ETV Bharat / entertainment

ಇಟಲಿ 'ಮಿಲನ್​​ ಫ್ಯಾಶನ್​​ ವೀಕ್'ನ​​ ಮೆರುಗು ಹೆಚ್ಚಿಸಿದ ಕನ್ನಡತಿ ರಶ್ಮಿಕಾ ಮಂದಣ್ಣ - ಮಿಲನ್​​ ಫ್ಯಾಶನ್​​ ವೀಕ್

'ಮಿಲನ್​​ ಫ್ಯಾಶನ್​​ ವೀಕ್'ನ ಫೋಟೋಗಳನ್ನು ನಟಿ ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ.

Rashmika Mandanna
ರಶ್ಮಿಕಾ ಮಂದಣ್ಣ
author img

By ETV Bharat Karnataka Team

Published : Feb 22, 2024, 12:16 PM IST

ಕೊನೆಯದಾಗಿ ಬ್ಲಾಕ್​ಬಸ್ಟರ್ ಹಿಟ್​ ಸಿನಿಮಾ 'ಅನಿಮಲ್'ನಲ್ಲಿ ಕಾಣಿಸಿಕೊಂಡ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ವಿಶ್ವಾದ್ಯಂತ ಫ್ಯಾಷನ್ ಕ್ಷೇತ್ರದಲ್ಲಿ ಛಾಪು ಮೂಡಿಸೋ ಮುಖೇನ ಸದ್ದು ಮಾಡುತ್ತಿದ್ದಾರೆ. ಬುಧವಾರ ನಡೆದ ಅಂತಾರಾಷ್ಟ್ರೀಯ ಮಟ್ಟದ 'ಮಿಲನ್ ಫ್ಯಾಶನ್ ವೀಕ್ 2024'ರಲ್ಲಿ ಸ್ಯಾಂಡಲ್​ವುಡ್​ ತಾರೆ ಕಾಣಿಸಿಕೊಂಡರು. ಜಪಾನ್​​ ಫ್ಯಾಶನ್ ಬ್ರ್ಯಾಂಡ್ 'ಒನಿಟ್ಸುಕಾ ಟೈಗರ್‌'ಗಾಗಿ ರ‍್ಯಾಂಪ್​ ವಾಕ್​ ಮಾಡಿದರು. ಗಮನಾರ್ಹ ವಿಚಾರವೆಂದರೆ ರಶ್ಮಿಕಾ ಈ ಬ್ರ್ಯಾಂಡ್​ನ ರಾಯಭಾರಿ ಆಗಿದ್ದಾರೆ.

Rashmika Mandanna
ಮಿಲನ್​​ ಫ್ಯಾಶನ್​​ ವೀಕ್

ಇಟಲಿಯ ಮಿಲನ್‌ನಲ್ಲಿ ನಡೆದ ಫ್ಯಾಷನ್ ಈವೆಂಟ್‌ನಲ್ಲಿ ರಶ್ಮಿಕಾ ಮಂದಣ್ಣ ಬ್ಲ್ಯಾಕ್ ಕೋಟ್​​​ ಔಟ್​ಫಿಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಉಡುಗೆಗೆ ಹೊಂದಿಕೆಯಾಗುವ ಕಪ್ಪು ಬೂಟುಗಳನ್ನು ಧರಿಸಿದ್ದರು. ಫೆಬ್ರವರಿ 20ರಂದು 'ಮಿಲನ್ ಫ್ಯಾಷನ್ ವೀಕ್ 2024' ಪ್ರಾರಂಭವಾಗಿದ್ದು, 26ರವರೆಗೆ ನಡೆಯಲಿದೆ.

ನಟಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿಸ್‌ನಲ್ಲಿ ಫ್ಯಾಶನ್ ಶೋನ ಫೋಟೋಗಳನ್ನು ಹಂಚಿಕೊಂಡು, "ಮಿಲನ್ ಫಾರ್ ಎ ಮಿನಿಟ್​" ಎಂದು ಬರೆದುಕೊಂಡಿದ್ದಾರೆ. ಫ್ಯಾಶನ್ ಶೋನಿಂದ ತಮ್ಮ ಮತ್ತೊಂದು ಫೋಟೋವನ್ನು ಹಂಚಿಕೊಂಡು, ಹೇರ್​​ ಸ್ಟೈಲಿಸ್ಟ್ ಮತ್ತು ಮೇಕ್ಅಪ್ ತಂಡವನ್ನು ಟ್ಯಾಗ್ ಮಾಡಿದ್ದಾರೆ. ಆ ಫೋಟೋಗೆ "ವೆನ್​ ದಿ ಗರ್ಲ್ಸ್ ಡು ದೇರ್ ಮ್ಯಾಜಿಕ್​ ಆನ್​ ಮಿ" ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ಫ್ಯಾಷನ್ ಶೋನ ರನ್‌ವೇಯಲ್ಲಿ ಹೆಜ್ಜೆ ಹಾಕುತ್ತಿರುವ ಇತರ ಮಾಡೆಲ್‌ಗಳ ಫೋಟೋಗಳನ್ನು ಸಹ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿರಿಸಿದ ರಾಕುಲ್ ​ -ಜಾಕಿ: ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಸಲ್ಲಿಕೆ

ಇತ್ತೀಚೆಗೆ ರಶ್ಮಿಕಾ ಮಂದಣ್ಣ ಮುಂಬೈನಿಂದ ಹೈದರಾಬಾದ್‌ಗೆ ವಿಮಾನದಲ್ಲಿ ಪ್ರಯಾಣ ಕೈಗೊಂಡಾಗ, ಅಪಾಯಕ್ಕೆ ಸಿಲುಕಿದ್ದರು. ತಮ್ಮ ಆಘಾತಕಾರಿ ಅನುಭವವನ್ನು ನಟಿ ಇನ್​ಸ್ಟಾಗ್ರಾಮ್​​​ನಲ್ಲಿ ಪೋಸ್ಟ್ ಮಾಡಿದ್ದರು. ಅಂದು ರಶ್ಮಿಕಾ ಮಂದಣ್ಣ ಜೊತೆ ನಟಿ ಶ್ರದ್ಧಾ ದಾಸ್ ಕೂಡ ಇದ್ದರು. ಫೋಟೋ ಹಂಚಿಕೊಂಡ ನ್ಯಾಷನಲ್​ ಕ್ರಶ್​, ಪ್ರಾಣಾಪಾಯದಿಂದ ಪಾರಾದೆವು ಎಂದು ಬರೆದುಕೊಂಡಿದ್ದರು. ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಎದುರಾದ ಆದ ಹಿನ್ನೆಲೆ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಮೆಚ್ಚಿನ ನಟಿ ಸುರಕ್ಷಿತರಾಗಿದ್ದಾರೆ ಎಂಬುದನ್ನು ತಿಳಿದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದರು.

ಇದನ್ನೂ ಓದಿ: ಪ್ರೇಕ್ಷಕರ ಮನಗೆಲ್ಲುತ್ತಿದೆ ಕನ್ನಡದ 'ಬಡೇ ಮಿಯಾ ಛೋಟೆ ಮಿಯಾ' ಹಾಡು; ಸಿನಿಮಾ ವೀಕ್ಷಿಸೋ ಕಾತರ

ರಶ್ಮಿಕಾ ಮಂದಣ್ಣ ಸಿನಿಮಾ ವಿಚಾರ ಗಮನಿಸೋದಾದರೆ, ಕೊನೆಯದಾಗಿ ಕಾಣಿಸಿಕೊಂಡ 'ಅನಿಮಲ್‌' ಯಶಸ್ವಿಯಾಗಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಮೊದಲ ಬಾರಿಗೆ ಬಾಲಿವುಡ್​​ ಸ್ಟಾರ್ ಹೀರೋ ರಣ್​​​ಬೀರ್ ಕಪೂರ್ ಜೊತೆ ತೆರೆ ಹಂಚಿಕೊಂಡರು. ಬಾಬಿ ಡಿಯೋಲ್, ಅನಿಲ್ ಕಪೂರ್, ತೃಪ್ತಿ ಡಿಮ್ರಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಅನಿಮಲ್ 2023ರ ಅತ್ಯಂತ ಯಶಸ್ವಿ ಚಿತ್ರವಾಗಿ ಹೊರಹೊಮ್ಮಿದೆ. ಇನ್ನೂ ಬಹುನಿರೀಕ್ಷಿತ ಪುಷ್ಪ 2ರಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲೇ ಅಲ್ಲು ಅರ್ಜುನ್ ಜೊತೆ ತೆರೆ ಮೇಲೆ ಮಿಂಚಲಿದ್ದಾರೆ. ಇದೇ ಸಾಲಿನ ಆಗಸ್ಟ್ 15 ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.