ETV Bharat / entertainment

ಎಕಾನಮಿ ಕ್ಲಾಸ್‌ನಲ್ಲಿ ಸೂಪರ್​ ಸ್ಟಾರ್ ರಜನಿಕಾಂತ್​ ಪ್ರಯಾಣ: ವಿಡಿಯೋ ಹಂಚಿಕೊಂಡ ನಟ ಜೀವ - ರಜನಿಕಾಂತ್ ವಿಡಿಯೋ

ನಟ ರಜನಿಕಾಂತ್ ಫ್ಲೈಟ್​ನ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡಿದ್ದು, ಫೋಟೋ-ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Rajinikanth Flies Economy
ಎಕಾನಮಿ ಕ್ಲಾಸ್‌ನಲ್ಲಿ ರಜನಿಕಾಂತ್​
author img

By ETV Bharat Karnataka Team

Published : Mar 1, 2024, 1:47 PM IST

ಭಾರತೀಯ ಚಿತ್ರರಂಗದ ಜನಪ್ರಿಯ ನಟ ರಜನಿಕಾಂತ್ ಅವರು ಆಂಧ್ರಪ್ರದೇಶದ ಕಡಪದಿಂದ ವಿಮಾನಯಾನ ಕೈಗೊಂಡಿದ್ದರು. ಪ್ರಯಾಣದ ಫೋಟೋ-ವಿಡಿಯೋಗಳು ಸೋಷಿಯಲ್​​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಸೂಪರ್​ ಸ್ಟಾರ್ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡಿದ್ದು, ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ನಟ ಜೀವ ಕೂಡ ಸೋಷಿಯಲ್​ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ನಟ ರಜನಿಕಾಂತ್ ಫ್ಲೈಟ್​ನ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡಿರುವ ವಿಡಿಯೋ ಆನ್​ಲೈನ್​​ನಲ್ಲಿ ವೈರಲ್​ ಆಗಿದೆ. ವಿಡಿಯೋಗಳಲ್ಲಿ, ಅಭಿಮಾನಿಗಳೊಂದಿಗೆ ನಟ ಮಾತನಾಡುತ್ತಿರುವುದನ್ನು ಕಾಣಬಹುದು. ತಮ್ಮ ಮೆಚ್ಚಿನ ನಟನನ್ನು ಬಹಳ ಹತ್ತಿರದಿಂದ ಕಂಡ ಅಭಿಮಾನಿಗಳು ಬಹಳ ಸಂತಸಗೊಂಡಿದ್ದಾರೆ. ಅಭಿಮಾನಿಗಳ ಪೈಕಿ ನಟ ಜೀವ ಕೂಡ ಓರ್ವರಾಗಿದ್ದರು. ರಜನಿಕಾಂತ್ ಅಭಿಮಾನಿಗಳೊಂದಿಗೆ ಪ್ರಯಾಣ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ 2023ರಲ್ಲಿ, ಜೈಲರ್ ಸಿನಿಮಾ ಬಿಡುಗಡೆಗೆ ಮುನ್ನ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಕಂಡ ಪ್ರಯಾಣಿಕರು ಸಂತಸಗೊಂಡಿದ್ದರು. ಅತ್ಯಂತ ಜನಪ್ರಿಯ ನಟನೊಂದಿಗೆ ಕೆಲ ಉತ್ತಮ ಕ್ಷಣಗಳನ್ನು ಕಳೆದಿದ್ದರು.

ಚೆನ್ನೈಗೆ ಆಗಮಿಸಿದ ನಂತರ, ಮಹಿ ವಿ ರಾಘವ್ ಅವರ ಯಾತ್ರಾ 2 ಖ್ಯಾತಿಯ ನಟ ಜೀವ, ರಜನಿಕಾಂತ್ ಅವರೊಂದಿಗಿನ ಫೋಟೋ - ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇನ್​​ಸ್ಟಾ ಪೋಸ್ಟ್ ಶೇರ್ ಮಾಡಿದ ರಜನಿಕಾಂತ್​ ಅಭಿಮಾನಿಯೂ ಆಗಿರುವ ನಟ ಜೀವ, "ಸೂಪರ್‌ ಸ್ಟಾರ್ ರಜನಿಕಾಂತ್ ಸರ್ ಅವರೊಂದಿಗೆ ಪ್ರಯಾಣ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರೆಗ್ನೆನ್ಸಿ ಅನೌನ್ಸ್​​ಮೆಂಟ್​​ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ದೀಪ್​ವೀರ್​ - ವಿಡಿಯೋ

ರಜನಿಕಾಂತ್​ ಸಿನಿಮಾ ವಿಚಾರಕ್ಕೆ ಬಂದರೆ, ಕೊನೆಯದಾಗಿ ಮಗಳು ಐಶ್ವರ್ಯಾ ನಿರ್ದೇಶನದ 'ಲಾಲ್ ಸಲಾಮ್​​'ನಲ್ಲಿ ಕಾಣಿಸಿಕೊಂಡರು. ಸದ್ಯ ಟಿ.ಜೆ ಜ್ಞಾನವೆಲ್ ಅವರ ವೆಟ್ಟೈಯಾನ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಮತ್ತು ದುಶಾರಾ ವಿಜಯನ್ ಅವರಂತಹ ಸ್ಟಾರ್ ನಟರು ಕೂಡ ಈ ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಖ್ಯಾತ ಗಾಯಕ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದು, ಈ ತಿಂಗಳೊಳಗೆ ಚಿತ್ರೀಕರಣ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: ಅಂತಿಮ ಹಂತದಲ್ಲಿ 'ವೆಟ್ಟೈಯನ್' ಶೂಟಿಂಗ್: ಪೊಲೀಸ್​​ ಸಮವಸ್ತ್ರದಲ್ಲಿ ರಜನಿಕಾಂತ್-ವಿಡಿಯೋ

ಇತ್ತೀಚೆಗಷ್ಟೇ ವೆಟ್ಟೈಯನ್‌ ಸೆಟ್​​ನ ವಿಡಿಯೋವೊಂದು ವೈರಲ್​ ಆಗಿತ್ತು. ಅದರಲ್ಲಿ ರಜನಿ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದರು. ವೆಟ್ಟೈಯನ್‌ ಸೆಟ್‌ಗೆ ಕಾರಿನಲ್ಲಿ ಆಗಮಿಸುತ್ತಿರುವ ವಿಡಿಯೋ ಅದಾಗಿದ್ದು, ಮೆಚ್ಚಿನ ನಟನನ್ನು ಕಂಡ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ನಟ ಕೂಡ ಅಭಿಮಾನಿಗಳತ್ತ ಕೈ ಬೀಸಿ, ಮುಗುಳ್ನಗೆ ಬೀರಿದ್ದರು. ಈ ವಿಡಿಯೋ ಆನ್​​ಲೈನ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.