'ಐಸಿ 814 - ದಿ ಕಂದಹಾರ್ ಹೈಜಾಕ್' ವೆಬ್ ಸರಣಿ ಒಟಿಟಿ ಪ್ಲ್ಯಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಆಗಸ್ಟ್ 29ರಂದು ಬಿಡುಡೆಗೊಂಡಿದ್ದು, ತೀವ್ರ ಟೀಕೆ ವ್ಯಕ್ತವಾಗಿತ್ತು. ಭಯೋತ್ಪಾದಕರ ಹೆಸರು ಬದಲಾವಣೆ ಹಿನ್ನೆಲೆ, ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಟ್ರೆಂಡ್ ಶುರುವಾಗಿತ್ತು. ವಿವಾದ ಉಲ್ಭಣಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಅಪಹರಣಕಾರರ ನಿಜ ಹೆಸರುಗಳನ್ನು ಬಳಸಲು ಸೂಚಿಸಿತ್ತು. ನಂತರ ಚಿತ್ರತಂಡ ಸೀರೀಸ್ನಲ್ಲಿ ಭಯೋತ್ಪಾದಕರ ನಿಜ ಹೆಸರನ್ನು ಬಳಸಿದೆ.
#WATCH | Chandigarh | Following Netflix’s ‘IC 814’ controversy, Pooja Kataria, a survivor of the IC-814 Kandahar hijacking says, " there were 5 terrorists on board the aircraft. half an hour after the flight took off the terrorists declared that the flight was hijacked. we were… pic.twitter.com/r2EXgHm2bA
— ANI (@ANI) September 4, 2024
ಜನರ ಪ್ರಕಾರ, ವಿಮಾನವನ್ನು ಹೈಜಾಕ್ ಮಾಡಿದವರು ಭಯೋತ್ಪಾದಕರು. ಅವರೆಲ್ಲರೂ ಮುಸ್ಲಿಮರು. ಆದರೆ ನಿರ್ಮಾಪಕರು ಅವರ ಹೆಸರನ್ನು 'ಶಂಕರ್' ಮತ್ತು 'ಭೋಲಾ' ಎಂದು ಬದಲಾಯಿಸಿದ್ದರು. ಇದು ಪ್ರೇಕ್ಷಕರ ಭಾವನೆಗಳಿಗೆ ಧಕ್ಕೆ ತಂದಿತ್ತು. ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಸರ್ಕಾರ ಮಧ್ಯಪ್ರವೇಶಿಸಿ ಹೆಸರುಗಳನ್ನು ಸರಿಪಡಿಸಿತು.
ಇದೇ ವೇಳೆ, ಚಂಡೀಗಢದ ಪೂಜಾ ಕಟಾರಿಯಾ ಎಂಬುವವರು ಕಂದಹಾರ್ ಹೈಜಾಕ್ನ ಸಂಪೂರ್ಣ ಕಥೆ, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿಮಾನ ಹೈಚಾಕ್ ಆದಾಗ ಪೂಜಾ ವಿಮಾನದಲ್ಲಿದ್ದರು. ತಮ್ಮ ಅನುಭವದ ಜೊತೆಗೆ ನೆಟ್‌ಫ್ಲಿಕ್ಸ್ ಐಸಿ814 ಕಂದಹಾರ್ ಹೈಜಾಕ್ ವಿವಾದದ ಬಗ್ಗೆಯೂ ಪೂಜಾ ಪ್ರತಿಕ್ರಿಯಿಸಿದ್ದಾರೆ.
