ETV Bharat / entertainment

ನಟ ದರ್ಶನ್ ಘಟನೆ ಬೆಳವಣಿಗೆ ಫಿಲ್ಮ್ ಚೇಂಬರ್ ಅಧ್ಯಕ್ಷರ ಗಮನದಲ್ಲಿದೆ : ಉಮೇಶ್ ಬಣಕಾರ್ - Umesh Bankar - UMESH BANKAR

ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮಾತನಾಡಿದರು.

mesh-bankar
ಉಮೇಶ್ ಬಣಕಾರ್ (ETV Bharat)
author img

By ETV Bharat Karnataka Team

Published : Jun 13, 2024, 3:59 PM IST

ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ (ETV Bharat)

ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ವಿಚಾರವಾಗಿ ಕನ್ನಡ ಚಿತ್ರರಂಗದ ಯಾವೊಬ್ಬ ತಾರೆಯರು, ನಿರ್ದೇಶಕರಾಗಲಿ ಮಾತನಾಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಖಾಸಗಿ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ನಟ ದರ್ಶನ್ ಘಟನೆ ನಡೆದ ದಿನದಿಂದ ಹಿಡಿದು ಇಲ್ಲಿಯವರೆಗೆ ಏನೆಲ್ಲ ಬೆಳವಣಿಗೆ ಆಗಿದೆ ಎಂಬುದರ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷರ ಗಮನಕ್ಕೆ ಇದೆ. ಇದೇ ವಿಚಾರವಾಗಿ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಾರ್ಯಕಾರಣಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಫಿಲ್ಮ್ ಚೇಂಬರ್​ನ ಎಲ್ಲಾ ಪದಾಧಿಕಾರಿಗಳು ಭಾಗವಹಿಸಲಿದ್ದು, ಈ ಸಭೆಯಲ್ಲಿ ದರ್ಶನ್ ವಿಚಾರದ ಬಗ್ಗೆ ಚರ್ಚೆ ಮಾಡಲಿದ್ದೇವೆ. ಈ ವೇಳೆ ಹಿರಿಯರೆಲ್ಲ ಸೇರಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದರು.

ಪ್ರಜಾಪ್ರಭುತ್ವದಲ್ಲಿ ಅಸಹಕಾರ ಮಾಡಬಹುದು; ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬ್ಯಾನ್ ಎಂಬಂತಹ ಪದವನ್ನು ಯಾರು ಯಾರ ಮೇಲೂ ಬಳಸುವುದಕ್ಕೆ ಆಗಲ್ಲ. ಬೇಕಿದ್ದರೆ ನಾವು ಅಸಹಕಾರ ಮಾಡಬಹುದು. ದರ್ಶನ್​ರನ್ನ ಬ್ಯಾನ್ ಮಾಡೋದಿಕ್ಕೆ ಆಗೋಲ್ಲ. ಏಕೆಂದರೆ ಕಲಾವಿದರ ಸಂಘದಲ್ಲಿ ಈ ಬಗ್ಗೆ ಚರ್ಚೆ ಆಗಬೇಕು. ಈಗಾಗಲೇ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್​ಲೈನ್ ವೆಂಕಟೇಶ್, ದೊಡ್ಡಣ್ಣ ಸಂಪರ್ಕ ಮಾಡಿದ್ದಾರೆ. ದರ್ಶನ್ ವಿಚಾರ ಮಾತನಾಡಿದ್ದಾರೆ. ಇಲ್ಲಿ ಎಲ್ಲಾ ಕಲಾವಿದರ ಅಭಿಪ್ರಾಯ ಬೇಕು. ಅದಕ್ಕೆ ಇಂದು ಸಂಜೆ 4 ಗಂಟೆಗೆ ಫಿಲ್ಮ್ ಚೇಂಬರ್​ನಲ್ಲಿ ಸಭೆ ಕರೆದಿದ್ದೇವೆ. ಇಲ್ಲಿ ಏನು ಮಾತುಕತೆ ಆಗುತ್ತೆ ನೋಡಬೇಕು ಅಂತಾ ಉಮೇಶ್ ಬಣಕಾರ್ ಹೇಳಿದ್ದಾರೆ.

ಕ್ರಮವನ್ನು ತೆಗೆದುಕೊಳ್ಳಬಹುದಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, ಕ್ರಮ ಯಾವ ರೀತಿ ತೆಗೆದುಕೊಳ್ಳಲು ಸಾಧ್ಯ. ಕ್ರಮ ತೆಗೆದುಕೊಳ್ಳಲು ಕಾನೂನಿದೆ, ಪೊಲೀಸ್ ಇದ್ದಾರೆ. ಅವರು ಕ್ರಮ ತೆಗೆದುಕೊಂಡ ಮೇಲೆ ನಾವು ಯಾವ ರೀತಿ ಕ್ರಮ ತೆಗೆದುಕೊಳ್ಳಬಹುದು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.

ಅಸಹಕಾರದ ಪ್ರಕ್ರಿಯೆ ಹೇಗೆ ಎಂಬುದಕ್ಕೆ ಪ್ರತಿಕ್ರಿಯಿಸಿ, ಅಸಹಕಾರ ಪ್ರಕ್ರಿಯೆಯನ್ನು ನಿರ್ದಿಷ್ಟವಾಗಿ ನಾನು ಒಬ್ಬರ ಬಗ್ಗೆ ಹೇಳುತ್ತಿಲ್ಲ. ಚಿತ್ರರಂಗದಿಂದ ಅಸಹಕಾರ ಎಂಬುದು ಪ್ರಾರಂಭವಾದ್ರೆ, ಅದರಲ್ಲಿ ನಿರ್ದೇಶಕರ ಸಂಘದ ಸದಸ್ಯರುಗಳು ಅವರ ಚಿತ್ರಗಳನ್ನ ನಿರ್ದೇಶನ ಮಾಡಲ್ಲ, ನಿರ್ಮಾಪಕರ ಸಂಘ ಅಥವಾ ವಾಣಿಜ್ಯ ಮಂಡಳಿ ನಿರ್ಮಾಣ ಮಾಡುವ ಚಿತ್ರಗಳಲ್ಲಿ ನಾವು ಸಹಕಾರ ಕೊಡಲ್ಲ. ಕಾರ್ಮಿಕರ ಒಕ್ಕೂಟ ಮಾತೃ ಸಂಸ್ಥೆ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆ ಎಂದರು.

ನಟ ದರ್ಶನ್ ವಿಚಾರವಾಗಿ ನಟಿ ರಮ್ಯಾ, ಆ ದಿನಗಳು ಚಿತ್ರದ ನಟ ಚೇತನ್ ಅವರು ದರ್ಶನ್ ಮಾಡಿರೋ ತಪ್ಪಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ನಟ ಜಗ್ಗೇಶ್​ ಅವರು ಮಾರ್ಮಿಕವಾಗಿ ಸಾಮಾಜಿಕ ಜಾಲತಾಣದಲ್ಲಿ ಅವನ ಪಾಪಕರ್ಮ ಅವನ ಸುಡುತ್ತದೆ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ : ದರ್ಶನ್​ ಬಂಧನ: ಅನ್ನಪೂರ್ಣೇಶ್ವರಿ ನಗರ ಠಾಣೆಯ 200 ಮೀಟರ್​ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ - Section 144 enforced

ETV Bharat Logo

Copyright © 2024 Ushodaya Enterprises Pvt. Ltd., All Rights Reserved.