ETV Bharat / entertainment

ಅಕ್ಬರ್​ ಪಾತ್ರಕ್ಕೆ ಅಮಿತಾಭ್​​, ಜೋಧಾ ಆಗಿ ಜಯಾ, ಸಲೀಮ್ ರೋಲ್​​​ನಲ್ಲಿ ಅಭಿಷೇಕ್, ಅನಾರ್ಕಲಿಯಾಗಿ ಐಶ್ವರ್ಯಾ: ಏನಾಯ್ತು ಸಿನಿಮಾ? - Bachchan Family in 1 Movie

author img

By ETV Bharat Karnataka Team

Published : Jul 23, 2024, 8:16 PM IST

1960ರ ಚಿತ್ರ ಮುಘಲ್ - ಇ - ಆಝಂ ಅನ್ನು ಬಚ್ಚನ್ ಕುಟುಂಬದೊಂದಿಗೆ ರೀಮೇಕ್ ಮಾಡಲು ದಕ್ಷಿಣ ಭಾರತದ ನಿರ್ಮಾಪಕರೊಬ್ಬರು ಆಸಕ್ತಿ ತೋರಿದ್ದನ್ನು ಮೆಹುಲ್ ಕುಮಾರ್ ಸಂದರ್ಶನವೊಂದರಲ್ಲಿ ವಿವರಿಸಿದರು.

The Bachchan family
ಬಚ್ಚನ್​​ ಕುಟುಂಬ (ANI Photo)

1960ರ 'ಮುಘಲ್-ಇ-ಅಝಂ' ಚಿತ್ರದಲ್ಲಿ ಪೃಥ್ವಿರಾಜ್ ಕಪೂರ್ ಮತ್ತು ದಿಲೀಪ್ ಕುಮಾರ್ ಅವರು ಚಕ್ರವರ್ತಿ ಅಕ್ಬರ್ ಮತ್ತು ಸಲೀಮ್ ಪಾತ್ರಗಳನ್ನು ಚಿತ್ರಿಸಿದ್ದಾರೆ. ಸಿನಿಮಾದಲ್ಲಿ ತಂದೆ - ಮಗನ ಸಂಬಂಧದಲ್ಲಿನ ಬಿರುಕನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ನಂತರದ ದಿನಗಳಲ್ಲಿ ಆ ಚಿತ್ರವನ್ನು ಮರುಸೃಷ್ಟಿಸಲು ಹಲವು ಪ್ರಯತ್ನಗಳು ನಡೆದವು. ದಕ್ಷಿಣ ಭಾರತದ ನಿರ್ಮಾಪಕರೊಬ್ಬರು ಈ ಚಿತ್ರವನ್ನು ರೀಮೇಕ್ ಮಾಡಲು ನಿರ್ಧರಿಸಿದಾಗ, ಅಂತಹ ಅದ್ಭುತ ಚಿತ್ರಕ್ಕೆ ಅಸಾಧಾರಣ ಪಾತ್ರವರ್ಗದ ಅಗತ್ಯವಿದೆ ಎಂಬುದನ್ನು ಅರಿತಿದ್ದರು. ಹಾಗಾಗಿ, ಪಾತ್ರಗಳಿಗೆ ಜೀವ ತುಂಬಲು ಇಡೀ ಬಚ್ಚನ್ ಕುಟುಂಬವನ್ನು ಒಪ್ಪಿಸಲು ಯೋಚಿಸಿದ್ದರು.

ಫಿಲ್ಮ್​​​ಮೇಕರ್​​ ಮೆಹುಲ್ ಕುಮಾರ್ ಇತ್ತೀಚೆಗೆ ಈ ರೀಮೇಕ್ ಪ್ರಸ್ತಾಪದ ಬಗ್ಗೆ ದಕ್ಷಿಣ ಚಿತ್ರರಂಗದ ನಿರ್ಮಾಪಕರೊಂದಿಗೆ ನಡೆಸಿದ ಕುತೂಹಲಕಾರಿ ಮಾತುಕತೆಯನ್ನು ವಿವರಿಸಿದರು. ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ, ದಕ್ಷಿಣದ ಪ್ರಮುಖ ನಿರ್ಮಾಪಕರೊಬ್ಬರು ನನ್ನನ್ನು ಭೇಟಿಯಾಗಿ ಮುಘಲ್-ಇ-ಅಝಂ ಅನ್ನು ರೀಮೇಕ್ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದರು. ಅಮಿತಾಭ್​​​ ಬಚ್ಚನ್, ಜಯಾ ಬಚ್ಚನ್, ಐಶ್ವರ್ಯಾ ರೈ ಬಚ್ಚನ್​​ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ಚಿತ್ರದ ಭಾಗವಾಗಿಸಲು ಬಯಸಿದ್ದರು ಎಂದು ಕುಮಾರ್ ತಿಳಿಸಿದರು.

