ETV Bharat / entertainment

ಆ್ಯಕ್ಷನ್​ ಟು ರೊಮ್ಯಾನ್ಸ್​​: ಹನು ರಾಘವಪುಡಿ ನಿರ್ದೇಶನದ ಸಿನಿಮಾದಲ್ಲಿ ಪ್ರಭಾಸ್; ಶೀಘ್ರದಲ್ಲೇ ಶೂಟಿಂಗ್​ ಶುರು - Prabhas New Movie - PRABHAS NEW MOVIE

ಹನು ರಾಘವಪುಡಿ ಆ್ಯಕ್ಷನ್​ ಕಟ್​ ಹೇಳಲಿರುವ ಮುಂದಿನ ರೊಮ್ಯಾಂಟಿಕ್ ಸಿನಿಮಾದಲ್ಲಿ ಆ್ಯಕ್ಷನ್​ ಸ್ಟಾರ್ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ.

Prabhas, Hanu Raghavapudi
ಪ್ರಭಾಸ್, ಹನು ರಾಘವಪುಡಿ (IANS)
author img

By ETV Bharat Karnataka Team

Published : Jul 25, 2024, 3:51 PM IST

'ಕಲ್ಕಿ 2898 ಎಡಿ' ಯಶಸ್ಸಿನಲೆಯಲ್ಲಿ ತೇಲುತ್ತಿರುವ ಜನಪ್ರಿಯ ನಟ ಪ್ರಭಾಸ್ ಅವರ ಮುಂದಿನ ಚಿತ್ರಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಪ್ಯಾನ್​ ಇಂಡಿಯಾ ಸ್ಟಾರ್​ ಬಳಿ ಹಲವು ಪ್ರಾಜೆಕ್ಟ್​​ಗಳಿದ್ದು, ಈಗಾಗಲೇ ಕೆಲವು ಘೋಷಣೆಯಾಗಿದೆ. ಉಳಿದ ಸಿನಿಮಾಗಳು ಅಧಿಕೃತವಾಗಿ ಶೀಘ್ರದಲ್ಲೇ ಅನೌನ್ಸ್​​ ಆಗಲಿದೆ.

ಬಹುಬೇಡಿಕೆ ನಟ, ಮುಂದಿನ ಸಿನಿಮಾಗಾಗಿ ಸೂಪರ್ ಹಿಟ್​ 'ಸೀತಾ ರಾಮಂ' ಖ್ಯಾತಿಯ ಹನು ರಾಘವಪುಡಿ ಅವರೊಂದಿಗೆ ಕೈ ಜೋಡಿಸಲಿದ್ದಾರೆ. ಸಿನಿಮಾದ ಅಧಿಕೃತ ಅನೌನ್ಸ್​​ಮೆಂಟ್​ಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದಾರೆ.

ವರದಿಗಳ ಪ್ರಕಾರ, ಈ ರೊಮ್ಯಾಂಟಿಕ್ ಸಿನಿಮಾವನ್ನು ಅಧಿಕೃತವಾಗಿ ಆಗಸ್ಟ್ 22ರಂದು ಘೋಷಿಸಲಾಗುವುದು. ಚಿತ್ರೀಕರಣ ಸಹ ಅದೇ ಸಂದರ್ಭದಲ್ಲಿ ಶುರುವಾಗಲಿದೆ. ಪ್ರಭಾಸ್ ಈ ಪ್ರಾಜೆಕ್ಟ್​ಗಾಗಿ ಹೆಚ್ಚು ದಿನಗಳನ್ನು ಮೀಸಲಿಡಲಿದ್ದಾರೆ. ಇದಕ್ಕಾಗಿ ನಿರ್ಮಾಪಕರು ಬೃಹತ್ ಸೆಟ್​ಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಸೆಟ್​​​ನಲ್ಲೇ ಚಿತ್ರದ ಮಹತ್ವದ ಭಾಗಗಳನ್ನು ಚಿತ್ರೀಕರಿಸಲಾಗುವುದು.

