ETV Bharat / entertainment

ಮುಂಗಾರಿನ ಜಿಟಿ ಜಿಟಿ ಮಳೆಗೆ ಟೀ, ಬಜ್ಜಿ; ಜೊತೆಗಿಂದಿಷ್ಟು ಸಿನಿಮಾ! - Rainy Season Feel Good Movies - RAINY SEASON FEEL GOOD MOVIES

ಮುಂಗಾರು ಮಳೆಯನ್ನು ಇನ್ನೂ ಹೆಚ್ಚು ಆನಂದಿಸಲು ಬಯಸುವಿರಾ? ಈ ಫೀಲ್ ಗುಡ್ ಸಿನಿಮಾಗಳು ನಿಮ್ಮ ಜೊತೆಗಿರಲಿ.

MUNGARU MALE  PREMAM  GOOD LOVE MOVIES  OTT PLATFORM
ಮುಂಗಾರು ಮಳೆಗೊಂದಿಷ್ಟು ಫೀಲ್ ಗುಡ್ ಸಿನಿಮಾಗಳು (ಸಂಗ್ರಹ ಚಿತ್ರ)
author img

By ETV Bharat Karnataka Team

Published : Jun 21, 2024, 8:20 PM IST

ಜಿಟಿ ಜಿಟಿ ಮಳೆ, ಬಿಸಿ ಬಿಸಿ ಚಾಯ್, ಜೊತೆಗೊಂದಿಗಿಷ್ಟು ಗರಂ ಮಿರ್ಚಿ. ವಾಹ್! ಇದರ ಮಜಾನೇ ಬೇರೆ. ಮಳೆ ತರುವ ಆಹ್ಲಾದ ವಾತಾವರಣಕ್ಕೆ ಅನುಗುಣವಾಗಿ ಮನೆಯೊಳಗಿನ ಟಿವಿಯಲ್ಲಿ ಮನಸ್ಸಿಗೆ ಖುಷಿ ಕೊಡುವ ಸಿನಿಮಾಗಳೂ ಬರುತ್ತಿದ್ದರೆ?. ಹೌದು. ಈ ಮಾನ್ಸೂನ್ ಸೀಸನ್‌ನಲ್ಲಿ ಕನ್ನಡ ಚಲನಚಿತ್ರಗಳೊಂದಿಗೆ ದಕ್ಷಿಣ ಭಾರತದ ದಿ ಬೆಸ್ಟ್‌ ಅನ್ನಿಸುವ ​ಸಿನಿಮಾಗಳು ನಿಮ್ಮನ್ನು ಉತ್ತಮ ಮೂಡ್‌ಗೆ ಕರೆದೊಯ್ಯಬಹುದು. ಅಂಥ ಸುಮಧುರ ಸಿನಿಮಾಗಳ ಸಣ್ಣದೊಂದು ಪಟ್ಟಿ ಇಲ್ಲಿದೆ ನೋಡಿ.

ಮುಂಗಾರು ಮಳೆ (ಡಿಸ್ನಿ+ ಹಾಟ್‌ಸ್ಟಾರ್): 2006ರ ಡಿಸೆಂಬರ್​ ಕೊನೆ ವಾರದಲ್ಲಿ ಗಣೇಶ್‌ ಅಭಿನಯದ 'ಮುಂಗಾರು ಮಳೆ' ಸಿನಿಮಾ ರಾಜ್ಯಾದ್ಯಂತ ತೆರೆಕಂಡಿತ್ತು. ಯೋಗರಾಜ್‌ ಭಟ್‌ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಚಿತ್ರ ಸಂಪೂರ್ಣ ಹೊಸತನದಿಂದ ಕೂಡಿತ್ತು. ಹಾಗಾಗಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಪೂಜಾ ಗಾಂಧಿ ಸ್ಯಾಂಡಲ್‌ವುಡ್‌ಗೆ ಪರಿಚಿತರಾದರು. ಇಬ್ಬರ ಜೋಡಿ ಜನರಿಗಿಷ್ಟವಾಯಿತು. ಎಷ್ಟು ಬಾರಿ ನೋಡಿದರೂ ಬೇಸರ ತರಿಸಿದ ಸಿನಿಮಾ ಮುಂಗಾರು ಮಳೆಯೆಂದು ಜನಜನಿತವಾಯಿತು.