ಕುಮಾರ್, ಆ ನಿರ್ಮಾಪಕರ ಹೆಸರನ್ನು ಉಲ್ಲೇಖಿಸದಿದ್ದರೂ, ಅಮಿತಾಭ್​​ ಬಚ್ಚನ್ ಅವರನ್ನು ಚಕ್ರವರ್ತಿ ಅಕ್ಬರ್ ಪಾತ್ರದಲ್ಲಿ, ಜಯಾ ಬಚ್ಚನ್ ಅವರನ್ನು ಜೋಧಾ ಬಾಯಿಯಾಗಿ, ಅಭಿಷೇಕ್ ಬಚ್ಚನ್ ಅವರನ್ನು ಸಲೀಮ್ ಆಗಿ ಮತ್ತು ಐಶ್ವರ್ಯಾ ರೈ ಬಚ್ಚನ್​​ ಅವರನ್ನು ಅನಾರ್ಕಲಿ ಪಾತ್ರದಲ್ಲಿ ಅಭಿನಯ ಮಾಡಿಸಲು ಉದ್ದೇಶಿಸಿದ್ದಾರೆಂಬುದನ್ನು ಬಹಿರಂಗಪಡಿಸಿದರು.

"ಮುಘಲ್-ಇ-ಅಜಮ್​​ ಅನ್ನು ರೀಮೇಕ್ ಮಾಡಲು ಸಾಧ್ಯವಿಲ್ಲ ಎಂದು ನಾನು ಅವರಿಗೆ ತಿಳಿಸಿದೆ. ನೀವು ಈ ಸಿನಿಮಾದ ಪ್ರಸ್ತಾಪ ಇಡುತ್ತಿದ್ದೀರಿ. ಆದ್ರೆ ಸಾಧ್ಯವಿಲ್ಲ. ಏಕೆಂದರೆ, ವೀಕ್ಷಕರು ಅದನ್ನು ಮೂಲ ಚಿತ್ರದೊಂದಿಗೆ ಹೋಲಿಸುತ್ತಾರೆ. ಏಕೆಂದರೆ, ಹಿಂದಿನದು ಅಂತಹ ಐತಿಹಾಸಿಕ ಚಿತ್ರವಾಗಿತ್ತು'' ಎಂದು ನಾನವರಲ್ಲಿ ಹೇಳಿದ್ದೆ ಎಂದು ತಿಳಿಸಿದರು. ನಂತರ, ನಿರ್ಮಾಪಕರು ಕುಮಾರ್ ಅವರ ಅಭಿಪ್ರಾಯಗಳನ್ನು ಅಮಿತಾಭ್​​ ಅವರಲ್ಲಿ ತಿಳಿಸಿದ್ದರು. ಅದಕ್ಕೆ ಅಮಿತಾಭ್ ಪ್ರತಿಕ್ರಿಯಿಸಿ, ಕುಮಾರ್ ಮಾತಲ್ಲಿ ಸರಿಯಾದ ಅಂಶವಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಮ್ಯೂಸಿಯಂಗೆ ಮಗನೊಂದಿಗೆ ನತಾಶಾ ಭೇಟಿ: ಹಾರ್ದಿಕ್​ ಪಾಂಡ್ಯರಿಂದ ವಿಚ್ಛೇದನ ಪಡೆದ ಬಳಿಕ ಹಂಚಿಕೊಂಡ ಫೋಟೋಗಳು - Natasa Stankovic

ಕೆ ಆಸಿಫ್ ನಿರ್ದೇಶನದ ಮುಘಲ್- ಇ -ಆಝಂ ಚಿತ್ರದಲ್ಲಿ ಮಧುಬಾಲಾ, ದಿಲೀಪ್ ಕುಮಾರ್ ಮತ್ತು ಪೃಥ್ವಿರಾಜ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದೊಂದು ಅದ್ಭುತ ಸಿನಿಮಾವಾಗಿ ಹೊರಹೊಮ್ಮಿದೆ. ರೀಮೇಕ್ ಮೂಲಕ ವೀಕ್ಷಕರಿಗೆ ಅದೇ ಅನುಭವ ಒದಗಿಸಲು ಸಾಧ್ಯವಿಲ್ಲವೆಂದು ಕುಮಾರ್ ನಂಬಿದ್ದರು.

ಇದನ್ನೂ ಓದಿ: ಸೌತ್ ಸೂಪರ್​ಸ್ಟಾರ್ ಸೂರ್ಯ ಜನ್ಮದಿನ: ಕಂಗುವ ಫೈಯರ್ ಸಾಂಗ್​​ ರಿಲೀಸ್​​​ - Kanguva Fire Song

1990ರ ದಶಕದಲ್ಲಿ, ಅಮಿತಾಭ್ ವೃತ್ತಿಜೀವನದ ಸವಾಲಿನ ಹಂತದಲ್ಲಿ ಅವರನ್ನು ಕುಮಾರ್​​ ಬೆಂಬಲಿಸಿದ್ದರು. ಕುಮಾರ್ 1997ರ 'ಮೃತ್ಯುದಾತ' ಚಿತ್ರವನ್ನು ನಿರ್ದಿಷ್ಟವಾಗಿ ಅಮಿತಾಭ್‌ಗಾಗಿಯೇ ನಿರ್ದೇಶಿಸಿದ್ದರು. ಅದಾಗ್ಯೂ, ಸಿನಿಮಾ ನಿರೀಕ್ಷೆ ತಲುಪುವಲ್ಲಿ ಹಿನ್ನಡೆ ಕಂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.