ETV Bharat / entertainment

ಚಿರಂಜೀವಿಗೆ 'ಪದ್ಮವಿಭೂಷಣ': ಧನ್ಯವಾದ ಅರ್ಪಿಸಿದ ಮೆಗಾಸ್ಟಾರ್‌

author img

By ETV Bharat Karnataka Team

Published : Jan 26, 2024, 12:36 PM IST

Updated : Jan 26, 2024, 12:49 PM IST

ತೆಲುಗಿನ ಹಸರಾಂತ ನಟ ಚಿರಂಜೀವಿ ಅವರಿಗೆ ಕೇಂದ್ರ ಸರ್ಕಾರ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ 'ಪದ್ಮವಿಭೂಷಣ' ಪ್ರಶಸ್ತಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ನಟ ಪ್ರತಿಕ್ರಿಯಿಸಿದ್ದಾರೆ.

ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ
Padma Vibhushan to Chiranjeevi

75ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತ ಸರ್ಕಾರ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದೆ. ದಕ್ಷಿಣ ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಭಾರತೀಯ ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ 'ಪದ್ಮವಿಭೂಷಣ' ಪ್ರಶಸ್ತಿ ಘೋಷಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶದ ಮೂಲಕ ಮೆಗಾಸ್ಟಾರ್ ಧನ್ಯವಾದ ಅರ್ಪಿಸಿದ್ದಾರೆ.

''ಈ ಸುದ್ದಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯುತ್ತಿಲ್ಲ. ಬಹಳ ಸಂತೋಷವಾಗಿದೆ. ಕೃತಜ್ಞನಾಗಿದ್ದೇನೆ. ನಮಗೆ ರಕ್ತ ಸಂಬಂಧವಿಲ್ಲದಿದ್ದರೂ ನೀವು (ಅಭಿಮಾನಿಗಳು) ಯಾವಾಗಲೂ ನನ್ನನ್ನು ಪ್ರೀತಿಸಿದಿರಿ, ನನ್ನನ್ನು ಅಣ್ಣ ಎಂದು ಕರೆದಿರಿ ಮತ್ತು ನಿಮ್ಮ ಕುಟುಂಬದ ಸದಸ್ಯರಂತೆ ನಡೆಸಿಕೊಂಡಿದ್ದೀರಿ. ಇಷ್ಟು ವರ್ಷಗಳಲ್ಲಿ ನನ್ನನ್ನು ಬೆಂಬಲಿಸಿದ ಮತ್ತು ಪ್ರೀತಿಸಿದ ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಈ ಗೌರವಕ್ಕಾಗಿ ಮತ್ತು ದೇಶದ ಎರಡನೇ ಅತ್ಯಂತ ಪ್ರತಿಷ್ಠಿತ ಗೌರವಕ್ಕೆ ಪಾತ್ರನಾಗುತ್ತಿರುವುದಕ್ಕಾಗಿ ಕೃತಜ್ಞ. ನನ್ನ 45 ವರ್ಷಗಳ ವೃತ್ತಿಜೀವನದಲ್ಲಿ ನಿಮ್ಮೆಲ್ಲರನ್ನೂ ರಂಜಿಸಲು ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದೇನೆ. ವೈಯಕ್ತಿಕ ಜೀವನದಲ್ಲಿ ಯಾವಾಗಲೂ ನನ್ನ ಸುತ್ತಮುತ್ತಲಿನವರಿಗೆ ಒಳ್ಳೆಯದನ್ನೇ ಮಾಡಲು ಪ್ರಯತ್ನಿಸಿದ್ದೇನೆ. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು" ಎಂದು ತಿಳಿಸಿದ್ದಾರೆ.

