ETV Bharat / entertainment

ಧನುಷ್​​ ನಟನೆಯ 'ಕುಬೇರ'ನ ಸುತ್ತ ಕುತೂಹಲ: ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ - Rashmika Mandanna

ನಟಿ ರಶ್ಮಿಕಾ ಮಂದಣ್ಣ ಇಂದು ಮುಂಜಾನೆ ಕುಬೇರ ಸೆಟ್‌ನಿಂದ ಫೋಟೋ ಹಂಚಿಕೊಂಡಿದ್ದಾರೆ.

Rashmika Mandanna
ರಶ್ಮಿಕಾ ಮಂದಣ್ಣ
author img

By ETV Bharat Karnataka Team

Published : Apr 25, 2024, 11:04 AM IST

ರಶ್ಮಿಕಾ ಮಂದಣ್ಣ ಮತ್ತು ಧನುಷ್ ಅಭಿನಯದ ಮುಂಬರುವ ಚಿತ್ರ 'ಕುಬೇರ' ಘೋಷಣೆಯಾದಾಗಿನಿಂದಲೂ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಶೇಖರ್ ಕಮ್ಮುಲ ನಿರ್ದೇಶನದ ಈ ಚಿತ್ರ ದರೋಡೆಕೋರನ ಸುತ್ತ ಸುತ್ತುವ ಕಥೆ ಎಂದು ಹೇಳಲಾಗಿದೆ. ಅಕ್ಕಿನೇನಿ ನಾಗಾರ್ಜುನ ಪ್ರಮುಖ ಪಾತ್ರ ವಹಿಸಿದ್ದಾರೆ. ನಾಯಕ ನಟಿ ರಶ್ಮಿಕಾ ಇಂದು ಮುಂಜಾನೆ ಕುಬೇರ ಸೆಟ್‌ನಿಂದ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ನ್ಯಾಷನಲ್​ ಕ್ರಶ್​ ಖ್ಯಾತಿಯ ರಶ್ಮಿಕಾ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ, ಆಕಾಶದ ಫೋಟೋ ಹಂಚಿಕೊಂಡಿದ್ದಾರೆ. "ಅಂಡ್​​​, ಇಟ್ಸ್ ಪ್ಯಾಕ್ ಅಪ್! ಕುಬೇರ" ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಸ್ಟೋರಿ ಶೇರ್ ಮಾಡುವುದರ ಮೂಲಕ 'ಕುಬೇರ' ನಿರ್ಮಾಣ ಹಂತಕ್ಕೆ ತಲುಪಿದೆ ಎಂಬುದನ್ನು ನಟಿ ಖಚಿತಪಡಿಸಿದ್ದಾರೆ.

ಇತ್ತೀಚೆಗೆ 'ಕುಬೇರ'ನ ಶೂಟಿಂಗ್ ಅಧಿಕೃತವಾಗಿ ಮುಂಬೈನಲ್ಲಿ ಪ್ರಮುಖ ತಾರೆಯರೊಂದಿಗೆ ಪ್ರಾರಂಭವಾಯಿತು ಎಂದು ವರದಿಗಳು ಸೂಚಿಸಿತು. ವರದಿಗಳ ಪ್ರಕಾರ, ಏಪ್ರಿಲ್ 23ರಂದು ಮುಂಬೈನಲ್ಲಿ ಸಸ್ಪೆನ್ಸ್ ಡ್ರಾಮಾದ ಚಿತ್ರೀಕರಣ ಪ್ರಾರಂಭವಾಯಿತು. ರಶ್ಮಿಕಾ ಮಂದಣ್ಣ ಕೂಡ ಧನುಷ್ ಅವರ ಶೂಟಿಂಗ್ ಶೆಡ್ಯೂಲ್‌ಗೆ ಸೇರಿಕೊಂಡಿದ್ದಾರೆ. ಇತರ ಸಿನಿಮಾಗಳ ಶೂಟಿಂಗ್​ ಶೆಡ್ಯೂಲ್​ ಹಿನ್ನೆಲೆ, ಇವರಿಬ್ಬರ ಸೀಕ್ವೆನ್ಸ್‌ಗಳನ್ನು ಮೊದಲು ಚಿತ್ರೀಕರಿಸಲು ಚಿತ್ರ ತಯಾರಕರು ನಿರ್ಧರಿಸಿದ್ದಾರೆ.

Rashmika Mandanna
ಕುಬೇರ ಸೆಟ್‌ನ ಫೋಟೋ

ಹತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ನಾಗಾರ್ಜುನ ಅವರು ರಶ್ಮಿಕಾ ಮತ್ತು ಧನುಷ್ ಅವರೊಂದಿಗೆ ಸದ್ಯದ ಚಿತ್ರೀಕರಣಕ್ಕೆ ಸೇರಿಕೊಳ್ಳುವ ಸಾಧ್ಯತೆಗಳಿವೆ. ಅದಾಗ್ಯೂ, ಶೂಟಿಂಗ್ ಶೆಡ್ಯೂಲ್​ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಚಿತ್ರತಂಡದ ಕಡೆಯಿಂದ ಬಂದಿಲ್ಲ. ವರದಿಗಳ ಪ್ರಕಾರ ಕುಬೇರ ಚಿತ್ರದ ಬಹುತೇಕ ಚಿತ್ರೀಕರಣ ಮುಂಬೈನ ಧಾರಾವಿಯಲ್ಲಿ ನಡೆಯಲಿದೆ.

ಇದನ್ನೂ ಓದಿ: 'ರಾಮಾಯಣ'ಕ್ಕಾಗಿ ರಣ್​ಬೀರ್ ಸಿದ್ಧತೆ: ದೇಹ ದಂಡಿಸಿದ ಕಪೂರ್; ರೂಪಾಂತರದ ಫೋಟೋಗಳಿಲ್ಲಿವೆ - Ranbir Kapoor

ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್​​ಎಲ್​ಪಿ ಬ್ಯಾನರ್ ಅಡಿ ಸುನಿಲ್ ನಾರಂಗ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಶೇಖರ್ ಕಮ್ಮುಲ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನು ದೇವಿ ಶ್ರೀ ಪ್ರಸಾದ್ ಅವರಿಗೆ ವಹಿಸಲಾಗಿದೆ. ಚಿತ್ರ ಪ್ಯಾನ್ - ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಲ್ಮಾನ್​ ಮನೆ ಮೇಲಿನ ದಾಳಿ ಪ್ರಕರಣ: ಶೂಟರ್​​ನ ಆಪ್ತರು ಪೊಲೀಸ್​ ವಶಕ್ಕೆ - Salman Firing Case

ಕುಬೇರ ಅಲ್ಲದೇ, ರಶ್ಮಿಕಾ ಆ್ಯಕ್ಷನ್ ಥ್ರಿಲ್ಲರ್ ಪುಷ್ಪ: ದಿ ರೂಲ್‌ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದಲ್ಲಿ ಜಗಪತಿ ಬಾಬು, ಪ್ರಕಾಶ್ ರಾಜ್, ಸುನಿಲ್, ಧನಂಜಯ, ಜಗದೀಶ್ ಪ್ರತಾಪ್ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ. ರಾಹುಲ್ ರವೀಂದ್ರನ್ ಅವರ ಸಸ್ಪೆನ್ಸ್ ಚಿತ್ರ 'ದಿ ಗರ್ಲ್ ಫ್ರೆಂಡ್'ನಲ್ಲಿಯೂ ನಟಿಸುತ್ತಿದ್ದಾರೆ. ಇದಲ್ಲದೇ ರೈನ್​ಬೋ, ಛಾವಾ ಚಿತ್ರಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.