ದೃಶ್ಯ- ಫಸ್ಟ್​ ಆ್ಯಂಡ್​ ಸೆಕೆಂಡ್​ ಪಾರ್ಟ್ (ಜೀ5)​: ರವಿಚಂದ್ರನ್​ ನಟನೆಯ 'ದೃಶ್ಯ' 2014ರಲ್ಲಿ ಬಿಡುಗಡೆಯಾಗಿ ಮೋಡಿ ಮಾಡಿತು. ಒಂದು ಮರ್ಡರ್​ ಮಿಸ್ಟರಿ ಕಥೆಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದವರು ನಿರ್ದೇಶಕ ಪಿ.ವಾಸು. ರವಿಚಂದ್ರನ್​, ನವ್ಯಾ ನಾಯರ್​, ಆರೋಹಿ ನಾರಾಯಣ್​ ಮುಂತಾದವರಿದ್ದ ಈ ಸಿನಿಮಾದ ಕ್ಲೈಮ್ಯಾಕ್ಸ್‌ಗೆ ಪ್ರೇಕ್ಷಕರು ಅಚ್ಚರಿಗೊಂಡಿದ್ದರು. ಚಿತ್ರದ 2ನೇ ಪಾರ್ಟ್ ಸಹ​ ರಿಲೀಸ್​ ಆಗಿದ್ದು, 'ದೃಶ್ಯ 2' ಸಿನಿಮಾದಲ್ಲೂ ಅದೇ ಪಾತ್ರಧಾರಿಗಳು ಮುಂದುವರಿದರು. ಈ ಸಿನಿಮಾದ ಕ್ಲೈಮ್ಯಾಕ್ಸ್​ ಇನ್ನಷ್ಟು ಥ್ರಿಲ್​ ನೀಡುತ್ತದೆ. ಇದೂ ಸಹ ಮಳೆಗಾಲದಲ್ಲಿ ನೋಡುವ ಒಂದು ಥ್ರಿಲ್ಲರ್​.

ತಾಜ್ ಮಹಲ್ (ಸನ್ NXT): ಇದರಲ್ಲಿ ಅಜಯ್ ರಾವ್ ನಾಯಕನಾಗಿ, ಪೂಜಾ ಗಾಂಧಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಆರ್.ಚಂದ್ರು ನಿರ್ದೇಶನ ಮತ್ತು ಜಿ.ಅಭಿಮಾನ್ ರಾಯ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಹಳ್ಳಿಯಿಂದ ಉನ್ನತ ವ್ಯಾಸಂಗಕ್ಕಾಗಿ ಪಟ್ಟಣಕ್ಕೆ ಬಂದ ಬಡ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪ್ರೀತಿಯಲ್ಲಿ ಬೀಳುತ್ತಾನೆ. ಹೀಗೆ ಪ್ರೀತಿಯಲ್ಲಿ ಸಿಲುಕಿ ಪ್ರೀತಿ ಮತ್ತು ಶಿಕ್ಷಣ ಎರಡರಲ್ಲೂ ವಿಫಲವಾಗಿ ತನ್ನ ಹಳ್ಳಿಗೆ ಮರಳುವಾಗ ಅಪಘಾತಕ್ಕೀಡಾಗಿ ನಿಧನವಾಗುತ್ತಾನೆ. ಮುಂದೇನಾಗುತ್ತೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು.

ಹ್ಯಾಪಿ ಡೇಸ್ (ಅಮೆಜಾನ್ ಪ್ರೈಮ್ ವಿಡಿಯೋ): 'ಹ್ಯಾಪಿ ಡೇಸ್' ಸಿನಿಮಾವನ್ನು ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ. 8 ಜನ ಸ್ನೇಹಿತರ ನಡುವಿನ ದೃಶ್ಯಗಳು, ಯಾವುದೋ ಒಂದು ವಿಷಯದೊಂದಿಗೆ ಕನೆಕ್ಟ್ ಆಗುವ ಸನ್ನಿವೇಶಗಳು ಪ್ರೇಕ್ಷಕರನ್ನು ತಮ್ಮ ಕಾಲೇಜು ದಿನಗಳಿಗೆ ಮರಳಿಸಬಲ್ಲದು.

ಪ್ರೇಮಂ(ಡಿಸ್ನಿ+ ಹಾಟ್‌ಸ್ಟಾರ್): ಹದಿಹರೆಯ, ಕಾಲೇಜು, ಯೌವನ ಈ ಮೂರು ಹಂತಗಳಲ್ಲಿ ಜಾರ್ಜ್ ಎಂಬ ವ್ಯಕ್ತಿಯ ಕಥೆಗಳನ್ನು ಪ್ರೇಮಂ ತೋರಿಸುತ್ತದೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಿಗುವ ಯಾವುದೇ ಫ್ಲೇವರ್ ಅನ್ನು ಮಿಸ್ ಮಾಡದ ಒಳ್ಳೆಯ ಫೀಲ್ ಗುಡ್ ಸಿನಿಮಾ ಇದು. ಪ್ರೇಕ್ಷಕರನ್ನು ಮತ್ತೆ ಮತ್ತೆ ಥಿಯೇಟರ್​ಗೆ ಕರೆತಂದ ಈ ಚಿತ್ರ ತೆಲುಗಿಗೂ ರಿಮೇಕ್ ಆಗಿ ಸೂಪರ್ ಹಿಟ್ ಆಗಿತ್ತು.

