ETV Bharat / entertainment

ರಾಮ್ ಚರಣ್ ಮುಖ್ಯಭೂಮಿಕೆಯ 'ಗೇಮ್ ಚೇಂಜರ್‌' ಅಪ್ಡೇಟ್ಸ್ - Ram Charan

ಬಹುನಿರೀಕ್ಷಿತ 'ಗೇಮ್ ಚೇಂಜರ್‌' ಶೂಟಿಂಗ್​ ಅಂತಿಮ ಘಟ್ಟ ತಲುಪಿದೆ.

Ram Charan starrer Game Changer
ರಾಮ್ ಚರಣ್ ಮುಖ್ಯಭೂಮಿಕೆಯ 'ಗೇಮ್ ಚೇಂಜರ್‌'
author img

By ETV Bharat Karnataka Team

Published : Feb 24, 2024, 11:43 AM IST

Updated : Feb 24, 2024, 4:53 PM IST

ಆರ್​ಆರ್​ಆರ್​ ಸಿನಿಮಾ ಮೂಲಕ ವಿಶ್ವಾದ್ಯಂತ ಹೆಸರು ಮಾಡಿರುವ ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ರಾಮ್​ ಚರಣ್​. ಇವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್‌'. ಶಂಕರ್ ನಿರ್ದೇಶನದ ಈ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಹೈ-ಆಕ್ಟೇನ್ ಆ್ಯಕ್ಷನ್ ಸೀಕ್ವೆನ್ಸ್‌ಗಳ ಶೂಟಿಂಗ್​ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಜೊತೆ ಜೊತೆಗೆ ಬುಚಿ ಬಾಬು ನಿರ್ದೇಶನದ 'ಆರ್‌ಸಿ 16' ಚಿತ್ರಕ್ಕೆ ತಯಾರಿ ಆರಂಭಿಸಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಗೇಮ್ ಚೇಂಜರ್ ತಂಡ ಶೀಘ್ರದಲ್ಲೇ ಚಿತ್ರೀಕರಣವನ್ನು ಪೂರ್ಣಗೊಳಿಸಲಿದೆ. ರಾಮ್ ಚರಣ್ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕೆಲ ಅದ್ಭುತ ದೃಶ್ಯಗಳನ್ನು ನಿಭಾಯಿಸಲು ಸಿದ್ಧರಾಗಿದ್ದಾರಂತೆ.

ವರದಿಗಳ ಪ್ರಕಾರ, ಆ್ಯಕ್ಷನ್ ಕೊರಿಯೋಗ್ರಾಫರ್ ಜೋಡಿ ಅನ್ಬರಿವ್ ಮತ್ತು ಕಲಾ ನಿರ್ದೇಶಕ ಅವಿನಾಶ್ ಕೊಲ್ಲಾ ಅವರು ಸಿನಿಮಾ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಶೀಘ್ರವೇ ಆರಂಭಿಸುವ ಪ್ಲ್ಯಾನ್​ ಚಿತ್ರತಂಡದ್ದು. ಮುಂದಿನ ಪ್ರಾಜೆಕ್ಟ್​ಗೆ ಹೋಗುವ ಮುನ್ನ, ಮಾರ್ಚ್ 2ರೊಳಗೆ 'ಗೇಮ್ ಚೇಂಜರ್‌'ನ ಹೈದರಾಬಾದ್ ಶೆಡ್ಯೂಲ್​ ಅನ್ನು​ ಪೂರ್ಣಗೊಳಿಸಲು ರಾಮ್ ಚರಣ್ ಉತ್ಸುಕರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ನಿರ್ಮಾಪಕ ದಿಲ್ ರಾಜು ಅವರು 2024ರ ಕೊನೆಯಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಚಿತ್ರೀಕರಣ ಪೂರ್ಣಗೊಂಡ ನಂತರ ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗುವುದು. ಕಳೆದ ಎರಡು ವರ್ಷಗಳಿಂದ ಶೂಟಿಂಗ್​​ ವೇಳಾಪಟ್ಟಿಯ ಅಡೆತಡೆಗಳು ಎದುರಾಗಿದ್ದು, ಅಂತಿಮವಾಗಿ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ನಟನೆಯ ಗೇಮ್ ಚೇಂಜರ್ ಅಂತಿಮ ಘಟ್ಟ ತಲುಪಿದೆ.

ಇದನ್ನೂ ಓದಿ: AIನ ಪರಿಣಾಮ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ: ಅಮೀರ್​ ಖಾನ್​ ಆತಂಕ

ಶೂಟಿಂಗ್ ವಿಳಂಬ ಹಿನ್ನೆಲೆ ನಿರ್ದೇಶಕ ಶಂಕರ್ ಮತ್ತು ನಿರ್ಮಾಪಕ ದಿಲ್ ರಾಜು ಸಿನಿಪ್ರಿಯರಿಂದ ಟೀಕೆಗಳನ್ನು ಸ್ವೀಕರಿಸಿದ್ದಾರೆ. ಆದರೆ, ಬಹು ನಿರೀಕ್ಷಿತ ಚಿತ್ರವೀಗ ಮುಕ್ತಾಯ ಹಂತದಲ್ಲಿದ್ದು, ಅಭಿಮಾನಿಗಳಲ್ಲಿ ಉತ್ಸಾಹ ಮೂಡಿದೆ. ಸಿನಿಮಾದ ರಿಲೀಸ್​ ಡೇಟ್​ ಅಥವಾ ಗ್ಲಿಂಪ್ಸ್ ಅನಾವರಣಗೊಳಿಸುಂತೆ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ.

ಇದನ್ನೂ ಓದಿ: ಡಬ್ಲ್ಯುಪಿಎಲ್ 2024: ಶಾರುಖ್​​ ಭರ್ಜರಿ ಡ್ಯಾನ್ಸ್; 'ನಾರಿ ಶಕ್ತಿ' ಬಗ್ಗೆ ಎಸ್​ಆರ್​ಕೆ ಗುಣಗಾನ

ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿ ದಿಲ್ ರಾಜು ಮತ್ತು ಸಿರಿಶ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅಂಜಲಿ, ಎಸ್ ಜೆ ಸೂರ್ಯ, ಜಯರಾಮ್, ಸುನೀಲ್, ಶ್ರೀಕಾಂತ್, ಸಮುದ್ರಕನಿ ಮತ್ತು ನಾಸರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Last Updated : Feb 24, 2024, 4:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.