ETV Bharat / entertainment

'ರಾಕ್ಷಸ'ನ ಅವತಾರದಲ್ಲಿ ಪ್ರೇಕ್ಷಕರೆದುರು ಬರಲು ಪ್ರಜ್ವಲ್ ದೇವರಾಜ್ ರೆಡಿ; ಪೋಸ್ಟರ್ ರಿಲೀಸ್ - Prajwal Devaraj Rakshasha Poster - PRAJWAL DEVARAJ RAKSHASHA POSTER

ಪ್ರಜ್ವಲ್ ದೇವರಾಜ್ ಅಭಿನಯದ 'ರಾಕ್ಷಸ' ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ.

Prajwal Devaraj Rakshasha Poster
ಪ್ರಜ್ವಲ್ ದೇವರಾಜ್ 'ರಾಕ್ಷಸ' ಪೋಸ್ಟರ್ (ETV Bharat)
author img

By ETV Bharat Karnataka Team

Published : Jul 4, 2024, 2:24 PM IST

ಪ್ರಜ್ವಲ್ ದೇವರಾಜ್, ಕನ್ನಡ ಚಿತ್ರರಂಗದ ಜನಪ್ರಿಯ ನಟ. ಸರಿಸುಮಾರು 17 ವರ್ಷಗಳಿಂದ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿರುವ ಡೈನಾಮಿಕ್ ಪ್ರಿನ್ಸ್ ಇಂದು ಹುಟ್ಟುಹಬ್ಬದ ಸಂಭ್ರದಲ್ಲಿದ್ದಾರೆ. 37ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಪಾಪ್ಯುಲರ್​ ಹೀರೋಗೆ ಕುಟುಂಬ ಸದಸ್ಯರು, ಸಿನಿ ಸ್ನೇಹಿತರು, ಆತ್ಮೀಯರು ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಜೊತೆಗೆ ನಟ ಬಣ್ಣ ಹಚ್ಚುತ್ತಿರುವ ಮುಂದಿನ ಚಿತ್ರಗಳ ಕಡೆಯಿಂದಲೂ ವಿಶೇಷವಾಗಿ ಶುಭ ಕೋರಲಾಗಿದೆ. ಅದರಂತೆ ರಾಕ್ಷಸ ಚಿತ್ರದ ಪೋಸ್ಟರ್ ಅನಾವರಣಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಪ್ರಜ್ವಲ್ ವಿಭಿನ್ನ ರೀತಿಯ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಹಾರರ್ ಸಿನಿಮಾವೊಂದಕ್ಕೆ ಕೈ ಹಾಕಿದ್ದಾರೆ. ಹಾರರ್ ಚಿತ್ರಗಳ ಮೂಲಕವೇ ಖ್ಯಾತಿ ಗಳಿಸಿರೋ ನಿರ್ದೇಶಕ ಲೋಹಿತ್ ಈ ಸಿನಿಮಾಗೆ ಆ್ಯಕ್ಷನ್​​​ ಕಟ್ ಹೇಳಿದ್ದಾರೆ. ಈ ಚಿತ್ರದ ಶೀರ್ಷಿಕೆ 'ರಾಕ್ಷಸ'

ರಾಕ್ಷಸ ಸಿನಿಮಾ ಮೂಲಕ ಪ್ರಜ್ವಲ್ ಹಾಗೂ ಲೋಹಿತ್ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಹೌದು, ಇದೇ ಮೊದಲ ಬಾರಿಗೆ ವರ್ಲ್ಡ್ ಸಿನಿಮಾದಲ್ಲಿ ಹಾರರ್ ಟೈಂಲೂಪ್ ವರ್ಷನ್ ಟ್ರೈ ಮಾಡಿದ್ದಾರೆ ನಿರ್ದೇಶಕ ಲೋಹಿತ್.

ಶಾನ್ವಿ ಎಂಟರ್​​ರ್ಪ್ರೈಸಸ್ ಅಡಿಯಲ್ಲಿ ಪ್ರದೀಪ್ ಮಹೀಶಿ ಪ್ರೆಸೆಂಟ್​ ಮಾಡಲಿದ್ದಾರೆ. ದೀಪು ಬಿ.ಎಸ್, ನವೀನ್ ಗೌಡ ಹಾಗೂ ಮಾನಸ ಜಂಟಿಯಾಗಿ ರಾಕ್ಷಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನೋಬಿನ್ ಪೌಲ್ ಸಂಗೀತ ನಿರ್ದೇಶನ, ಜೇಬಿನ್ ಪಿ ಜೋಕಬ್ ಕ್ಯಾಮರಾ ವರ್ಕ್ ಈ ಸಿನಿಮಾಗಿದೆ. ಸುಮಾರು 55 ದಿನಗಳ ಚಿತ್ರೀಕರಣ ಮಾಡಲಾಗಿದೆ. ಸಂಪೂರ್ಣ ಶೂಟಿಂಗ್​​​ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮಾಡಿರೋದು ಚಿತ್ರದ ವಿಶೇಷ.

ಇದನ್ನೂ ಓದಿ: ಯಕ್ಷಗಾನ ಅಥವಾ ಕಂಬಳ ಕಥೆ? ಕುತೂಹಲ ಹೆಚ್ಚಿಸಿದ ಪ್ರಜ್ವಲ್ ದೇವರಾಜ್ 'ಕರಾವಳಿ' ಪೋಸ್ಟರ್ - Prajwal Devaraj Birthday

ಪ್ರಜ್ವಲ್ ಜೊತೆಯಾಗಿ ಅರುಣ್ ರಾಥೋಡ್, ಶ್ರೀಧರ್, ಗೌತಮ್, ಸೋಮಶೇಖರ್, ವಿಹಾನ್ ಕೃಷ್ಣ ಜಯಂತ್ ಸೇರಿದಂತೆ ಇನ್ನೂ ಅನೇಕರು ಅಭಿನಯಿಸಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. ಪ್ರಜ್ವಲ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರ ಶುರು ಮಾಡಿದೆ. ಇಷ್ಟು ದಿನಗಳ ಕಾಲ ಕಮರ್ಷಿಯಲ್ ಚಿತ್ರಗಳಲ್ಲಿ ಕಾಣಿಸಿಕೊಳ್ತಿದ್ದ ಪ್ರಜ್ವಲ್ ಇದೇ ಮೊದಲ ಬಾರಿಗೆ ವಿಭಿನ್ನವಾಗಿ ಹಾರರ್ ಲುಕ್​​ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಒಂದು ವಾರದಲ್ಲಿ ವಿಶ್ವದಾದ್ಯಂತ ₹700 ಕೋಟಿ ಕಲೆಕ್ಷನ್​ ಮಾಡಿದ 'ಕಲ್ಕಿ', ಭಾರತದಲ್ಲೆಷ್ಟು? - Kalki Collection

ಕರಾವಳಿ ಪೋಸ್ಟರ್ ರಿಲೀಸ್​​: ನಟನ ಜನ್ಮದಿನದ ಅಂಗವಾಗಿ ನಟನ ಮತ್ತೊಂದು ಬಹುನಿರೀಕ್ಷಿತ 'ಕರಾವಳಿ' ಚಿತ್ರದ ಪೋಸ್ಟರ್ ಕೂಡಾ ಅನಾವರಣಗೊಂಡಿದೆ. ಪೋಸ್ಟರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಗುರುದತ್ ಗಾಣಿಗ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್​ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವನ್ನು ಈವರೆಗೆ ರಿಲೀಸ್​ ಆಗಿರುವ ಪೋಸ್ಟರ್​​ಗಳು ಕೊಟ್ಟಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.