ಅಪಹರಣದ ವೇಳೆ ವಿಮಾನದಲ್ಲಿದ್ದ ಪೂಜಾ ಕಟಾರಿಯಾ ಮಾತನಾಡಿ, ''ವಿಮಾನದಲ್ಲಿ 5 ಮಂದಿ ಭಯೋತ್ಪಾದಕರಿದ್ದರು. ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಭಯೋತ್ಪಾದಕರು ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ತಿಳಿಸಿದರು. ತಲೆ ತಗ್ಗಿಸಿ ಸುಮ್ಮನೆ ಕೂರುವಂತೆ ತಿಳಿಸಿದರು. ನಾವು ಕಂದಹಾರ್ನಲ್ಲಿದ್ದೇವೆ ಎಂಬುದು ಸಹ ನಮಗೆ ತಿಳಿದಿರಲಿಲ್ಲ. ನಮಗೆ ಬಹಳ ಭಯವಾಗಿತ್ತು. 'ಬರ್ಗರ್' ಎಂಬ ಭಯೋತ್ಪಾದಕ ಕೊಂಚ ಫ್ರೆಂಡ್ಲಿಯಾಗಿದ್ದ. ಜನರಿಗೆ ಪ್ಯಾನಿಕ್ ಅಟ್ಯಾಕ್ ಆಗದಂತೆ ಆತ ನೋಡಿಕೊಂಡ''.
ಇದನ್ನೂ ಓದಿ: ಕೇಂದ್ರದ ಒತ್ತಡಕ್ಕೆ ಮಣಿದ ನೆಟ್‌ಫ್ಲಿಕ್ಸ್: IC814 ವೆಬ್ಸಿರೀಸ್ನಲ್ಲಿ ಅಪಹರಣಕಾರರ ನಿಜ ಹೆಸರು ಬಳಕೆ - IC814 Web Series
''ಬರ್ಗರ್ ಹೆಸರಿನ ಭಯೋತ್ಪಾದಕ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಅಂತ್ಯಾಕ್ಷರಿ ಹಾಡಲು ಹೇಳಿದ. ಮತ್ತೋರ್ವ (ಡಾಕ್ಟರ್) ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ಭಾಷಣ ಮಾಡಿದ. ಅವರಲ್ಲಿ ಇತರ ಭಯೋತ್ಪಾದಕರ ಹೆಸರುಗಳು 'ಭೋಲಾ' ಮತ್ತು 'ಶಂಕರ್'. ಒಬ್ಬರನ್ನೊಬ್ಬರು ಈ ಹೆಸರಿನಿಂದ ಕರೆದುಕೊಳ್ಳುತ್ತಿದ್ದರು. ನಾವು ಹೊರಗೆ ಬಂದ ನಂತರವೇ ಇಡೀ ಘಟನೆ ತಿಳಿಯಿತು. ವಿಮಾನದೊಳಗಿದ್ದ ನಮಗೆ ನಾವು ಎಲ್ಲಿದ್ದೇವೆ ಎಂಬುದು ಸಹ ತಿಳಿಯುವುದು ಕಷ್ಟಕರವಾಗಿತ್ತು. ಸುಮಾರು ಏಳು ದಿನಗಳ ಕಾಲ ನಮ್ಮನ್ನು ಒತ್ತೆಯಾಳಾಗಿಟ್ಟಿದ್ದರು. ಈ ಸಮಯದಲ್ಲಿ ತಿನ್ನಲು ಸೇಬು ಸಿಕ್ಕಿತ್ತಷ್ಟೇ" ಎಂದು ತಿಳಿಸಿದರು.
ಇನ್ನೂ ವೆಬ್ ಸೀರಿಸ್ ವಿವಾದದ ಕುರಿತು ಮಾತನಾಡಿದ ಪೂಜಾ, ಈ ವೆಬ್ ಸೀರೀಸ್ ಬಗ್ಗೆ ಜನರಿಗೇಕೆ ಕೋಪ ಬರುತ್ತಿದೆಯೋ ಗೊತ್ತಿಲ್ಲ. ವಿಮಾನದಲ್ಲಿ ಈ ಹೆಸರುಗಳಿಂದಲೇ ಅವರನ್ನು ಕರೆದುಕೊಳ್ಳುತ್ತಿದ್ದರು. ಒಬ್ಬರನ್ನೊಬ್ಬರು ಪರಸ್ಪರ ಭೋಲಾ, ಶಂಕರ್, ಬರ್ಗರ್, ಡಾಕ್ಟರ್ ಎಂದು ಕರೆದುಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.