ETV Bharat / entertainment

ರಮೇಶ್​ ಅರವಿಂದ್​​​ಗೆ ವಯಸ್ಸು 60 ಅಂದ್ರೆ ನಂಬ್ತೀರಾ?: ಅರವತ್ತರಲ್ಲೂ 30ರ ಚಾರ್ಮ್​ - ಹ್ಯಾಂಡ್ಸಂ ಲುಕ್​​ಗೆ ಫ್ಯಾನ್​ ಫಿದಾ - Ramesh Aravind - RAMESH ARAVIND

ಸ್ಯಾಂಡಲ್​ವುಡ್​ನ ಫಿಟ್ಟೆಸ್ಟ್ ಆ್ಯಕ್ಷರ್​ ರಮೇಶ್​ ಅರವಿಂದ್ ತಮ್ಮ ಅಧಿಕೃತ ಸೋಷಿಯಲ್​​ ಮೀಡಿಯಾಗಳಲ್ಲಿ ಹ್ಯಾಂಡ್ಸಂ ಫೋಟೋಗಳನ್ನು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿವೆ. ​​

Ramesh Aravind
ನಟ ರಮೇಶ್​ ಅರವಿಂದ್ (ETV Bharat)
author img

By ETV Bharat Karnataka Team

Published : Sep 10, 2024, 6:12 PM IST

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ರಮೇಶ್​ ಅರವಿಂದ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 60ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟನಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ವಯಸ್ಸು ಅರವತ್ತಾದ್ರೂ, ಇಪ್ಪತ್ತು - ಮೂವತ್ತರ ಹುರುಪು. ಚಿರಯೌವ್ವನ ಕಾಪಾಡಿಕೊಂಡಿರುವ ಕನ್ನಡದ ಖ್ಯಾತ ನಟ. ಸ್ಯಾಂಡಲ್​ವುಡ್​ನ ಫಿಟ್ಟೆಸ್ಟ್ ಆ್ಯಕ್ಷರ್​ ಅಂದ್ರೂ ತಪ್ಪಾಗಲ್ಲ ನೋಡಿ.

ತ್ಯಾಗಮಯಿ ಪಾತ್ರಗಳಿಂದಲೇ ಕನ್ನಡ ಚಿತ್ರರಂಗದಲ್ಲಿ ತನ್ನದೇ ಸ್ಟಾರ್ ಡಮ್ ಹೊಂದಿರುವ ರಮೇಶ್ ಅರವಿಂದ್ ಅವರಿಗೆ ಕುಟುಂಬ ಸದಸ್ಯರು, ಸಿನಿ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಸ್ಟಾರ್ ಹೀರೋ ಕೂಡಾ ತಮ್ಮ ಅಭಿಮಾನಿಗಳಿಗೆ ಸ್ಪೆಷಲ್​​ ಲುಕ್​ ಮೂಲಕ ಟ್ರೀಟ್​​ ಕೂಡಾ ಕೊಟ್ಟಿದ್ದಾರೆ.

ಬಹುತೇಕ ಸೂಪರ್​​ ಸ್ಟಾರ್​ಗಳೊಂದಿಗೆ ತೆರೆ ಹಂಚಿಕೊಂಡ ನಟ: ರಮೇಶ್​ ಅರವಿಂದ್ ದಕ್ಷಿಣ ಚಿತ್ರರಂಗದ ಕಮಲ್ ಹಾಸನ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್​​ಕುಮಾರ್, ರವಿಚಂದ್ರನ್ ಹೀಗೆ ಬಹುತೇಕ ಸೂಪರ್​​ ಸ್ಟಾರ್ಸ್​​​ ಜೊತೆ ತೆರೆ ಹಂಚಿಕೊಂಡಿರುವ ಖ್ಯಾತ ನಟ ಇವರು. ನಿರ್ದೇಶಕ, ನಿರ್ಮಾಪಕ, ನಿರೂಪಕ, ವ್ಯಕ್ತಿತ್ವ ವಿಕಸನ ಉಪನ್ಯಾಸಕ - ಹೀಗೆ ಹೇಳುತ್ತಾ ಹೋದ್ರೆ ಅವರೊಬ್ಬ ಕನ್ನಡದ ಬಹುಮುಖ ಪ್ರತಿಭೆ. ಪ್ರತಿಭಾನ್ವಿತ ಸಜ್ಜನ ನಟ ಎನಿಸಿಕೊಂಡಿರುವ ಮಿಸ್ಟರ್ ಫರ್ಪೆಕ್ಟ್. ರಮೇಶ್ ಅರವಿಂದ್ ಅಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಅವರ ಭಾವಪೂರ್ಣ ನಟನೆ. ತ್ಯಾಗಮಯಿ ಪಾತ್ರಗಳಿಂದಲೇ ಹೆಸರುವಾಸಿಯಾಗಿರೋ ಅವರು ಇಂದಿಗೂ ಕೂಡ ಬೇಡಿಕೆಯ ನಟ. ಬರ್ತ್​​​ಡೇ ಬಾಯ್​​ ಸ್ಪೆಷಲ್​​ ಲುಕ್​ ಮೂಲಕ ಅಭಿಮಾನಿಗಳಿಗೆ ಟ್ರೀಟ್​​ ಕೊಟ್ಟಿದ್ದಾರೆ.