ಬ್ರೇಕ್​ನಲ್ಲಿರುವ ಪ್ರಭಾಸ್ ಮಾರುತಿ ನಿರ್ದೇಶನದ 'ದಿ ರಾಜಾ ಸಾಬ್‌' ಶೂಟಿಂಗ್​ಗೆ ಮರಳಲಿದ್ದಾರೆ. ಆಗಸ್ಟ್‌ನಲ್ಲಿ ಚಿತ್ರೀಕರಣ ಪುನಾರಂಭಿಸಲು ಪ್ಲ್ಯಾನ್​ ಹಾಕಿಕೊಂಡಿದ್ದಾರೆ. ಸಂದೀಪ್ ವಂಗಾ ಅವರ 'ಸ್ಪಿರಿಟ್‌' ಸಿನಿಮಾದತ್ತ ಗಮನ ಹರಿಸೋ ಮುನ್ನ 'ದಿ ರಾಜಾ ಸಾಬ್' ಮತ್ತು ಹನು ರಾಘವಪುಡಿ ಅವರ ಸಿನಿಮಾಗಳನ್ನು ಪೂರ್ಣಗೊಳಿಸಲಿದ್ದಾರೆ ಎಂಬ ಮಾಹಿತಿ ಇದೆ. 'ಸ್ಪಿರಿಟ್‌' ಸಿನಿಮಾ ಈಗಾಗಲೇ ಸಾಕಷ್ಟು ವಿಳಂಬ ಎದುರಿಸಿದೆ.

ಇದರ ಹೊರತಾಗಿ, ಪ್ರಭಾಸ್ ಇತರ ಸಿನಿಮಾಗಳನ್ನು ಸಹ ಹೊಂದಿದ್ದಾರೆ. 'ಸಲಾರ್ 2: ಶೌರ್ಯಾಂಗ ಪರ್ವಂ' ಮೇಲೆ ಅಭಿಮಾನಿಗಳು ಸಾಕಷ್ಟು ಕುತೂಹಲವಿಟ್ಟುಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಸಾಹಸಗಾಥೆ ಸಲಾರ್ 2ನಲ್ಲಿನ ಅದ್ಭುತ ಆ್ಯಕ್ಷನ್​ ಅನುಭವಕ್ಕಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ, 'ಸ್ಪಿರಿಟ್'ನಲ್ಲಿ ಪ್ರಭಾಸ್ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಶಾರುಖ್​​​​ ನಟನೆಯ ಸೂಪರ್​ ಹಿಟ್​​ 'ಜವಾನ್​​​' ದಾಖಲೆ ಪುಡಿಗಟ್ಟಲು ಸಜ್ಜಾದ 'ಕಲ್ಕಿ' - Kalki Collection

ಇನ್ನು ತೆರೆಕಂಡ ಐದನೇ ವಾರದಲ್ಲಿಯೂ ಪ್ರದರ್ಶನ ಮುಂದುವರೆಸಿರುವ ಪ್ರಭಾಸ್ ಮುಖ್ಯಭೂಮಿಕೆಯ 'ಕಲ್ಕಿ 2898 ಎಡಿ' ಬಾಕ್ಸ್​​ ಆಫೀಸ್​ ವಿಚಾರದಲ್ಲಿಯೂ ಓಟ ಮುಂದುವರಿಸಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರ ಜಾಗತಿಕವಾಗಿ 1,100 ಕೋಟಿ ರೂಪಾಯಿಯ ಗಡಿ ದಾಟುವ ಮೂಲಕ ದಾಖಲೆ ಬರೆದಿದೆ. ದೇಶೀಯ ಮಾರುಕಟ್ಟೆಯಲ್ಲಿ 622.2 ಕೋಟಿ ರೂ. ಕಲೆಕ್ಷನ್​​​ ಮಾಡಿದೆ. ಸಿನಿಮಾವನ್ನು 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಜನಪ್ರಿಯ ನಿರ್ದೇಶಕ ನಾಗ್​ ಅಶ್ವಿನ್​​ ಆ್ಯಕ್ಷನ್​ ಕಟ್​​ ಹೇಳಿರುವ ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಬಹುಬೇಡಿಕೆ ತಾರೆಯರಾದ ಅಮಿತಾಭ್​ ಬಚ್ಚನ್​​​, ಕಮಲ್​ ಹಾಸನ್​​, ದೀಪಿಕಾ ಪಡೆಕೋಣೆ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಪ್ರಣಿತಾ: ಬೇಬಿ ಬಂಪ್​​ ಫೋಟೋ ಶೇರ್ ಮಾಡಿದ ನಟಿ - Pranitha Subhash Pregnant

ETV Bharat Logo

Copyright © 2025 Ushodaya Enterprises Pvt. Ltd., All Rights Reserved.