ETV Bharat / entertainment

ಮಗಳ ಜೊತೆ ಮೊದಲ ಜನ್ಮಾಷ್ಟಮಿ ಸಂಭ್ರಮದಲ್ಲಿ ನಟ ರಾಮ್​ ಚರಣ್​ - ಉಪಾಸನಾ - Krishna Janmashtami celebration - KRISHNA JANMASHTAMI CELEBRATION

Krishna Janmashtami 2024: ಮಗಳು ಹುಟ್ಟಿದ ಬಳಿಕ ಮೊದಲ ಶ್ರೀ ಕೃಷ್ಣ ಜನ್ಮಾಷ್ಠಮಿ ಎಂದು ಇನ್​​ಸ್ಟಾಗ್ರಾಂ ಸ್ಟೋರಿಯಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ram-charan-and-upasana-kamineni-celebrates-first-krishna-janmashtami-of-their-daughter-klin-kaara-see
ನಟ ರಾಮ್​ ಚರಣ್​- ಉಪಾಸನಾ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Aug 27, 2024, 12:00 PM IST

ಹೈದರಾಬಾದ್​: 'ಆರ್​ಆರ್​ಆರ್'​ ಸೂಪರ್​ಸ್ಟಾರ್ ನಟ ರಾಮ್​ ಚರಣ್​ ಮತ್ತು ಅವರ ಪತ್ನಿ ಉಪಾಸನಾ ಮಗಳ ಜೊತೆಗೆ ಮೊದಲ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಭಾಗಿಯಾಗಿದ್ದಾರೆ. ಮಗಳೊಂದಿಗೆ ಶ್ರೀಕೃಷ್ಣ ಜನ್ಮಾಷ್ಠಮಿ ಸಂಭ್ರಮದ ಫೋಟೋಗಳನ್ನು ಉಪಾಸನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ನಟ ರಾಮ್​ ಚರಣ್​ ಮತ್ತು ಅತ್ತೆ ಸುರೇಖಾ ಕೂಡ ಭಾಗಿಯಾಗಿದ್ದಾರೆ.

ram-charan-and-upasana-kamineni-celebrates-first-krishna-janmashtami-of-their-daughter-klin-kaara-see
ಅಜ್ಜಿ ಜೊತೆ ಕ್ಲಿನ್​ ಕಾರಾ (ಉಪಾಸನ ಇನ್ಸ್​ಟಾಗ್ರಾಂ)

ಮಗಳು ಹುಟ್ಟಿದ ಬಳಿಕ ಮೊದಲ ಶ್ರೀ ಕೃಷ್ಣ ಜನ್ಮಾಷ್ಠಮಿ ಎಂದು ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಉಪಾಸನಾ ಮಗಳು ಕಾರಾ ಜೊತೆ ಕೃಷ್ಣನಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಈ ವೇಳೆ, ಕಾರಾ ತಿಳಿ ನೀಲಿ ಬಣ್ಣದ ಫ್ರಾಕ್​ನಲ್ಲಿ ಗೋಚರಿಸಿದ್ದಾರೆ.

ಮತ್ತೊಂದು ಫೋಟೋದಲ್ಲಿ ಉಪಾಸನಾ ಮಗಳನ್ನು ತೊಡೆಯ ಮೇಲೆ ಕೂರಿಸಿಕೊಂಡು ದೇವರ ಭಜನೆಯಲ್ಲಿ ನಿರತರಾಗಿದ್ದಾರೆ. ಈ ಫೋಟೋದಲ್ಲಿ ನಟ ರಾಮ್​ ಚರಣ್​ ಕೂಡಾ ತಮ್ಮ ಮುದ್ದು ನಾಯಿ ಮರಿ ಜೊತೆಗೆ ದೇವರ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವೇಳೆ, ದೇವರ ಮನೆಯಲ್ಲಿ ಕೃಷ್ಣ ಪುಟ್ಟ ಪುಟ್ಟ ಹೆಜ್ಜೆ ಹಾಕಿರುವುದನ್ನು ಕಾಣಬಹುದಾಗಿದೆ.

ರಾಮ್​ಚರಣ್​ ಕುಟುಂಬ (ಉಪಾಸನಾ ಇನ್ಸ್​ಟಾಗ್ರಾಂ)

ಮೂರನೇ ಫೋಟೋದಲ್ಲಿ ಚಿರಂಜೀವಿ ಪತ್ನಿಆಗಿರುವ ಕಾರಾ ಅಜ್ಜಿ ಮೊಮ್ಮಗಳಿಗೆ ನಮಿಸುವ ಪಾಠ ಹೇಳಿಕೊಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಮಗಳನ್ನು ಉಪಾಸನಾ ಹಿಡಿದು ನಿಂತಿರುವುದನ್ನು ನೋಡಬಹುದು.

ಉಪಾಸನ ಇನ್ಸ್​ಟಾಗ್ರಾಂ
ಮಗಳ ಜೊತೆ ಉಪಾಸನಾ (ಉಪಾಸನಾ ಇನ್ಸ್​ಟಾಗ್ರಾಂ)

ಇತ್ತೀಚಿಗೆ ವರಮಹಾಲಕ್ಷ್ಮಿ ದಿನದ ಸಂಭ್ರಮದ ಫೋಟೋವನ್ನು ಉಪಾಸನಾ ಹಂಚಿಕೊಂಡಿದ್ದರು. ಮಗಳ ಜೊತೆಗೆ ವಿಶೇಷ ದಿನದ ಸಂಭ್ರಮದ ದಿನಗಳನ್ನು ಆಚರಣೆ ಮಾಡುವ ಉಪಾಸನಾ ಇವುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದನ್ನು ಮರೆಯುವುದಿಲ್ಲ.

ವೃತ್ತಿ ಜೀವನದೆಡೆಗೆ ನೋಡುವುದಾದರೆ, ನಟ ರಾಮ್​ ಚರಣ್​ ಅವರ ಬಹು ನಿರೀಕ್ಷಿತ ಚಿತ್ರ ಗೇಮ್​ ಚೇಂಜರ್​ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದಲ್ಲಿ ನಟಿ ಕಿಯಾರಾ ಅದ್ವಾನಿ ಅವರಿಗೆ ಜೊತೆಯಾಗಿದ್ದಾರೆ. ಚಿತ್ರದಲ್ಲಿ ರಾಮ್​ ಚರಣ್​ ಭ್ರಷ್ಟಚಾರದ ವಿರುದ್ಧ ಹೋರಾಡುವ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶಿವಣ್ಣನ ಅಭಿಮಾನಿಗಳಿಗೆ ಗುಡ್ ನ್ಯೂಸ್​!: 'ಭೈರತಿ ರಣಗಲ್'​​ ಬಿಡುಗಡೆಗೆ ಮುಹೂರ್ತ ಫಿಕ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.