ಅಂತೂ ಇಂತೂ ಬಿಗ್ ಬಾಸ್ನ ಪ್ರೋಮೋ ಅನಾವರಣಗೊಂಡಿದೆ. ರಜತ್ ಅವರಿಗೆ ಎಚ್ಚರಿಕೆ ಕೊಡಲಾಗಿದೆ. ನಗುಮೊಗದಲ್ಲೇ ಸುದೀಪ್ ಅವರು ವೈಲ್ಡ್ ಕಾರ್ಡ್ ಸ್ಪರ್ಧಿ ತಪ್ಪಿಗೆ ಬರೆ ಎಳೆದಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಅಪಾರ ಸಂಖ್ಯೆಯ ಪ್ರೇಕ್ಷಕರ ಕಾತರ ಹೆಚ್ಚಾಗಿದೆ.
''ರಜತ್ ಕಿವಿ ಮುಟ್ಟಿದ್ಯಾ ಎಚ್ಚರಿಕೆ ಗಂಟೆಯ ಸದ್ದು?'' ವಾರದ ಕಥೆ ಕಿಚ್ಚನ ಜೊತೆ. ಇಂದು ರಾತ್ರಿ 9 ಗಂಟೆಗೆ ಎಂಬ ಕ್ಯಾಪ್ಷನ್ನೊಂದಿಗೆ ಕನ್ನಡದ ಜನಪ್ರಿಯ ಕಿರುತೆರೆ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11'ರ ಹೊಸ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ನಯವಾಗೇ ರಜತ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಸುದೀಪ್ ಪ್ರಶ್ನೆಗಳ ಮಳೆ ಸುರಿಸಿದ್ದು, ಅಂದು ಆರ್ಭಟಿಸಿದ್ದ ರಜತ್ ಬಳಿ ಉತ್ತರವೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾದಂತಿದೆ.
ಪ್ರೋಮೋದಲ್ಲಿ, ''ರಜತ್, ಕನ್ನಡದಲ್ಲಿ ತುಂಬಾ ಇದೆ ಸರ್ ಮಾತನಾಡಲು. ನಿಮ್ಮೆಲ್ಲರಿಗೂ ಕೆಲ ತೂಕಗಳಿವೆ ಸರ್'' ಎಂದು ನಿರೂಪಕ ಸುದೀಪ್ ತಿಳಿಸಿದ್ದು, ''ಅವರು ಯಾವಾಗ ಎದೆಗೆ ಎದೆ ಕೊಟ್ಟು ನನ್ನತ್ರ ಮಾತಾಡಿದ್ರೋ, ಅದನ್ನು ನನ್ನತ್ರ ತಡೆದುಕೊಳ್ಳಲಾಗಿಲ್ಲ. ಮಾತಿನ ಭರದಲ್ಲಿ ಬಂತು'' ಅಂತಾ ರಜತ್ ತಿಳಿಸಿದ್ದಾರೆ. 'ಫೈನಲ್ ಆಗಿ ಬುಡ ಎಲ್ಲಿಂದ ಸ್ಟಾರ್ಟ್ ಆಯ್ತು ಅಂದ್ರೆ ರಜತ್ ಅವ್ರೇ?' ಎಂದು ಸುದೀಪ್ ಪ್ರಶ್ನಿಸಿದ್ದು, ರಜತ್ ಬಳಿ ಉತ್ತರವಿಲ್ಲ.
