ETV Bharat / entertainment

'ಪರಪಂಚ ಘಮ ಘಮ' ಅಂತಿದ್ದಾರೆ ದಿಗಂತ್​ ಟೀಂ: 'ಪೌಡರ್' ಚಿತ್ರತಂಡಕ್ಕೆ ಗಾಯಕ ಆಂಟೋನಿ ದಾಸ್ ಸಾಥ್ - Parapancha Gama Gama Song

ಬಹುನಿರೀಕ್ಷಿತ 'ಪೌಡರ್' ಚಿತ್ರದ 'ಪರಪಂಚ ಘಮ ಘಮ' ಹಾಡು ಅನಾವರಣಗೊಂಡಿದೆ.

Powder poster
ಪೌಡರ್​ ಸಿನಿಮಾ ಪೋಸ್ಟರ್ (ETV Bharat)
author img

By ETV Bharat Karnataka Team

Published : Jul 26, 2024, 2:34 PM IST

ಕನ್ನಡ ಚಿತ್ರರಂಗದ ದೂದ್ ಪೇಡಾ ಖ್ಯಾತಿಯ ದಿಗಂತ್ ಮಂಚಾಲೆ ಹಾಗೂ ಜನಪ್ರಿಯ ನಟಿ ಧನ್ಯಾ ರಾಮ್​​ಕುಮಾರ್ ತೆರೆಹಂಚಿಕೊಂಡಿರುವ ಬಹುನಿರೀಕ್ಷಿತ ಚಿತ್ರ 'ಪೌಡರ್'. ಇದೊಂದು ಹಾಸ್ಯಮಯ ಸಿನಿಮಾ. ಶೀರ್ಷಿಕೆಯಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದ್ದ ಚಿತ್ರತಂಡ ಹಾಡುಗಳನ್ನು ಅನಾವರಣಗೊಳಿಸುವ ಮೂಲಕ ಪ್ರಚಾರ ಶುರು ಹಚ್ಚಿಕೊಂಡಿದೆ. ಸಿನಿಮಾದ ಟೈಟಲ್​ಗೆ ತಕ್ಕಂತೆ ವಿಭಿನ್ನ ಶೀರ್ಷಿಕೆಯಡಿ ಹಾಡುಗಳನ್ನು ಅನಾವರಣಗೊಳಿಸುವ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದೆ ದಿಗಂತ್​ ಆ್ಯಂಡ್​ ಟೀಂ.

'ಪರಪಂಚ ಘಮ ಘಮ' ರಿಲೀಸ್​: ಕಾಮಿಡಿ ಚಿತ್ರ ಈ ತಿಂಗಳ ಆರಂಭದಲ್ಲಿ 'ಮಿಷನ್‌ ಘಮ ಘಮ' ಎಂಬ ತನ್ನ ಮೊದಲ ಗೀತೆಯನ್ನು ಅನಾವರಣಗೊಳಿಸಿ ಸದ್ದು ಮಾಡಿತ್ತು. ಇದೀಗ 'ಪೌಡರ್' ತನ್ನ ಎರಡನೇ ಗೀತೆ 'ಪರಪಂಚ ಘಮ ಘಮ' ಅನ್ನು ಬಿಡುಗಡೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದೆ. ಮೊದಲನೇ ಗೀತೆಯಾದ 'ಮಿಷನ್ ಘಮ ಘಮ' ತನ್ನ ವಿಭಿನ್ನ ಟ್ಯೂನ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ 'ಪರಪಂಚ ಘಮ ಘಮ' ಅದೇ ರೀತಿಯ ಛಾಪನ್ನು ಮೂಡಿಸುವ ಭರವಸೆ ನೀಡಿದೆ. ಪ್ರೇಕ್ಷಕರಿಗೆ ಶೀರ್ಷಿಕೆಯೇ ವಿಭಿನ್ನ ಎನಿಸುತ್ತಿದೆ.

ಹಾಡಿಗೆ ದನಿಯಾದ ಆ್ಯಂಟೋನಿ ದಾಸನ್: ಖ್ಯಾತ ಜನಪದ ಗಾಯಕ, ಬ್ಲಾಕ್ ಬಸ್ಟರ್ ಸಾಂಗ್​​ 'ಟಗರು ಬಂತು ಟಗರು' ಖ್ಯಾತಿಯ ಆ್ಯಂಟೋನಿ ದಾಸನ್ ಈ ಹಾಡಿಗೆ ದನಿಯಾಗಿರುವುದು ವಿಶೇಷ. ಮಾಸ್ ಗೀತೆಗಳಿಗೆ ಹೆಸರುವಾಸಿಯಾದ ಆ್ಯಂಟೋನಿ ಮೊದಲ ಬಾರಿಗೆ 'ಪೌಡರ್' ಚಿತ್ರದ ಈ ಲಯ ಪ್ರಧಾನ ಗೀತೆಗೆ ದನಿಯಾಗಿದ್ದು, ಸಿನಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

'ಪೌಡರ್' ಕಥೆಯೇನು? ಪೌಡರ್ ಒಂದು ಹಾಸ್ಯಭರಿತ ಚಿತ್ರ. ಇಬ್ಬರು ಯುವಕರು ಒಂದು ನಿಗೂಢ 'ಪೌಡರ್' ಪ್ರಭಾವದಿಂದಾಗಿ ದಿಢೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳೆಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುವ ಕಥೆಯೇ ಪೌಡರ್. ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ?, ಅವರ ಎಲ್ಲಾ ಕನಸುಗಳು ನನಸಾಗುವುದೇ?, ಪೌಡರ್ ಹಿಂದಿನ ಪವರ್ ಅವರಿಗೆ ತಿಳಿಯುವುದೇ? - ಇದುವೇ ಕಥೆಯ ಸಾರಾಂಶ.

ಇದನ್ನೂ ಓದಿ: ಜು.29ಕ್ಕೆ 'ಕೆ.ಡಿ' ಸಿನಿಮಾದಿಂದ ಸಿಗಲಿದೆ ಬಿಗ್​ ಅಪ್ಡೇಟ್​​: ಧ್ರುವ ಅರ್ಜಾ ಅಭಿಮಾನಿಗಳಲ್ಲಿ ಕಾತರ - KD Movie

ಚಿತ್ರತಂಡ ಹೀಗಿದೆ...: ಜನಾರ್ದನ್ ಚಿಕ್ಕಣ್ಣ ಆ್ಯಕ್ಷನ್​ ಕಟ್​ ಹೇಳಿರುವ ಪೌಡರ್ ಚಿತ್ರದಲ್ಲಿ ದಿಗಂತ್ ಮಂಚಾಲೆ, ಧನ್ಯಾ ರಾಮ್ ಕುಮಾರ್ ಜೊತೆಗೆ ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಮುಂತಾದವರು ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದು, ಕಾರ್ತಿಕ್ ಗೌಡ, ಯೋಗಿ ಜಿ ರಾಜ್ ಮತ್ತು ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ. ಸ್ಟುಡಿಯೋಸ್‌ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಹೀಗೆ ನಾನಾ ವಿಚಾರಗಳಿಂದ ಸದ್ದು ಮಾಡುತ್ತಿರುವ ಪೌಡರ್​​ ಇದೇ ಆಗಸ್ಟ್ 15ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೊದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಡ್ಯಾನ್ಸ್​​ ಮಾಡುತ್ತಲೇ ಬಿದ್ದ ಅಕ್ಷಯ್​ ಕುಮಾರ್​​: ಕಿಲಾಡಿಯ ವಿಡಿಯೋ ವೈರಲ್​​ - Akshay Kumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.