ಬೆಂಗಳೂರು : ಹೊಸ ವರ್ಷದ ಶುಭಾಶಯ ಕೋರಲು ಕಚೇರಿಗೆ ಹೂಗುಚ್ಛ, ಸಿಹಿ ತಿನಿಸುಗಳನ್ನು ತರದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಳೆದ ವರ್ಷವೂ ಸಹ ಹೊಸ ವರ್ಷಾಚರಣೆಗೆ ಶುಭ ಕೋರಲು ಹೂಗುಚ್ಛ, ಸಿಹಿ ತಿನಿಸುಗಳನ್ನು ತರದಂತೆ ಸೂಚಿಸಿದ್ದ ಅವರು, ಅದಕ್ಕಾಗಿ ವ್ಯಯಿಸುವ ಹಣದಲ್ಲಿ ನಿಮ್ಮ ವ್ಯಾಪ್ತಿಯ ಅನಾಥಾಶ್ರಮಳಿಗೆ ದಿನಸಿ, ಸಿಹಿ ತಿನಿಸು ಅಥವಾ ಊಟದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಅಲ್ಲದೆ ತಾವೂ ಸಹ ಅದನ್ನು ಅನುಸರಿಸುವ ಮೂಲಕ ಮಾದರಿಯಾಗಿದ್ದರು.
ಹೊಸ ವರುಷ; ಹೊಸ ಹರುಷ - ಮಕ್ಕಳ ಮುಖದ ಮಂದಹಾಸದೊಂದಿಗೆ ಪ್ರಾರಂಭ #BCPWelcomesNewYear2025 pic.twitter.com/gdvshARZqk
— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr) January 1, 2025
ಈ ಬಾರಿಯೂ ಸಹ ಅಧಿಕಾರಿಗಳು, ಸಿಬ್ಬಂದಿಗೆ ತಮ್ಮ ವ್ಯಾಪ್ತಿಯಲ್ಲಿರುವ ಅನಾಥಾಶ್ರಮ ವೃದ್ಧಾಶ್ರಮ, ವಿಕಲಚೇತನರ ಶಾಲೆ ಮತ್ತಿತರ ಕಡೆಗಳಿಗೆ ಅವರ ಕೈಲಾದ ಸಹಾಯ ಮಾಡುವಂತೆ ಸೂಚಿಸಿರುವ ಆಯುಕ್ತರು, ಖುದ್ದು ತಾವೇ ಅನಾಥಶ್ರಮದ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ವರ್ಷಾಚರಣೆಯ ಸಂಭ್ರಮ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಹಂಪಿಯ ಮಾತಂಗ ಪರ್ವತದಿಂದ ವರ್ಷದ ಮೊದಲನೇ ದಿನದ ಸೂರ್ಯೋದಯ ಕಣ್ತುಂಬಿಕೊಂಡ ಪ್ರವಾಸಿಗರು - 2025 FIRST SUNRISE