ಚಿರಯುವಕನಂತೆ ಕಂಗೊಳಿಸುವ ರಮೇಶ್​: ಹೌದು, ರಮೇಶ್ ಅರವಿಂದ್ ಹುಟ್ಟುಹಬ್ಬದ ಅಂಗವಾಗಿ ರೆಟ್ರೋ ಲುಕ್​​​​ನಲ್ಲಿ ಕ್ಯಾಮರಾಗೆ ತರೇಹವಾರಿ ಪೋಸ್ ಕೊಟ್ಟಿದ್ದಾರೆ. ಖ್ಯಾತ ಕಾಸ್ಟ್ಯೂಮ್ ಡಿಸೈನರ್ ಭರತ್ ರಾಮದಾಸ್ ವಿನ್ಯಾಸಗೊಳಿಸಿರುವ ಔಟ್​ಫಿಟ್​ನಲ್ಲಿ ರಮೇಶ್ ಚಿರಯುವಕನಂತೆ ಕಂಗೊಳಿಸಿದ್ದಾರೆ. ಈ ನಟನಿಗೆ ವಯಸ್ಸು ಅರವತ್ತಂದ್ರೆ ನಂಬೋದು ಕಷ್ಟಾನೆ. 60ರಲ್ಲೂ 30ರ ಚಾರ್ಮ್​ ಹೊಂದಿದ್ದು, ಹ್ಯಾಂಡ್ಸಂ ಲುಕ್​​ಗೆ ಫ್ಯಾನ್​ ಫಿದಾ ಆಗಿದ್ದಾರೆ.

ಇದನ್ನೂ ಓದಿ: 'ನಾಳೆ ಇದೆಯೆಂಬುದು ನಮಗೆ ಗೊತ್ತಿರಲ್ಲ': ಅಪಘಾತದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಪೋಸ್ಟ್ - Rashmika Mandanna Emotional Post

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್​​ನಲ್ಲಿ ತೊಡುವ ಸ್ಟೈಲಿಶ್ ಕಾಸ್ಟ್ಯೂಮ್​ಗಳನ್ನು ನೀವೆಲ್ಲಾ ನೋಡೇ ಇರುತ್ತೀರಾ. ವೀಕೆಂಡ್​​ ಶೋನಲ್ಲಿ ಸಖತ್ ಡಿಫರೆಂಟ್ ಕಾಸ್ಟ್ಯೂಮ್​​​ನಲ್ಲಿ ಕಿಚ್ಚ ಕಾಣಿಸಿಕೊಳ್ತಾರೆ. ಕಿಚ್ಚನ ಆ ಸ್ಟೈಲಿಶ್ ಅವತಾರದ ಹಿಂದಿರುವ ರೂವಾರಿಯೇ ಈ ಭರತ್. ಕಿಚ್ಚನಿಗೆ ಮಾತ್ರವಲ್ಲ ಸ್ಯಾಂಡಲ್​​ವುಡ್​ನ ಸಾಕಷ್ಟು​ ಸೆಲೆಬ್ರಿಟಿಗಳ ಕಾಸ್ಟ್ಯೂಮ್ ಡಿಸೈನರ್ ಇವರೇನೆ.

ರಮೇಶ್ ಅರವಿಂದ್ ಅವರ ಹೊಸ ಸಿನಿಮಾ ಇತ್ತೀಚೆಗಷ್ಟೇ ಘೋಷಣೆಯಾಗಿದೆ. ಗಣೇಶ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದು, ಸಿನಿಮಾಗೆ ''Your's sincerely ರಾಮ್'' ಎಂಬ ಶೀರ್ಷಿಕೆ ಇಡಲಾಗಿದೆ. ಈಗಾಗಲೇ ಅನಾವರಣಗೊಂಡಿರುವ ಫಸ್ಟ್​ ಲುಕ್​ ಟೀಸರ್​ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ದೊಡ್ಡಬಳ್ಳಾಪುರ - ನೆಲಮಂಗಲ ರಸ್ತೆ ಗುಂಡಿಗಳಿಗೆ ಸಿಕ್ತು ಮುಕ್ತಿ: ನಟ ವಿನೋದ್ ರಾಜ್ ಸಮಾಜಸೇವೆಗೆ ಪ್ರಶಂಸೆ - Vinod Raj social work

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತನ್ನದೇ ಛಾಪು ಮೂಡಿಸಿರೋ ರಮೇಶ್ ಅರವಿಂದ್ ಅವರಿಗೆ ಒನ್ಸ್​​ ಅಗೈನ್​​ ಹ್ಯಾಪಿ ಬರ್ತ್ ಡೇ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.