ETV Bharat / entertainment

ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಧನ್ಯಾ ರಾಮ್​​ಕುಮಾರ್​​ ಜೊತೆ ಪೃಥ್ವಿ ಅಂಬಾರ್ ರೊಮ್ಯಾನ್ಸ್ - CHOWKIDAR SHOOTING - CHOWKIDAR SHOOTING

ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ 'ಚೌಕಿದಾರ್' ಚಿತ್ರತಂಡ 10 ದಿನಗಳ ಕಾಲ ಶೂಟಿಂಗ್​​ ನಡೆಸಿದೆ. ನಾಯಕ ಪೃಥ್ವಿ ಅಂಬಾರ್, ನಾಯಕಿ ಧನ್ಯಾ ರಾಮ್​ಕುಮಾರ್, ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಸೇರಿ ಹಲವರು ಭಾಗಿಯಾಗಿದ್ದರು.

Pruthvi Ambaar and Dhanya Ramkumar
ಧನ್ಯಾ ರಾಮ್​​ಕುಮಾರ್​​ ಜೊತೆ ಪೃಥ್ವಿ ಅಂಬಾರ್ (ETV Bharat)
author img

By ETV Bharat Karnataka Team

Published : Sep 12, 2024, 1:41 PM IST

'ಚೌಕಿದಾರ್' ಕ್ಯಾಚಿ ಟೈಟಲ್​​ನಿಂದಲೇ ಸಿನಿಪ್ರೇಮಿಗಳಲ್ಲಿ ನಿರೀಕ್ಷೆ ಹುಟ್ಟಿಸಿರುವ ಚಿತ್ರ. 'ರಥಾವರ' ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಸಾರಥ್ಯದ ಈ ಚಿತ್ರದ ಅಂಗಳದಿಂದ ಹೊಸ ಅಪ್​​ಡೇಟ್ ಸಿಕ್ಕಿದೆ. ಬಂಡೆ ಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ಇಳಿದಿದ್ದ ಚಿತ್ರತಂಡವೀಗ 53 ದಿನಗಳ ಚಿತ್ರೀಕರಣ ಮುಗಿಸಿದೆ. ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಚೌಕಿದಾರ್ ಸಿನಿಮಾವನ್ನು 10 ದಿನಗಳ ಕಾಲ ಚಿತ್ರೀಕರಿಸಲಾಗಿದೆ.

ಪ್ಯಾನ್ ಇಂಡಿಯಾ ಮಟ್ಟದ 'ಚೌಕಿದಾರ್' ಸಿನಿಮಾವನ್ನು ಅಷ್ಟೇ ಅದ್ಧೂರಿಯಾಗಿ ಹಾಗೂ ಸೊಗಸಾಗಿ ನಿರ್ಮಿಸಲಾಗುತ್ತಿದೆ. ಅದರಂತೆ ಚಿತ್ರತಂಡ ಅಂಡಮಾನ್-ನಿಕೋಬರ್ ದ್ವೀಪದಲ್ಲಿ ಚಿತ್ರೀಕರಣ ನಡೆಸಿದೆ. ಶಿವಣ್ಣ ನಟನೆಯ ಅಂಡಮಾನ್ ಸಿನಿಮಾದ ಶೂಟಿಂಗ್ ಈ ಜಾಗದಲ್ಲಿ ನಡೆದಿತ್ತು. ಈ ಚಿತ್ರ ಹೊರತುಪಡಿಸಿ ಮತ್ಯಾವುದೇ ಕನ್ನಡ ಸಿನಿಮಾಗಳ ಶೂಟಿಂಗ್ ನಡೆದಿಲ್ಲ. ಈಗ ಚೌಕಿದಾರ್ ಅಂಡಮಾನ್-ನಿಕೋಬರ್ ದ್ವೀಪಗಳಲ್ಲಿ ಬರೋಬ್ಬರಿ 10 ದಿನಗಳ ಕಾಲ ಹಾಡು ಹಾಗೂ ಚಿತ್ರದ ಕೆಲ ದೃಶ್ಯಗಳನ್ನು ಸೆರೆ ಹಿಡಿದುಕೊಂಡು ಬಂದಿದೆ. ಒಟ್ಟಾರೆ 53 ದಿನಗಳ ಕಾಲ 'ಚೌಕಿದಾರ್' ಸಿನಿಮಾದ ಮೊದಲ ಹಂತದ ಚಿತ್ರೀಕರಣ ನಡೆದಿದೆ.

ಅಂಡಮಾನ್-ನಿಕೋಬರ್ ದ್ವೀಪದಲ್ಲಿ ನಡೆದ ಚಿತ್ರೀಕರಣದಲ್ಲಿ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ, ನಾಯಕ ಪೃಥ್ವಿ ಅಂಬಾರ್, ನಾಯಕಿ ಧನ್ಯಾ ರಾಮ್​ಕುಮಾರ್, ಹಿರಿಯ ಕಲಾವಿದರಾದ ಸಾಯಿಕುಮಾರ್, ನೃತ್ಯ ಸಂಯೋಜಕ ಮುರುಳಿ ಮಾಸ್ಟರ್ ಹಾಗೂ ಸೌತ್ ಇಂಡಿಯಾದ ಕೆಲ ಟೆಕ್ನಿಷಿಯನ್ ಭಾಗಿಯಾಗಿದ್ದರು.

