಡೆ, ಈ ಪೋಸ್ಟ್​ ಆಧಾರಿತ ಸುದ್ದಿಗಳನ್ನು ಸ್ವತಃ ಚೇತನ್​ ತಮ್ಮ ಅಧಿಕೃತ ಖಾತೆಗಳಲ್ಲಿ ಶೇರ್ ಮಾಡಿರುವ ಹಿನ್ನೆಲೆಯಲ್ಲಿ ಅವರ ಪೋಸ್ಟ್​ ರಶ್ಮಿಕಾ ಅವರಿಗೆ ಕೊಟ್ಟ ಟಾಂಗ್​ ಎಂಬುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ: 'ಭಾರತ ಮುನ್ನುಗ್ಗುತ್ತಿದೆ': ದೇಶದ ಅಭಿವೃದ್ಧಿ, ಅಟಲ್ ಸೇತು ಬಗ್ಗೆ ರಶ್ಮಿಕಾ ಗುಣಗಾನ - Rashmika Mandanna

ರಶ್ಮಿಕಾ ಹೊಗಳಿದ ಮೋದಿ: ಮತ್ತೊಂದೆಡೆ, ರಶ್ಮಿಕಾ ಲೇಟೆಸ್ಟ್ ವಿಡಿಯೋ ಪೋಸ್ಟ್​​ ಅನ್ನು ರೀಶೇರ್ ಮಾಡಿರುವ ಪ್ರಧಾನಿ ಮೋದಿ, ''ಜನರನ್ನು ಸಂಪರ್ಕಿಸುವುದು ಮತ್ತು ಅವರ ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದು ಮತ್ತೊಂದಿಲ್ಲ'' ಎಂದಿದ್ದಾರೆ.

ಇದನ್ನೂ ಓದಿ: ಕೈಗೆ ಬ್ಯಾಂಡೇಜ್​​ ಸುತ್ತಿಕೊಂಡೇ ರೆಡ್​ ಕಾರ್ಪೆಟ್​​ ಮೇಲೆ ಐಶ್ವರ್ಯಾ ಮಿಂಚು: ರೈ ಆತ್ಮವಿಶ್ವಾಸಕ್ಕೆ ಜೈ ಎಂದ ಫ್ಯಾನ್ಸ್‌ - Aishwarya Rai At Cannes

ETV Bharat Logo

Copyright © 2024 Ushodaya Enterprises Pvt. Ltd., All Rights Reserved.