ಕಾದಲಿಲ್​​ ಸೊಡಪ್ಪುವದ್ದು ಎಪ್ಪಿಡಿ (ಡಿಸ್ನಿ+ ಹಾಟ್‌ಸ್ಟಾರ್): ತಮಿಳಿನ ಕಾದಲಿಲ್​​ ಸೊಡಪ್ಪುವದ್ದು ಎಪ್ಪಿಡಿ ತೆಲುಗಿನಲ್ಲಿ 'ಲವ್ ಫೇಲ್ಯೂರ್' ಎಂದು ಡಬ್ ಮಾಡಿ ಬಿಡುಗಡೆಯಾಗಿತ್ತು. ಸಿದ್ಧಾರ್ಥ್ ಮತ್ತು ಅಮಲಾ ಪೌಲ್ ಯುವ ಜೋಡಿಯಾಗಿ ಅರುಣ್ ಮತ್ತು ಪಾರ್ವತಿಯಾಗಿ ನಟಿಸಿದ್ದರು. ಮನೆಯ ಸಮಸ್ಯೆಗಳಿಂದಾಗಿ ಹೋರಾಡುತ್ತಿರುವಾಗ ಪಾರ್ವತಿ ತನ್ನ ಗೆಳೆಯ ಸಿದ್ಧಾರ್ಥನನ್ನು ಹೇಗೆ ನಡೆಸಿಕೊಳ್ಳುತ್ತಾಳೆ ಎಂಬುದೇ ಹೂರಣ.

ಅಯಲುಂ ನಾನುಂ ತಮಿಳ್​ (ಸನ್ NXT): ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಮಲಯಾಳಂ ಚಿತ್ರ 'ಅಯಲುಂ ನಾನುಂ ತಮಿಳ್'. ಇದು ಬಹುತೇಕ ಎಲ್ಲರಿಗೂ ಮರೆಯಲಾಗದ ಅನುಭವ ನೀಡುವ ಒಂದು ಸಿನಿಮಾ.

ಕಾದಲುಂ ಕಾದಂದು ಪೋಗಂ (ಜಿಯೋಸಿನಿಮಾ): ಇದು ನಳನ್ ಕುಮಾರಸ್ವಾಮಿ ನಿರ್ದೇಶನದ ತಮಿಳು ರೊಮ್ಯಾಂಟಿಕ್ ಕಾಮಿಡಿ. ತನ್ನ ಸ್ವತಂತ್ರ ಜೀವನಕ್ಕಾಗಿ ಚೆನ್ನೈಗೆ ವಲಸೆ ಬಂದಿದ್ದ ನಾಯಕಿ ಐಟಿ ಕೆಲಸ ಕಳೆದುಕೊಂಡು ಊರಿಗೆ ಮರಳಬೇಕಾಗದ ಸ್ಥಿತಿ ಎದುರಾಗುತ್ತದೆ. ಆದರೆ ಆಕೆ ತನ್ನೂರಿಗೆ ತೆರಳದೇ ಸೂಪರ್ ಮಾರ್ಕೆಟ್​ನಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ ದಿನ ಕಳೆಯುತ್ತಾ ಐಟಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುತ್ತಾಳೆ. ಈ ವೇಳೆ ಆಕೆಯ ಜೀವನದಲ್ಲಿ ಗಲ್ಲಿ ರೌಡಿಯಾಗಿ ವಿಜಯ್​ ಸೇತುಪತಿ ಎಂಟ್ರಿ ಕೊಡುವ ದೃಶ್ಯಗಳು, ಅವರಿಬ್ಬರ ಮಧ್ಯೆ ಬೆಳೆಯುವ ಪ್ರೀತಿ ಆಕೆಯನ್ನು ಹೇಗೆ ಬದಲಿಸಿತು ಎಂಬುದು ಸಿನಿಮಾ.

ಇದನ್ನೂ ಓದಿ: ಮುಂದಿನ ದಿನಗಳಲ್ಲಿ ತೆರೆ ಕಾಣಲಿರುವ ತೆಲುಗು ಚಿತ್ರಗಳಿವು: ಅಗ್ರಸ್ಥಾನದಲ್ಲಿದೆ ನಿಮ್ಮ ನೆಚ್ಚಿನ ಚಿತ್ರ! - Upcoming Telugu Films

ETV Bharat Logo

Copyright © 2025 Ushodaya Enterprises Pvt. Ltd., All Rights Reserved.