ETV Bharat / entertainment

ಬಹುನಿರೀಕ್ಷಿತ 'ಕಲ್ಕಿ 2898 ಎಡಿ' ಟ್ರೇಲರ್​​ ಬಿಡುಗಡೆಗೆ ಮುಹೂರ್ತ ಫಿಕ್ಸ್ - Kalki 2898 Ad Trailer

author img

By ETV Bharat Karnataka Team

Published : Jun 5, 2024, 5:53 PM IST

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಟ್ರೇಲರ್​​ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.

Kalki 2898 Ad Trailer release date announced
'ಕಲ್ಕಿ 2898 ಎಡಿ' ಟ್ರೇಲರ್​​ ಬಿಡುಗಡೆ ದಿನಾಂಕ ಘೋಷಣೆ (Instagram)

ಭಾರತೀಯ ಚಿತ್ರರಂಗದ 2024ರ ಬಹುನಿರೀಕ್ಷಿತ ಚಿತ್ರ 'ಕಲ್ಕಿ 2898 ಎಡಿ' ಬಿಡುಗಡೆ ದಿನಾಂಕ ಸಮೀಪಿಸುತ್ತಿದ್ದು, ಸಿನಿಮಾ ಸುತ್ತಲಿನ ಕುತೂಹಲ, ನಿರೀಕ್ಷೆ ಹೆಚ್ಚುತ್ತಲೇ ಇದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್​ ಕಟ್​ ಹೇಳಿರುವ ಈ ಪ್ರಾಜೆಕ್ಟ್,​​ ಭಾರತೀಯ ಚಿತ್ರರಂಗದಲ್ಲೇ ಬಿಗ್​​ ಬಜೆಟ್​​ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೌದು, ಬರೋಬ್ಬರಿ 600 ಕೋಟಿ ರೂಪಾಯಿ ಬಂಡವಾಳವನ್ನು ಈ ಚಿತ್ರಕ್ಕೆ ಹೂಡಲಾಗಿದೆ. ಚಿತ್ರತಂಡ ಈಗಾಗಲೇ ಪ್ರಚಾರ ಆರಂಭಿಸಿದ್ದು, ಇಂದು ಬಹುನಿರೀಕ್ಷಿತ ಟ್ರೇಲರ್ ರಿಲೀಸ್​​ ಡೇಟ್​ ಅನ್ನು ಅನೌನ್ಸ್ ಮಾಡಿದೆ.

ಟ್ರೇಲರ್ ರಿಲೀಸ್​ ಡೇಟ್ ಅನೌನ್ಸ್​: 'ಕಲ್ಕಿ 2898 ಎಡಿ' ಸುತ್ತಲಿನ ನಿರೀಕ್ಷೆ ಬೆಟ್ಟದಷ್ಟಿದೆ. ಚಿತ್ರತಂಡ ಕೊಟ್ಟ ಭರವಸೆಯಂತೆ ಇಂದು ಬೆಳಗ್ಗೆ 10 ಗಂಟೆಗೆ ಚಿತ್ರದ ಸ್ಪೆಷಲ್​ ಅನೌನ್ಸ್​​​ಮೆಂಟ್​ ಮಾಡಿದೆ. ಅನೇಕರು ಟ್ರೇಲರ್​​ ಥಿಯೇಟರ್​ನಲ್ಲಿ ಅನಾವರಣಗೊಳ್ಳಲಿದೆ ಎಂದು ನಿರೀಕ್ಷಿಸುತ್ತಿದ್ದರು. ಅನೇಕರು ಭಾರತದಾದ್ಯಂತ ಗ್ರ್ಯಾಂಡ್​ ಪ್ರೀ ರಿಲೀಸ್ ಈವೆಂಟ್​​​ ನಡೆಯೋ ಕಾರ್ಯಕ್ರಮಗಳ ಬಗ್ಗೆ ನಿರೀಕ್ಷಿಸಿದ್ದರು. ಆದ್ರಿಂದು ಚಿತ್ರತಂಡ ಟ್ರೇಲರ್ ರಿಲೀಸ್​ ಡೇಟ್ ಅನ್ನು ಅನೌನ್ಸ್​ ಮಾಡಿ, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಚಿತ್ರದ ಲೇಟೆಸ್ಟ್ ಪೋಸ್ಟರ್ ಶೇರ್: ಸೋಷಿಯಲ್​ ಮೀಡಿಯಾ ಪ್ಲಾಟ್​​​​ಫಾರ್ಮ್​​​​ಗಳಲ್ಲಿ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡ ನಿರ್ಮಾಪಕರು, "ಹೊಸ ಜಗತ್ತು ಕಾಯುತ್ತಿದೆ. ಕಲ್ಕಿ 2898 ಎಡಿ ಟ್ರೇಲರ್ ಜೂನ್ 10 ರಂದು ಬಿಡುಗಡೆ ಆಗಲಿದೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಾಜಕೀಯ ಸಭೆಗಳಿಗೂ ಮುನ್ನ ದೆಹಲಿಗೆ ಭೇಟಿ ಕೊಟ್ಟ ತಲೈವಾ; ಕುತೂಹಲ ಮೂಡಿಸಿದ ರಜನಿಕಾಂತ್ ನಡೆ - Rajinikanth Visits Delhi

ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಸಿ ಅಸ್ವನಿ ದತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಭಾರತೀಯ ಚಿತ್ರರಂಗದ ಘಟಾನುಘಟಿ ತಾರೆಯರಿರುವ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಆ್ಯಕ್ಷನ್​ ಕಟ್​ ಹೇಳಿರುವ ಹಿನ್ನೆಲೆ ಹಾಗೂ ಬಿಗ್​ ಬಜೆಟ್​ ಚಿತ್ರವಾಗಿರುವ ಕಾರಣ ಸಿನಿಮಾ ಸುತ್ತಲಿನ ಕ್ರೇಜ್​ ಜೋರಾಗೇ ಇದೆ. ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​​​ ಮುಖ್ಯಭೂಮಿಕೆಯಲ್ಲಿದ್ದರೆ, ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಎದುರಾಳಿಯಾಗಿ ನಟಿಸಿದ್ದಾರೆ. ಬಹುಬೇಡಿಕೆ ತಾರೆಯರಾದ ಅಮಿತಾಭ್​ ಬಚ್ಚನ್​​, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: ಕಾಂತಾರ ಚಾಪ್ಟರ್​​ 1ಕ್ಕಾಗಿ ಬೆಂಗಳೂರು ಬಿಟ್ಟ ಡಿವೈನ್ ಸ್ಟಾರ್: ಮುಂದಿನ ವರ್ಷ ಸಿನಿಮಾ ರಿಲೀಸ್ - Kantara Chapter 1

ಕಲ್ಕಿ 2898 ಎಡಿ ಪುರಾಣ ಪ್ರೇರಿತ ಸೈನ್ಸ್ ಫಿಕ್ಷನ್​ ಸಿನಿಮಾ. ಈ ಮೊದಲು ಮೇನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಕಾರಣಾಂತರಗಳಿಂದ ವಿಳಂಬವಾಗುತ್ತಾ ಬಂದ ಈ ಸಿನಿಮಾ ಜೂನ್ 27 ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಈ ದಿನಕ್ಕಾಗಿ ಸಾಕಷ್ಟು ಸಂಖ್ಯೆಯ ಸಿನಿಪ್ರಿಯರು, ಅಭಿಮಾನಿಗಳು ಕಾತರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.