ಹೈದರಾಬಾದ್: ಇತ್ತೀಚಿಗೆ ವಿವಾಹ ಬಂಧನಕ್ಕೆ ಒಳಗಾದ ಸ್ಟಾರ್ ದಂಪತಿಗಳಾದ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಹೊಸ ಸಂಸತ್ ಭವನಕ್ಕೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ. ಮಂಗಳ ತಮ್ಮ ಸಂಪತ್ ಭವನದ ಫೋಟೋ ಹಂಚಿಕೊಂಡಿರುವ ಅವರು ಮರೆಯಲಾಗದ ಕ್ಷಣ ಎಂದು ತಿಳಿಸಿದ್ದಾರೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಸಂಸತ್ ಭವನಕ್ಕೆ ಭೇಟಿ ನೀಡಿ ಆ ಫೋಟೋವನ್ನು ಹಂಚಿಕೊಂಡಿರುವ ಜಾಕಿ, ದೆಹಲಿಯಲ್ಲಿನ ಹೊಸ ಸಂಸತ್ ಭವನದಲ್ಲಿ ಮರೆಯಲಾಗದ ಕ್ಷಣ. ಪ್ರಜಾಪ್ರಭುತ್ವ ಮನೋಭಾವಕ್ಕೆ ಸಾಕ್ಷಿಯಾಗಿದೆ. ಸತ್ಯಮೇವ ಜಯತೆ ಜೈ ಹಿಂದ್ ಎಂದು ಬರೆದಿದ್ದಾರೆ. ಕಳೆದ ಮೇ ಅಲ್ಲಿ ಹೊಸದಾಗಿ ನಿರ್ಮಿತಗೊಂಡಿರುವ ಸಂಸತ್ ಭವನವನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದರು.
ಭಾರತದ ಹೊಸ ಸಂಸತ್ ಭವನ ತ್ರಿಕೋನಾಕೃತಿಯಲ್ಲಿರುವ ವಿಶಾಲ ವ್ಯಾಪ್ತಿಯ ಅದ್ಬುತ ವಿನ್ಯಾಸ ಮಾಡಲಾಗಿದೆ. ತ್ರಿಕೋನಾಕಾರದ ಕಟ್ಟಡದ ಮಧ್ಯೆ ಲ್ಯಾನ್ ಪ್ರದೇಶ ಒಳಗೊಂಡಿದೆ. ಲೋಕಸಭೆ, ರಾಜ್ಯಸಭೆ ಮತ್ತು ಸೆಂಟ್ರಲ್ ಲಾಂಜ್ ಅನ್ನು ಈ ಕಟ್ಟಡದಲ್ಲಿ ಕಾಣಬಹುದು. ಈ ಸಂಸತ್ ಭವನಕ್ಕೆ ರಾಜಸ್ಥಾನದ ಕೆಂಪು ಮತ್ತು ಬಿಳಿ ಮರಳುಗಲ್ಲು ಬಳಕೆ ಮಾಡಲಾಗಿದೆ. ಲೋಕಸಭೆಯ ಕೊಠಡಿಯೊಳಗೆ ಬಳಸಲಾದ ಕೇಸರಿಯಾ ಹಸಿರು ಕಲ್ಲು ಉದಯಪುರದಿಂದ ತರಿಸಲಾಗಿದೆ.
ಈ ಕಟ್ಟಡದ ಅಂದವನ್ನು ಇದೀಗ ಬಾಲಿವುಡ್ ಸ್ಟಾರ್ ಜೋಡಿಗಳು ಸವಿದಿದ್ದಾರೆ. ಇದೇ ವರ್ಷದ ಅಂದರೆ 2024ರ ಫೆಬ್ರವರಿ 21ರಂದು ಈ ಜೋಡಿ ಸಿಂಧಿ ಮತ್ತು ಸಿಖ್ ಸಂಪ್ರದಾಯದಂತೆ ವಿವಾಹ ಬಂಧನಕ್ಕೆ ಒಳಗಾಗಿತ್ತು. ಗೋವಾದಲ್ಲಿ ಮದುವೆಯಾದ ಈ ಕಾರ್ಯಕ್ರಮದಲ್ಲಿ ಜೋಡಿಗಳ ಕುಟುಂಬ ವರ್ಗ, ಆಪ್ತರು ಮತ್ತು ಬಾಲಿವುಡ್ ಕೆಲವು ಆಪ್ತರು ಭಾಗಿಯಾಗಿದ್ದರು. ಅದರಲ್ಲಿ ಪ್ರಮುಖ ಎಂದರೆ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಅರ್ಜುನ್ ಕಪೂರ್, ವರುಣ್ ಧವನ್ ಮತ್ತು ಈಶಾ ಡಿಯೋಲ್ ಆಗಿದ್ದಾರೆ. 2021ರಲ್ಲಿ ತಾವಿಬ್ಬರು ಸಂಬಂಧದಲ್ಲಿರುವುದಾಗಿ ಇವರು ಅಧಿಕೃತ ಪಡಿಸಿದ್ದರು.
ಇನ್ನು ವೃತ್ತಿ ವಿಚಾರದಲ್ಲಿ ನಟಿ ರಾಕುಲ್, ಇಂಡಿಯಾ 2 ಚಿತ್ರದಲ್ಲಿ ದಕ್ಷಿಣ ಭಾರತದ ಸೂಪರ್ಸ್ಟಾರ್ ಕಮಲ್ ಹಾಸನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಬಾಬಿ ಸಿಂಹ ಮತ್ತು ಪ್ರಿಯಾ ಭವಾನಿ ಶಂಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈ ಚಿತ್ರದ ಮೊದಲ ಭಾಗ 1996ರಲ್ಲಿ ಬಿಡುಗಡೆಯಾಗಿತ್ತು. ಭ್ರಷ್ಟಚಾರದ ವಿರುದ್ಧದ ಹೋರಾಟದ ಕಥೆಯನ್ನು ಈ ಸಿನಿಮಾ ಹೊಂದಿತ್ತು.
ಇದನ್ನೂ ಓದಿ: 'ಸಂತಸದ ಕ್ಷಣ': ಪದ್ಮಭೂಷಣ ಸ್ವೀಕರಿಸಿದ ಮಿಥುನ್ ಚಕ್ರವರ್ತಿ, ಉಷಾ ಉತ್ತುಪ್ ಹೇಳಿದ್ದಿಷ್ಟು