ಪೃಥ್ವಿ ಅಂಬಾರ್ ಈವರೆಗೆ ಪ್ರೀತಿ-ಪ್ರೇಮದಂತಹ ಕಥೆಗಳಲ್ಲಿಯೇ ಹೆಚ್ಚು ಅಭಿನಯಿಸಿದ್ದಾರೆ. ಲವರ್ ಬಾಯ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆದ್ರೆ, ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಅದನ್ನು ಬದಲಿಸಬೇಕು ಅನ್ನೋ ಯೋಚನೆ ಮಾಡಿದ್ದಾರೆ. ಹಾಗಾಗಿಯೇ ಚೌಕಿದಾರ್ ಚಿತ್ರದಲ್ಲಿ ಪೃಥ್ವಿ ಅಂಬಾರ್ ರಗಡ್ ಲುಕ್​​​ನಲ್ಲಿ ದರ್ಶನ ಕೊಡಲಿದ್ದಾರೆ. ವಿಭಿನ್ನ ಕಥಾಹಂದರವನ್ನು ಅವರು ಆಯ್ಕೆ ಮಾಡಿಕೊಂಡಿದ್ದು, ಹೊಸ ರೂಪದಲ್ಲಿ ಪೃಥ್ವಿ ನಿಮ್ಮ ಮುಂದೆ ಬರಲಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ರೋರಿಂಗ್​ ಸ್ಟಾರ್: 'ಬಘೀರ' ರಿಲೀಸ್​​ ಡೇಟ್​ ಅನೌನ್ಸ್ - Bagheera release date

'ಚೌಕಿದಾರ್' ಸಿನಿಮಾವನ್ನು ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರು ಸಂಗೀತ ನೀಡುತ್ತಿದ್ದು, ವಿ.ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ, ಸಂತೋಷ್ ನಾಯಕ್ ಸಾಹಿತ್ಯ ಬರೆಯುತ್ತಿದ್ದಾರೆ. 'ಚೌಕಿದಾರ್' ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಲವರ್‌ ಬಾಯ್‌ ಆಗಿದ್ದ ಪೃಥ್ವಿ ಅಂಬಾರ್ ಮಾಸ್ ಲುಕ್​​ನಲ್ಲಿ ದರ್ಶನ ಕೊಡಲಿದ್ದಾರೆ.

ಇದನ್ನೂ ಓದಿ: ಅನಿಲ್ ಅಂತ್ಯಸಂಸ್ಕಾರ: ಮಲೈಕಾ ಫ್ಯಾಮಿಲಿ, ಎರಡನೇ ಪತ್ನಿಯೊಂದಿಗೆ ಅರ್ಬಾಜ್ ಖಾನ್ ಅಂತ್ಯಕ್ರಿಯೆಯಲ್ಲಿ​ ಭಾಗಿ - Anil Last Rites

ಇನ್ನು, ಧನ್ಯಾ ರಾಮ್​ಕುಮಾರ್​ ನಟನೆಯ ಕೊನೆ ಚಿತ್ರ 'ಪೌಡರ್​' ಯಶಸ್ಸು ಕಂಡಿದ್ದು, ಮುಂದಿನ ಬಹುನಿರೀಕ್ಷಿತ 'ಕಾಲಾಪತ್ಥರ್' ಬಿಡುಗಡೆಗೆ ಸಜ್ಜಾಗಿದೆ. ವಿಕ್ಕಿ ವರುಣ್ ಜೊತೆ ತೆರೆಹಂಚಿಕೊಂಡಿರುವ ಈ ಚಿತ್ರ ನಾಳೆ ಬಿಡುಗಡೆ ಆಗಲಿದ್ದು, ಇತ್ತೀಚೆಗೆ ಹ್ಯಾಟ್ರಿಕ್​​ ಹೀರೋ ಶಿವರಾಜ್​​​ಕುಮಾರ್​ ಟ್ರೇಲರ್​ ಅನಾವರಣಗೊಳಿಸಿದ್ದಾರೆ. ವಿಕ್ಕಿ ವರುಣ್ ನಿರ್ದೇಶಿಸಿ, ನಟಿಸಿರುವ ಈ ಚಿತ್ರವನ್ನು ಭುವನ್ ಮೂವಿಸ್ ಬ್ಯಾನರ್ ಅಡಿ ಭುವನ್ ಸುರೇಶ್, ನಾಗರಾಜ್ ಬಿಲ್ಲನಕೋಟೆ ನಿರ್ಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.