ಬಾಲಿವುಡ್ ಕ್ಯೂಟ್ ಕಪಲ್ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಲವ್ ಬರ್ಡ್ಸ್ ವಿದೇಶದಲ್ಲಿ ಮದುವೆ ಆಗಲು ಯೋಜನೆ ರೂಪಿಸಿದ್ದರು. ಅದಾಗ್ಯೂ, ರಾಕುಲ್-ಜಾಕಿ ಮದುವೆ ಸುತ್ತಲಿನ ಸುದ್ದಿ ಬೇರೆ ಮಾಹಿತಿ ಕೊಟ್ಟಿದೆ. ಮದುವೆ ಸ್ಥಳದ ಬಗ್ಗೆ ಕೊನೆ ಕ್ಷಣದ ಬದಲಾವಣೆ ಆಗಿದೆ ಎಂಬ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಹಸೆಮಣೆ ಏರಲಿರುವ ಈ ಜೋಡಿಯು ವಿದೇಶದ ಯೋಜನೆಯನ್ನು ಕೈಬಿಟ್ಟಿದೆಯಂತೆ. ಸಾಗರೋತ್ತರ ಪ್ರದೇಶದ ಬದಲಿಗೆ ಭಾರತದಲ್ಲಿ ದಾಂಪತ್ಯ ಜೀವನ ಆರಂಭಿಸಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.
ಸರಿಸುಮಾರು ಮೂರು ವರ್ಷಗಳಿಂದ ಪ್ರೀತಿಯಲ್ಲಿರೋ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಅಂತಿಮವಾಗಿ ವೈವಾಹಿಕ ಜೀವನ ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಆರಂಭದಲ್ಲಿ ಈ ಲವ್ ಬರ್ಡ್ಸ್ ಫೆಬ್ರವರಿ 21 ರಂದು ಗೋವಾದಲ್ಲಿ ಹಾರ ಬದಲಾಯಿಸಿಕೊಳ್ಳಲಿದ್ದಾರೆ ಎಂದು ವರದಿಗಳು ತಿಳಿಸಿದ್ದವು. ಅದಾಗ್ಯೂ, ಇತ್ತೀಚಿನ ಅಪ್ಡೇಟ್ಸ್, ಅವರ ವಿವಾಹಕ್ಕೆ ಸಂಬಂಧಿಸಿದಂತೆ ಒಂದು ಟ್ವಿಸ್ಟ್ ಕೊಟ್ಟಿದೆ. ಅವರು ಮೂಲತಃ ವಿದೇಶದಲ್ಲಿ ಮದುವೆಯಾಗಲು ಉದ್ದೇಶಿಸಿದ್ದರಂತೆ. ಆದ್ರೀಗ ವಿದೇಶದ ಬದಲಿಗೆ ಭಾರತದಲ್ಲೇ ಮದುವೆಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಹಾಗಾದರೆ, ಈ ಬದಲಾವಣೆಗೆ ಕಾರಣವೇನು?
ವರದಿಗಳ ಪ್ರಕಾರ, ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಅವರ ವಿವಾಹ ಮಹೋತ್ಸವ ಎರಡು ದಿನಗಳ ಕಾಲ ನಡೆಯಲಿದೆ. ಫೆಬ್ರವರಿ 21 ರಂದು ಗೋವಾದಲ್ಲಿ ಕಾರ್ಯಕ್ರಮಗಳು ಪೂರ್ಣಗೊಳ್ಳಲಿವೆ. ಆರಂಭದಲ್ಲಿ ವಿದೇಶದಲ್ಲಿ ಅದ್ಧೂರಿ ಮದುವೆಗೆ ಪ್ಲಾನ್ ಮಾಡಿದ್ದ ಈ ಜೋಡಿ ಸುಮಾರು ಆರು ತಿಂಗಳಿಂದ ಈ ಕೆಲಸದಲ್ಲಿ ತೊಡಗಿದ್ದರು. ಆದ್ರೆ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ತಮ್ಮ ಪ್ಲಾನ್ ಬದಲಾಯಿಸಿದ್ದಾರೆ. ಶ್ರೀಮಂತ ಕುಟುಂಬಗಳು ಮತ್ತು ಸೆಲೆಬ್ರಿಟಿಗಳು ದೇಶದ ಗಡಿಯೊಳಗೆ ತಮ್ಮ ಭವ್ಯ ಸಮಾರಂಭಗಳನ್ನು ಆಯೋಜಿಸುವಂತೆ ಪ್ರಧಾನಿ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಜಾಕಿ-ರಾಕುಲ್ ಜೋಡಿಯ ಮದುವೆಯಲ್ಲಿ ಬದಲಾವಣೆಗಳಾಗಿವೆ.
ಇದನ್ನೂ ಓದಿ: ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಚಿರಂಜೀವಿ ಫೋಟೋ: ವಿಶೇಷವಾಗಿ ಅಭಿಮಾನ ಮೆರೆದ ಫ್ಯಾನ್ಸ್
ಸಿನಿಮಾ ವಿಚಾರ ಗಮನಿಸೋದಾದರೆ, ಜಾಕಿ ಭಗ್ನಾನಿ ಪ್ರಸ್ತುತ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರಂತಹ ಸ್ಟಾರ್‌ಗಳ ಬಡೇ ಮಿಯಾನ್ ಚೋಟೆ ಮಿಯಾನ್‌ನಂತಹ ಪ್ರಾಜೆಕ್ಟ್‌ಗಳನ್ನು ನಿರ್ಮಿಸುವಲ್ಲಿ ಬ್ಯುಸಿಯಾಗಿದ್ದಾರೆ. ರಾಕುಲ್ ಪ್ರೀತ್ ಸಿಂಗ್ ತಮಿಳು, ತೆಲುಗು, ಹಿಂದಿ ಸೇರಿ ಹಲವು ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ. ಇದರಲ್ಲಿ ಇಂಡಿಯನ್ 2 ಮತ್ತು ಅಯಾಲಾನ್‌ನಂತಹ ಬಹು ನಿರೀಕ್ಷಿತ ಚಿತ್ರಗಳು ಸಹ ಸೇರಿವೆ.
ಇದನ್ನೂ ಓದಿ: ಅವಮಾನ-ಆಕ್ರೋಶಕ್ಕೆ ಯಶಸ್ಸಿನ ಉತ್ತರ: ಬಿಗ್ ಬಾಸ್ ರನ್ನರ್ ಅಪ್ ಪ್ರತಾಪ್ ಪ್ರಯಾಣ ಮೆಚ್ಚಿದ್ರಾ?