ETV Bharat / entertainment

ಸಲ್ಮಾನ್ ಖಾನ್ ನಟನೆಯ 'ಸಿಖಂದರ್‌'ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ - Rashmika Mandanna - RASHMIKA MANDANNA

ನ್ಯಾಶನಲ್​ ಕ್ರಶ್​​​ ರಶ್ಮಿಕಾ ಮಂದಣ್ಣ ಬಾಲಿವುಡ್​​ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ.

Rashmika Mandanna Salman Khan
ರಶ್ಮಿಕಾ ಮಂದಣ್ಣ - ಸಲ್ಮಾನ್ ಖಾನ್ (ANI image)
author img

By ETV Bharat Karnataka Team

Published : May 9, 2024, 12:22 PM IST

Updated : May 9, 2024, 12:44 PM IST

ಯಶಸ್ವಿ ವೃತ್ತಿಜೀವನ ಮುನ್ನಡೆಸುತ್ತಿರುವ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇಂಡಿಯನ್​​ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಸಿಖಂದರ್‌'ಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದ್ದು, 2025ರ ಈದ್​ ಸಂದರ್ಭ ತೆರೆಕಾಣಲಿದೆ.

ಕನ್ನಡದ ಕಿರಿಕ್​ ಪಾರ್ಟಿ ಬೆಡಗಿ ಟಾಲಿವುಡ್​ನಲ್ಲಿ ನೆಲೆಯೂರಿದ್ದಾರೆ. ಹಿಂದಿ ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದಾರೆ. ಕೊನೆಯದಾಗಿ ತೆರೆಕಂಡಿರುವ ಬಾಲಿವುಡ್​ ಚಿತ್ರ ಅನಿಮಲ್​​ ಸೂಪರ್ ಡೂಪರ್ ಹಿಟ್ ಆಗಿ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಇದೀಗ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆ ಹೊಂದಿರುವ ನಟ ಸಲ್ಮಾನ್​​ ಖಾನ್​ ಜೊತೆ ಅಭಿನಯಿಸಲು ಸಜ್ಜಾಗಿದ್ದಾರೆ.

Rashmika Mandanna Instagram story
ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಮ್​ ಸ್ಟೋರಿ (Rashmika Mandanna Instagram story)

ಈ ಸಿಖಂದರ್ ಚಿತ್ರವನ್ನು ನಾಡಿಯಾಡ್ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್‌ನ ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸುತ್ತಿದ್ದಾರೆ. 2014ರಲ್ಲಿ ತೆರೆಕಂಡ 'ಕಿಕ್' ನಂತರ ಸಾಜಿದ್‌ ಮತ್ತು ಸಲ್ಮಾನ್‌ ಕೈಜೋಡಿಸಿರುವ ಚಿತ್ರವಿದು. ಚಿತ್ರ ಪ್ರೀ-ಪ್ರೊಡಕ್ಷನ್‌ ಹಂತದಲ್ಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದೆ. ಬರುವ ಸಾಲಿನ ಈದ್​​ ಆಚರಣೆ ಸಂದರ್ಭ ಸಿನಿಮಾ ಚಿತ್ರಮಂದಿರ ತಲುಪಲಿದೆ.

ಈ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಅವರೇ ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರತಂಡದ ಫೋಟೋ ಹಂಚಿಕೊಂಡ ನಟಿ, "ನೀವು ಬಹಳ ಸಮಯದಿಂದ ಮುಂದಿನ ಚಿತ್ರಗಳ ಅಪ್ಡೇಟ್ಸ್ ಕೇಳ್ತಿದ್ರಿ, ಮಾಹಿತಿ ಇಲ್ಲಿದೆ. ಸರ್ಪೈಸ್, ಸಿಖಂದರ್‌ ಚಿತ್ರತಂಡದ ಭಾಗವಾಗಿದ್ದು, ನಿಜವಾಗಿಯೂ ಕೃತಜ್ಞಳಾಗಿದ್ದೇನೆ. ಗೌರವದ ಕ್ಷಣ. ಚಿತ್ರಮಂದಿರಗಳಲ್ಲಿ 2025ರ ಈದ್ ಸಂದರ್ಭ ಸಿಖಂದರ್ ಬಿಡುಗಡೆ ಆಗಲಿದೆ" ಎಂದು ಬರೆದುಕೊಂಡಿದ್ದಾರೆ.

ನಟಿ ಅನಿಮಲ್ ಚಿತ್ರದ ಯಶಸ್ಸಿನ ನಂತರ ಈ ಹೊಸ ಹಿಂದಿ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇದು ಸಲ್ಮಾನ್ ಖಾನ್​​, ನಿರ್ದೇಶಕ-ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರೊಂದಿಗೆ ರಶ್ಮಿಕಾ ಅವರ ಮೊದಲ ಸಿನಿಮಾ. ಇಂದು ಚಿತ್ರ ನಿರ್ಮಾಪಕರು ರಶ್ಮಿಕಾ ಚಿತ್ರತಂಡವನ್ನು ಸೇರುತ್ತಿರುವ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಮನೆ ಹೊರಗೆ ಗುಂಡಿನ ದಾಳಿ ಪ್ರಕರಣ: ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ - Salman House Firing Case

ಎಕ್ಸ್​​ ಪೋಸ್ಟ್ ಶೇರ್ ಮಾಡಿದ ಚಿತ್ರತಂಡ, ಸಿಖಂದರ್‌ನಲ್ಲಿ ಸಲ್ಮಾನ್‌ಖಾನ್ ಜೊತೆ ಬಣ್ಣ ಹಚ್ಚಲು ಅಸಾಧಾರಣ ಪ್ರತಿಭೆ ರಶ್ಮಿಕಾ ಮಂದಣ್ಣ ಅವರನ್ನು ಸ್ವಾಗತಿಸುತ್ತೇವೆ. ಅವರ ಆನ್-ಸ್ಕ್ರೀನ್ ಮ್ಯಾಜಿಕ್ ನೋಡಲು ಹೆಚ್ಚು ಕಾಯಲು ಸಾಧ್ಯವಿಲ್ಲ. ಎ. ಆರ್ ಮುರುಗದಾಸ್ ನಿರ್ದೇಶನದ ಚಿತ್ರವನ್ನು ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸುತ್ತಿದ್ದು, ಬರುವ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೇನ್ಸ್​​ ಫೆಸ್ಟಿವಲ್​ನಲ್ಲಿ ಮಿಂಚು ಹರಿಸಲು ಸಜ್ಜಾದ ಐಶ್ವರ್ಯಾ ರೈ, ಅದಿತಿ ರಾವ್ ಹೈದರಿ - Cannes 2024

2022ರಲ್ಲಿ ಬಂದ ಗುಡ್​ಬೈ​​​ ಚಿತ್ರದ ಮೂಲಕ ರಶ್ಮಿಕಾ ಬಾಲಿವುಡ್‌ ಪ್ರವೇಶಿಸಿದರು. ನಂತರ, ಮಿಷನ್ ಮಜ್ನು ಮತ್ತು ಅನಿಮಲ್ ಚಿತ್ರಗಳಲ್ಲಿ ನಟಿಸಿದರು. ವಿಕ್ಕಿ ಕೌಶಲ್ ಜೊತೆ ಛಾವಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ತೆಲುಗಿನ ಪುಷ್ಪ: ದಿ ರೂಲ್, ತಮಿಳಿನ ಕುಬೇರ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ.

Last Updated : May 9, 2024, 12:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.