ETV Bharat / entertainment

ಬಾಲಿವುಡ್​ನ ಖಾನ್​ಗಳಿಗೆ ನಾಟು ನಾಟು ಡ್ಯಾನ್ಸ್​​ ಕಲಿಸಿಕೊಟ್ಟ ರಾಮ್​​​ ಚರಣ್​​: ವಿಡಿಯೋ ನೋಡಿ - ನಾಟು ನಾಟು

ಬಾಲಿವುಡ್​​ ಸೂಪರ್​ ಸ್ಟಾರ್​ಗಳೊಂದಿಗೆ ಸೌತ್​ ಸೂಪರ್​ ಸ್ಟಾರ್ ರಾಮ್​​​ ಚರಣ್​​ ನಾಟು ನಾಟು ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ram charan dance with Bollywood khans
ಬಾಲಿವುಡ್​ನ ಖಾನ್​ಗಳೊಂದಿಗೆ ರಾಮ್​​​ ಚರಣ್​​ ಡ್ಯಾನ್ಸ್
author img

By ETV Bharat Karnataka Team

Published : Mar 3, 2024, 2:48 PM IST

ಗುಜರಾತ್‌ನ ಜಾಮ್‌ನಗರದಲ್ಲಿ ಅಂಬಾನಿ ಕುಟುಂಬದ ಅದ್ಧೂರಿ ಕಾರ್ಯಕ್ರಮ ಜರುಗುತ್ತಿದೆ. ಸೋಷಿಯಲ್​​ ಮೀಡಿಯಾಗಳಲ್ಲಿ ಈ ಸಂಭ್ರಮಾಚರಣೆಯದ್ದೇ ಸದ್ದು. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಮೂರು ದಿನಗಳ ಪ್ರೀ ವೆಡ್ಡಿಂಗ್​​ ಸೆಲೆಬ್ರೇಶನ್​ಗೆ ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾಗಿದ್ದಾರೆ. ಬಾಲಿವುಡ್​ನ ಬಹುತೇಕ ಖ್ಯಾತನಾಮರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋಗಳು ವೈರಲ್​ ಆಗುತ್ತಿವೆ. ಇದೀಗ ಸೌತ್​ ಸೂಪರ್​ ಸ್ಟಾರ್ ರಾಮ್​ಚರಣ್​​ ಅವರ ವಿಡಿಯೋವೊಂದು ಹೆಚ್ಚು ಗಮನ ಸೆಳೆದಿದೆ.

ಎರಡನೇ ದಿನ ಗ್ರ್ಯಾಂಡ್​ ಸಂಗೀತ್​ ನೈಟ್​ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈವೆಂಟ್‌ನಿಂದ ಶನಿವಾರ ಸಂಜೆಯ ವಿಡಿಯೋಗಳು ಆನ್​ಲೈನ್​ನಲ್ಲಿ ವ್ಯಾಪಕವಾಗಿ ವೈರಲ್​ ಆಗಿವೆ. ಬಾಲಿವುಡ್​​​​ನ ದಿಗ್ಗಜರಾದ ಶಾರುಖ್ ಖಾನ್, ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ಅವರು ಸೂಪರ್​ ಹಿಟ್​ ಆರ್​ಆರ್​ಆರ್​​​ ಚಿತ್ರದ ನಾಟು ನಾಟು ಹಾಡಿನ ಹುಕ್​​ ಸ್ಟೆಪ್ ಹಾಕಿದ್ದಾರೆ.​​​ ವೇದಿಕೆಯಲ್ಲಿ ತಮ್ಮೊಂದಿಗೆ ಸೇರಿ ಕುಣಿಯಲು ರಾಮ್ ಚರಣ್ ಅವರನ್ನು ಖಾನ್ಸ್ ಆಹ್ವಾನಿಸಿದ್ದು, ಆರ್​ಆರ್​ಆರ್​ ಸ್ಟಾರ್​​ ಆಗಮಿಸಿ ಈ ತಂಡವನ್ನು ಸೇರಿಕೊಂಡರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ವೈರಲ್ ವಿಡಿಯೋವೊಂದರಲ್ಲಿ, ನೀತಾ ಅಂಬಾನಿ ಅವರು ದಕ್ಷಿಣ ಚಿತ್ರರಂಗದ ಹೆಸರಾಂತ ನಟ ರಾಮ್ ಚರಣ್ ಅವರನ್ನು ವೇದಿಕೆಗೆ ಆಹ್ವಾನಿಸಲು ಬಾಲಿವುಡ್​ನ ಖಾನ್‌ಗಳಿಗೆ ಸೂಚಿಸುತ್ತಿರುವುದನ್ನು ಕಾಣಬಹುದು. ರಾಮ್​ಚರಣ್​​ ಪತ್ನಿ ಉಪಾಸನಾ ಜೊತೆ ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ. ಖಾನ್ಸ್ ರಾಮ್ ಅವರನ್ನು ವೇದಿಕೆಗೆ ಆಹ್ವಾನಿಸುತ್ತಿದ್ದು, "ಸ್ಟೆಪ್​​ ಅನ್ನು ಹೇಗೆ ಮಾಡಬೇಕೆಂದು ನಮಗೆ ತೋರಿಸಿ" ಎಂದು ಕೇಳುತ್ತಿರುವುದನ್ನೂ ಕಾಣಬಹುದು. ರಾಮ್ ಚರಣ್​ ಕೂಡ ಬಹಳ ಉತ್ಸಾಹದಿಂದ ಈ ಮೂವರೊಂದಿಗೆ ಸೇರಿಕೊಂಡರು. ಎಲ್ಲರೂ ಸೇರಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದರು. ವೇದಿಕೆ ಬಳಿ ಸೇರಿದ್ದ ಅತಿಥಿಗಳು ಹರ್ಷೋದ್ಘಾರ ಹಾಕಿದರು.

ಇದನ್ನೂ ಓದಿ: ಅಂಬಾನಿ ಪುತ್ರನ ಪ್ರಿ-ವೆಡ್ಡಿಂಗ್ ವೈಭವ: ಒಂದೇ ವೇದಿಕೆಯಲ್ಲಿ ಶಾರುಖ್​, ಅಮೀರ್​, ಸಲ್ಮಾನ್ ಡ್ಯಾನ್ಸ್​ ಝಲಕ್‌

ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಪುತ್ರ ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೆನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ. ಸದ್ಯ ಗುಜರಾತ್‌ನ ಜಾಮ್‌ನಗರದಲ್ಲಿ ಪ್ರೀ ವೆಡ್ಡಿಂಗ್​​ ಸೆಲೆಬ್ರೇಶನ್​​ ನಡೆಯುತ್ತಿದೆ. ಕಾರ್ಯಕ್ರಮ ಶುಕ್ರವಾರ ಆರಂಭಗೊಂಡಿದ್ದು, ಇಂದು ರಾತ್ರಿ ಪೂರ್ಣಗೊಳ್ಳಲಿದೆ. ಸಮಾರಂಭಕ್ಕೆ ಸಿನಿಮಾ, ಕ್ರಿಕೆಟ್​ ಸೇರಿದಂತೆ ವಿವಿಧ ಕ್ಷೇತ್ರಗಳ ಉದ್ಯಮಿಗಳು ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ: ವಿಡಿಯೋ: ಪತ್ನಿ ಉಪಾಸನಾ ಬಗ್ಗೆ ಕಾಳಜಿ ವಹಿಸಿದ ರಾಮ್​ಚರಣ್​​​ಗೆ ಫ್ಯಾನ್ಸ್ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.