'ನನಗೆ ಕೋಪ ಬಂದಾಗ ಇಂಥದ್ದೇ ನನ್ನ ಬಾಯಿಗೆ ಬರೋದು ಅಂತಾ ಹೇಳಿದ್ರಿ. ಈಗ ಅದುನ್ನೇ ವಾಪಸ್ ರಿಪೀಟ್ ಮಾಡಿ ನನ್ ಮುಂದೆ, ಏನ್ ಹೇಳಿದ್ರಿ ಹೇಳಿ, ಯಾಕೆ ಅದನ್ನು ಈಗ ಹೇಳೋಕೆ ಆಗ್ತಿಲ್ಲ' ಎಂದು ಸುದೀಪ್ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ದಾರೆ. ಉತ್ತರವಿರದ ರಜತ್ ಇನ್ನೊಮ್ಮೆ ಆ ತಪ್ಪನ್ನು ರಿಪೀಟ್ ಮಾಡಲ್ಲ ಎಂದು ತಿಳಿಸಿದ್ದಾರೆ. ಈ ಮಾತಿಗೆ ನಗುವಲ್ಲೇ ಉತ್ತರ ಕೊಟ್ಟ ಕಿಚ್ಚ, ನೆಕ್ಸ್ಟ್ ಟೈಮ್ ಅಲ್ಲೊಂದು ಬಾಗಿಲು ಇದೆ ಹೊರಗಡೆ ಹೋಗೋಕೆ ಎಂದು ತಿಳಿಸುತ್ತಿದ್ದಂತೆ ಬಿಗ್ ಬಾಸ್ ಮನೆಯ ಮುಖ್ಯದ್ವಾರವನ್ನು ಈ ಪ್ರೋಮೋದಲ್ಲಿ ತೋರಿಸಲಾಗಿದೆ. ಅವಾಚ್ಯ ಶಬ್ದ ಬಳಸಿ ಆರ್ಭಟಿಸಿದ್ದ ರಜತ್ ಕಿಶನ್ ಅವರಿಗೆ ಇಂದು ಬೆವರಿಳಿದ ಅನುಭವ ಆಗಿರಬಹುದೆಂದು ಪ್ರೇಕ್ಷಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಚಿತ್ರರಂಗದಲ್ಲಿ 5 ದಶಕ: ನೂರಾರು ಸಿನಿಮಾಗಳು; ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನ; ಪ್ರತಿಭೆಗೆ ಸಂದಿವೆ ಪ್ರಶಸ್ತಿಗಳು
ಇದಕ್ಕೂ ಮುನ್ನ, ''ವರ್ಚಸ್ಸಿಗೂ ವ್ಯಕ್ತಿತ್ವಕ್ಕೂ ಕನ್ನಡಿ ಹಿಡಿಯೋಕೆ ಬಂದ್ರು ಕಿಚ್ಚ ಸುದೀಪ! ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಪ್ರಸಾರ'' ಎಂಬ ಶೀರ್ಷಿಕೆಯಡಿ ಮೊದಲ ವೀಕೆಂಡ್ ಶೋನ ಮೊದಲ ಪ್ರೋಮೋ ಅನಾವರಣಗೊಂಡಿತ್ತು. ''ಒಬ್ಬ ಮನುಷ್ಯನ ಬಾಯಿಂದ ಬರುವ ಪದಗಳು ಬರಿ ಮಾತಲ್ಲ, ಅವನ ವ್ಯಕ್ತಿತ್ವದ ವರ್ಚಸ್ಸು. ಒಂದು ಮಾತು ಗೆಲುವಿನ ಪಟ್ಟಾನು ಏರಿಸುತ್ತೆ, ಒಂದು ಮಾತು ಸೋಲಿನ ದಾರೀನೂ ಹಿಡಿಸುತ್ತೆ'' ಎಂದು ಸುದೀಪ್ ತಿಳಿಸಿದ್ದರು. ಇದು ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕಾತರವನ್ನು ಹೆಚ್ಚಿಸಿತ್ತು. ಕೆಲವೇ ಕ್ಷಣಗಳ ಅಂತರದಲ್ಲಿ ಅನಾವರಣಗೊಂಡ ಮತ್ತೊಂದು ಪ್ರೋಮೋ ವೀಕ್ಷಕರ ಕಾತರವನ್ನು ದುಪ್ಪಟ್ಟುಗೊಳಿಸಿದೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದ ಶ್ರೀಲೀಲಾ: 'ಕಿಸ್ಸಿಕ್' ಪ್ರೋಮೋ ನೋಡಿದ್ರಾ?
ಇತ್ತೀಚೆಗೆ ಟಾಸ್ಕ್ ಒಂದರಲ್ಲಿ ಭಾಗಿಯಾಗಿದ್ದ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಮತ್ತು ಗೋಲ್ಡ್ ಸುರೇಶ್ ನಡುವೆ ಗಲಾಟೆ ನಡೆದಿತ್ತು. '...... ಮಗನೇ' ಎಂಬಂತಹ ಕೆಲ ಅವಾಚ್ಯ ಶಬ್ದಗಳನ್ನು ರಜತ್ ಅವರು ಬಳಕೆ ಮಾಡಿದ್ದರು. ಕಳಪೆ ಪ್ರದರ್ಶನಕ್ಕೆ ಹೆಸರು ಸೂಚಿಸುವ ಕ್ಷಣ ಬಂದಾಗ, ಮನೆಯವರು ರಜತ್ ಅವರ ಈ ನಡುವಳಿಕೆಯನ್ನು ಉಲ್ಲೇಖಿಸಿ ಅವರ ಹೆಸರನ್ನು ಸೂಚಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ರಜತ್, ಇದಕ್ಕಿಂತ ಇನ್ನೂ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆ, ನಾನಿರೋದೇ ಹೀಗೆ ಎಂದು ತಿಳಿಸಿದ್ದರು. ಅಂತಿಮವಾಗಿ ವೈಲ್ಡ್ ಕಾರ್ಡ್ ಸ್ಪರ್ಧಿಯ ಆರ್ಭಟಕ್ಕೆ ಬಿಸಿ ಮುಟ್ಟಿದೆ.