ETV Bharat / entertainment

ಮುಮ್ಮುಟ್ಟಿ ಜೊತೆಗೆ ನಟ ರಾಜ್​ ಬಿ ಶೆಟ್ಟಿ; ಬಿಡುಗಡೆಯಾಯ್ತು ಕನ್ನಡದ ನಟನ ಮಲಯಾಳಂ ಚಿತ್ರದ ಟ್ರೈಲರ್​ - RAJ B shetty malayalam Movie - RAJ B SHETTY MALAYALAM MOVIE

ಮಲಯಾಳಂನ ಖ್ಯಾತ ನಟ ಮುಮ್ಮುಟ್ಟಿ ಅವರೇ ಸ್ವತಃ ನಿರ್ಮಿಸಿ, ನಟಿಸುತ್ತಿರುವ 'ಟರ್ಬೋ' ಚಿತ್ರದಲ್ಲಿ ನಟ ರಾಜ್​ ಬಿ ಶೆಟ್ಟಿ ನಟಿಸುತ್ತಿದ್ದಾರೆ.

RAJ B shetty malayalam Movie with Mamootty trubo trailer released
RAJ B shetty malayalam Movie with Mamootty trubo trailer released (ಟರ್ಬೋ ಟ್ರೈಲರ್​ ಬಿಡುಗಡೆ ಕಾರ್ಯಕ್ರಮ)
author img

By ETV Bharat Karnataka Team

Published : May 13, 2024, 12:15 PM IST

ಬೆಂಗಳೂರು: ತಮ್ಮ ವಿಶಿಷ್ಟ ಅಭಿನಯ ಮತ್ತು ಅದ್ಭುತ ನಿರ್ದೇಶನದ ಮೂಲಕ ಸದ್ದು ಮಾಡಿರುವ ನಟ ರಾಜ್​ ಬಿ ಶೆಟ್ಟಿ. ಗರುಡ ಗಮನ ವೃಷಭ ವಾಹನದಂತಹ ಮಾಸ್ ಚಿತ್ರ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೇ ಎಂಬ ಕ್ಲಾಸ್ ಚಿತ್ರಗಳಲ್ಲಿ ನಟಿಸುವ ಮೂಲಕ ದೇಶದೆಲ್ಲೆಡೆ ತಮ್ಮದೇ ಆದ ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ. ಈ ಪ್ರತಿಭಾವಂತ ನಟ ಮಲಯಾಳಂನಲ್ಲಿ ನಟಿಸುತ್ತಿರುವ ಸುದ್ದಿ ಈ ಹಿಂದೆ ಸದ್ದು ಮಾಡಿತ್ತು. ಅಲ್ಲದೇ, ಮಲಯಾಳಂ ಚಿತ್ರತಂಡ ಕೂಡ ನಟನಿಗೆ ತಮ್ಮ ಚಿತ್ರತಂಡಕ್ಕೆ ಸ್ವಾಗತ ಕೋರಿತು. ಈ ಮೂಲಕ ರಾಜ್​ ಮಲಯಾಳಂನಲ್ಲಿ ಮಿಂಚಲು ಸಜ್ಜಾಗಿರುವ ಸುದ್ದಿ, ಅನೇಕ ಕನ್ನಡಿಗರಲ್ಲೂ ಸಂತೋಷ ತಂದಿತು. ಇದೀಗ ಈ ಚಿತ್ರತಂಡದ ಟ್ರೈಲರ್​ ಬಿಡುಗಡೆಯಾಗಿದೆ.

ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ
ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ (ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ)

ಮಲಯಾಳಂನ ಖ್ಯಾತ ನಟ ಮುಮ್ಮುಟ್ಟಿ ಅವರೇ ಸ್ವತಃ ನಿರ್ಮಿಸಿ, ನಟಿಸುತ್ತಿರುವ 'ಟರ್ಬೋ' ಚಿತ್ರದಲ್ಲಿ ನಟ ರಾಜ್​ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಈ ಚಿತ್ರದನಲ್ಲಿ ನಟ ರಾಜ್​ ಬಿ ಶೆಟ್ಟಿ ವಿಶೇಷ ಪಾತ್ರದಲ್ಲಿ ಮಿಂಚಲಿದ್ದು, ಯಾವ ಪಾತ್ರ, ಹೇಗಿರಲಿದೆ ಕಥೆ ಎಂಬ ಕುತೂಹಲ ಇದೀಗ ಎಲ್ಲ ಪ್ರೇಕ್ಷಕರಲ್ಲೂ ಮೂಡಿದೆ.

'ಟರ್ಬೋ' ಚಿತ್ರದ ಟ್ರೈಲರ್​ ಬಿಡುಗಡೆ ಕಾರ್ಯಕ್ರಮ ಮೇ 14ರಂದು ದುಬೈನಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಟ ರಾಜ್​ ಬಿ ಶೆಟ್ಟಿ ಕೂಡ ಭಾಗಿಯಾಗಿ, ಗಮನ ಸೆಳೆದರು. ಚಿತ್ರದಲ್ಲಿ ನಟ ರಾಜ್​ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ, ಗ್ಯಾಂಗ್​ಸ್ಟರ್​ ಪಾತ್ರದಲ್ಲಿ ಕಂಡು ಬಂದಿದ್ದಾರೆ.

  • " class="align-text-top noRightClick twitterSection" data="">

ಈ ಚಿತ್ರವನ್ನು ಪುಲಿಮುರುಗನ್, ಮಧುರೈ ರಾಜದಂತಹ ಸೂಪರ್ ಡೂಪರ್ ಚಿತ್ರಗಳನ್ನು ನೀಡಿದ ನಿರ್ದೇಶಕರಾದ ವೈಶಾಕ್ ನಿರ್ದೇಶನ ಮಾಡಿದ್ದಾರೆ. ಖ್ಯಾತ ಬರಹಗಾರರಾಂತ ಮಿಥುನ್ ಮ್ಯಾನುವಲ್ ಥಾಮಸ್ ಅವರು ಕಥೆ ಬರೆದಿದ್ದಾರೆ. ಮುಮ್ಮುಟ್ಟಿಯವರ ಒಡೆತನದ 'ಮುಮ್ಮುಟ್ಟಿ ಕಂಪನಿ' ಈ ಚಿತ್ರ ನಿರ್ಮಾಣಕ್ಕೆ ಹಣ ಹೂಡಿದೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಅಂಜನ ಜಯಪ್ರಕಾಶ್, ತೆಲುಗಿನ ಸುನಿಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಇನ್ನಿತರರ ದೊಡ್ಡ ತಾರಾಗಣವೇ ಇರಲಿದೆ.

ಈ ಚಿತ್ರವನ್ನು ಕನ್ನಡದಲ್ಲಿ ರಾಜ್ ಬಿ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಾದ 'ಲೈಟರ್ ಬುದ್ಧ ಫಿಲಂಸ್' ಹಂಚಿಕೆ ಮಾಡುತ್ತಿದೆ.

ಇದನ್ನೂ ಓದಿ: ಸ್ವಾತಿ ಮುತ್ತಿನ ಮಳೆ ಹನಿಯೇ' ಕಥೆ ಹುಟ್ಟಿದ್ದು ಹೇಗೆ?: ರಾಜ್​.ಬಿ ಶೆಟ್ಟಿ ಕೊಟ್ರು ಉತ್ತರ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.