ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ಎಬಿಸಿ ಬುಧವಾರಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 97ನೇ ಅಕಾಡೆಮಿ ಪ್ರಶಸ್ತಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾಹಿತಿ ಪ್ರಕಾರ, ಆಸ್ಕರ್ 2025 ಮಾರ್ಚ್ 2ರಂದು (ಭಾರತದಲ್ಲಿ ಸೋಮವಾರ, ಮಾರ್ಚ್ 3) ನಡೆಯಲಿದೆ. ಕಾರ್ಯಕ್ರಮ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಜರುಗಲಿದೆ. ಸಮಾರಂಭ ಎಬಿಸಿಯಲ್ಲಿ ಪ್ರಸಾರ (ಲೈವ್) ಆಗಲಿದೆ. 1976ರಿಂದ ಈ ವಾರ್ಷಿಕ ಕಾರ್ಯಕ್ರಮ ನಡೆಯುತ್ತಿದ್ದು, ಜಾಗತಿಕವಾಗಿ 200ಕ್ಕೂ ಹೆಚ್ಚು ರಾಷ್ಟ್ರಗಳು ಸ್ಪರ್ಧಿಸಲಿದೆ.
ಈ ವರ್ಷದ ಆಸ್ಕರ್ ಕಾರ್ಯಕ್ರಮ ಮಾರ್ಚ್ 10 ರಂದು ನಡೆಯಿತು. ಅಂದಾಜು 19.5 ಮಿಲಿಯನ್ ಜನರು ಕಾರ್ಯಕ್ರಮವನ್ನು ವೀಕ್ಷಿಸಿದ್ದರು. ಕ್ರಿಸ್ಟೋಫರ್ ನೋಲನ್ ಅವರ ಒಪೆನ್‌ಹೈಮರ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತ್ತು.
ಆಸ್ಕರ್-ಸಂಬಂಧಿತ ಪ್ರಮುಖ ದಿನಾಂಕಗಳು (ವೇಳಾಪಟ್ಟಿ):
- ಸಾಮಾನ್ಯ ಪ್ರವೇಶ, ಅತ್ಯುತ್ತಮ ಚಿತ್ರ, ಸಲ್ಲಿಕೆಗೆ ಡೆಡ್ಲೈನ್ - ನವೆಂಬರ್ 17, 2024 (ಭಾನುವಾರ).
- ಗವರ್ನರ್ ಪ್ರಶಸ್ತಿಗಳು: ಡಿಸೆಂಬರ್ 9, 2024 (ಸೋಮವಾರ).
- ಪೂರ್ವಭಾವಿ ಮತದಾನ ಆರಂಭ: ಶುಕ್ರವಾರ, ಡಿಸೆಂಬರ್ 13-2024, 9 ಗಂಟೆಗೆ ಪ್ರಾರಂಭವಾಗುತ್ತದೆ.
- ಪೂರ್ವಭಾವಿ ಮತದಾನ ಮುಕ್ತಾಯ: ಮಂಗಳವಾರ, ಡಿಸೆಂಬರ್ 17, 2024, ಸಂಜೆ 5 ಗಂಟೆಗೆ ಮುಕ್ತಾಯವಾಗುತ್ತದೆ.
- ಆಸ್ಕರ್ ಶಾರ್ಟ್‌ಲಿಸ್ಟ್‌ಗಳ ಪ್ರಕಟಣೆ: ಡಿಸೆಂಬರ್ 31, 2024 (ಮಂಗಳವಾರ).
- ಅರ್ಹತಾ ಅವಧಿ ಕೊನೆಗೊಳ್ಳುವ ದಿನ: ಜನವರಿ 8, 2025 (ಬುಧವಾರ).
- ನಾಮ ನಿರ್ದೇಶನಗಳ ಮತದಾನ: ಭಾನುವಾರ, ಜನವರಿ 12, 2025ರಂದು 9 ಗಂಟೆಗೆ ಪ್ರಾರಂಭವಾಗುತ್ತದೆ.
- ನಾಮಪತ್ರಗಳ ಮತದಾನ ಮುಕ್ತಾಯ: ಶುಕ್ರವಾರ, ಜನವರಿ 17, 2025ರ ಸಂಜೆ 5 ಗಂಟೆಗೆ ಕೊನೆಗೊಳ್ಳುತ್ತದೆ.
- ಆಸ್ಕರ್ ನಾಮ ನಿರ್ದೇಶನಗಳ ಪ್ರಕಟಣೆ: ಸೋಮವಾರ, ಫೆಬ್ರವರಿ 10, 2025.
- ಆಸ್ಕರ್ ನಾಮನಿರ್ದೇಶಿತರಿಗೆ ಔತಣಕೂಟ: ಮಂಗಳವಾರ, ಫೆಬ್ರವರಿ 11, 2025.
- ಅಂತಿಮ ಮತದಾನ: ಮಂಗಳವಾರ, ಫೆಬ್ರವರಿ 18, 2025. ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗುತ್ತದೆ.
- ಅಂತಿಮ ಹಂತದ ಮತದಾನ ಮುಕ್ತಾಯ: ಫೆಬ್ರವರಿ 18ರ ಸಂಜೆ 5 ಗಂಟೆಗೆ ಮುಕ್ತಾಯವಾಗುತ್ತದೆ.
- 97ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ: ಮಾರ್ಚ್ 2, 2025 (ಭಾನುವಾರ).
ಇದನ್ನೂ ಓದಿ: ಬಣ್ಣದ ಲೋಕದಲ್ಲಿ ಬಗೆಬಗೆ ಕನಸು ಕಂಡ ಕರಾವಳಿ ಬೆಡಗಿಗೆ ನಿರಾಶೆ: ಎರಿಕಾ ಫರ್ನಾಂಡಿಸ್ ಹೇಳಿದ್ದೇನು ಗೊತ್ತೇ? - Erica Fernandes
ವಿಶ್ವಾದ್ಯಂತ ಸಿನಿಪ್ರೇಮಿಗಳು ಕಾತರದಿಂದ ಕಾಯುವ 'ಆಸ್ಕರ್' (Oscars) ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಮಾರ್ಚ್ 11ರಂದು ನಡೆಯಿತು. ಭಾರತದ ಕಾಲಮಾನದ ಪ್ರಕಾರ ಅಂದು ಬೆಳಗ್ಗೆ 4 ಗಂಟೆಗೆ ಈ ಸಮಾರಂಭ ಪ್ರಾರಂಭವಾಗಿತ್ತು. ಕಳೆದ ವರ್ಷ ಆರ್ಅರ್ಆರ್ ಸಿನಿಮಾದ ನಾಟು ನಾಟು ಹಾಡು ಎಲ್ಲೆಡೆ ಸದ್ದು ಮಾಡಿತ್ತು.