ETV Bharat / entertainment

ಗರ್ಭಕಂಠದ ಕ್ಯಾನ್ಸರ್‌ನಿಂದ ನಟಿ ಪೂನಂ ಪಾಂಡೆ ನಿಧನ - ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌

Poonam Pandey passes away: ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೂಪದರ್ಶಿ ಪೂನಂ ಪಾಂಡೆ ನಿಧನ ಹೊಂದಿದ್ದಾರೆ.

Poonam Pandey died
ಪೂನಂ ಪಾಂಡೆ ನಿಧನ
author img

By ETV Bharat Karnataka Team

Published : Feb 2, 2024, 12:06 PM IST

Updated : Feb 2, 2024, 12:34 PM IST

ಮುಂಬೈ(ಮಹಾರಾಷ್ಟ್ರ): ನಟಿ ಹಾಗು ಸೋಷಿಯಲ್​​ ಮೀಡಿಯಾ ಸ್ಟಾರ್ ಪೂನಂ ಪಾಂಡೆ (32) ಇಂದು ಬೆಳಿಗ್ಗೆ ಸಾವನ್ನಪ್ಪಿದ್ದಾರೆ ಎಂದು ಅವರ ಅಧಿಕೃತ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಮಾಹಿತಿ ನೀಡಿದೆ. ಗರ್ಭಕಂಠದ ಕ್ಯಾನ್ಸರ್‌ನಿಂದ (Cervical Cancer) ಅವರು ಬಳಲುತ್ತಿದ್ದರು.

2013ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ 'ನಶಾ'ದಲ್ಲಿ ನಟಿಸುವ ಮೂಲಕ ಪಾಂಡೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದ ನಟಿ, ಬೋಲ್ಡ್​ ಫೋಟೋಶೂಟ್​ಗಳಿಂದಲೂ ಜನಪ್ರಿಯರಾಗಿದ್ದರು.

ಪೂನಂ ಪಾಂಡೆ ಹೆಸರಿನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿಧನದ ಸುದ್ದಿ ಪೋಸ್ಟ್ ಮಾಡುತ್ತಿದ್ದಂತೆ, ಹಲವು ಪ್ರಶ್ನೆಗಳೆದ್ದವು. ಹೆಚ್ಚಿನವರಿಗೆ ಈ ಸುದ್ದಿಯನ್ನು ನಂಬಲು ಸಾಧ್ಯವಾಗಿಲ್ಲ. ನಕಲಿ​ ಇರಬಹುದು ಎಂದು ಹಲವರು ಅಂದಾಜಿಸಿದ್ದರು. ಈ ಹಿನ್ನೆಲೆಯಲ್ಲಿ ನಿಖರ ಮಾಹಿತಿ ನೀಡುವಂತೆ ಬೇಡಿಕೆಗಳು ಬಂದವು. ಆದರೆ ನಟಿಯ ತಂಡದಿಂದ ಈ ಪೋಸ್ಟ್ ಶೇರ್ ಮಾಡಿದಂತಿದ್ದು, ಬರಹಗಳು ನಕಲಿ​ ಅಥವಾ ತಮಾಷೆಯಂತೆ ತೋರುತ್ತಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಪೂನಂ ಪಾಂಡೆ 2022ರಲ್ಲಿ ಕಂಗನಾ ರಣಾವತ್​​ ನಿರೂಪಣೆಯ ರಿಯಾಲಿಟಿ ಶೋ 'ಲಾಕ್ ಅಪ್' ಸೀಸನ್ 1ರಲ್ಲಿ ಭಾಗವಹಿಸಿದಾಗಲೂ ಸಖತ್ ಸದ್ದು ಮಾಡಿದ್ದರು.

ಇದನ್ನೂ ಓದಿ: ಬಜೆಟ್ ಬಗ್ಗೆ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್​ ಎಂ ಸುರೇಶ್: ನಿರ್ಮಾಪಕ ಉಮೇಶ್ ಬಣಕಾರ್ ಅಸಮಾಧಾನ

ಇನ್ನು ನಟಿಯ ಸಾವಿನ ಸುದ್ದಿಗೆ ಪ್ರತಿಕ್ರಿಯಿಸಿದ ಓರ್ವ ವ್ಯಕ್ತಿ, "ಕಳೆದುಕೊಂಡೆವಾ? ಇದು ಫೇಕ್​​ ಅಥವಾ ಫನ್​​ ಪೋಸ್ಟ್ ಅಲ್ಲ ಎಂದು ಭಾವಿಸುತ್ತೇವೆ" ಎಂದು ತಿಳಿಸಿದ್ದಾರೆ. ಮತ್ತೊಬ್ಬರು, "ಇದು ಮಾರ್ಕೆಟಿಂಗ್ ಗಿಮಿಕ್ ಅಲ್ಲ ಎಂದು ಭಾವಿಸುತ್ತೇನೆ, ರೆಸ್ಟ್ ಇನ್​ ಪೀಸ್​​​'' ಎಂದು ಬರೆದಿದ್ದಾರೆ. ಅಭಿಮಾನಿಯೊಬ್ಬರು, "ಅಕೌಂಟ್ ಹ್ಯಾಕ್ ಆಗಿದೆಯೇ" ಎಂದು ಪ್ರಶ್ನಿಸಿದ್ದಾರೆ. ''ನಮ್ಮನ್ನೇಕೆ ಒಂಟಿಯಾಗಿ ಬಿಟ್ಟುಹೋದ್ರಿ?'' ಎಂದು ಇನ್ನೋರ್ವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ತಂದೆಯ ಬೆಲೆ ಅವರು ಇದ್ದಾಗ ಗೊತ್ತಾಗಲ್ಲ': ಅಭಿಷೇಕ್ ಅಂಬರೀಶ್ ಭಾವುಕ

ಕೆಲವು ದಿನಗಳ ಹಿಂದೆ, ಪೂನಂ ಪಾಂಡೆ ಮಾಲ್ಡೀವ್ಸ್ ಶೂಟಿಂಗ್ ಅನ್ನು ದಿಢೀರ್ ರದ್ದುಗೊಳಿಸಿ ಸುದ್ದಿಯಾಗಿದ್ದರು. ಅಲ್ಲದೇ, ಅಲ್ಲಿ ಶೂಟಿಂಗ್​ಗೂ ನಿರಾಕರಿಸಿದ್ದರು. ಮಾಲ್ಡೀವ್ಸ್‌ ಮೇಲಿನ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾ, ಸಾಮಾಜಿಕ ಮಾಧ್ಯಮದಲ್ಲಿ ವಾಟ್ಸ್‌ಆ್ಯಪ್ ಚಾಟ್ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದರು. ಅಲ್ಲಿ ಚಿತ್ರೀಕರಣವು ಸಮಸ್ಯೆಗಳನ್ನು ಎದುರಿಸಿದರೆ ತಾನು ಪ್ರಯಾಣಿಸುವುದಿಲ್ಲ ಎಂದೂ ಕೂಡ ತಿಳಿಸಿದ್ದರು. ಬಳಿಕ ಲಕ್ಷದ್ವೀಪದಲ್ಲಿ ಶೂಟಿಂಗ್‌ಗೆ ಉತ್ಸಾಹ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ಪ್ರದೇಶಗಳಿಗೆ ಆದ್ಯತೆ ನೀಡುವ ಬದ್ಧತೆಯನ್ನು ಪೂನಂ ಪಾಂಡೆ ಒತ್ತಿ ಹೇಳಿದ್ದರು.

Last Updated : Feb 2, 2024, 12:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.