67ರ ಹರೆಯದ ನಟ ದಕ್ಷಿಣ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಅವರ ಗಮನಾರ್ಹ ಕೊಡುಗೆಗಳು ಮತ್ತು ಸಮಾಜ ಸೇವೆಯನ್ನು ಹುಡುಕಿ ಈ ಹಿಂದೆ ಬಂದಿದ್ದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಇದೀಗ ಸರ್ಕಾರ ಅವರಿಗೆ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಿದೆ. ಈ ವಿಚಾರ ತಿಳಿದ ಅಪಾರ ಸಂಖ್ಯೆಯ ಅಭಿಮಾನಿಗಳು ನಟನಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

1955ರ ಆಗಸ್ಟ್ 22ರಂದು ಆಂಧ್ರಪ್ರದೇಶದ ಮೊಗಲ್ತೂರು ಎಂಬಲ್ಲಿ ಜನಿಸಿದರು. ಕೊನಿಡೇಲ ಶಿವಶಂಕರ ವರಪ್ರಸಾದ್ ಎಂಬುದು ನಟನ ಮೂಲ ಹೆಸರು. ಸಿನಿಮಾ ವೃತ್ತಿಜೀವನ ಆರಂಭಿಸಿದಾಗ ಚಿರಂಜೀವಿ ಎಂದು ಹೆಸರು ಬದಲಾಯಿಸಿಕೊಂಡರು. ಚಿತ್ರರಂಗದಲ್ಲಿ ಈಗಾಗಲೇ ನಾಲ್ಕು ದಶಕ ಪೂರೈಸಿದ್ದಾರೆ. ಪುತ್ರ ರಾಮ್​ ಚರಣ್​ ಸಹ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟ. ಸಂಬಂಧಿಕರ ಪೈಕಿ ಹೆಚ್ಚಿನವರು ಚಿತ್ರರಂಗದಲ್ಲೇ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: 9 ವರ್ಷಗಳ ಬಳಿಕ ಅಸ್ಸಾಂನಲ್ಲಿ ಕೋಣ ಮತ್ತು ಪಕ್ಷಿಗಳ ಕಾಳಗ: ಫೋಟೋಗಳಿಲ್ಲಿವೆ

ತೆಲುಗು, ಹಿಂದಿ, ತಮಿಳು ಮತ್ತು ಕನ್ನಡ ಸೇರಿ 155 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಚಿರಂಜೀವಿ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ, ಹೆಸರಾಂತ ನಟ. ಈಗಾಗಲೇ ರಘುಪತಿ ವೆಂಕಯ್ಯ ಪ್ರಶಸ್ತಿ, ಮೂರು ನಂದಿ ಪ್ರಶಸ್ತಿಗಳು ಮತ್ತು ಒಂಬತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಪದ್ಮವಿಭೂಷಣ ಪಡೆದ ಭಾರತೀಯ ಚಿತ್ರರಂಗದ ಇತರೆ ದಿಗ್ಗಜರಲ್ಲಿ ವಿ.ಶಾಂತಾರಾಮ್, ಝೋಹ್ರಾ ಸೆಹಗಲ್, ಲತಾ ಮಂಗೇಶ್ಕರ್, ಅಕ್ಕಿನೇನಿ ನಾಗೇಶ್ವರ ರಾವ್, ಅಮಿತಾಭ್​ ಬಚ್ಚನ್, ದಿಲೀಪ್ ಕುಮಾರ್ ಮತ್ತು ರಜನಿಕಾಂತ್ ಸೇರಿದ್ದಾರೆ. ಸದ್ಯ ಚಿರಂಜೀವಿ ಈ ಗೌರವಕ್ಕೆ ಪಾತ್ರರಾಗಿದ್ದು, ಟಾಲಿವುಡ್​ನಲ್ಲಿ ಸಂಭ್ರಮ ಮನೆಮಾಡಿದೆ.

ಇದನ್ನೂ ಓದಿ: "ಲವ್ & ವಾರ್": ಬನ್ಸಾಲಿ ಮುಂದಿನ ಸಿನಿಮಾದಲ್ಲಿ ಆಲಿಯಾ, ರಣ್​ಬೀರ್, ವಿಕ್ಕಿ ಕೌಶಲ್

Last Updated : Jan 26, 2024, 12:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.