ETV Bharat / entertainment

ಜೂ.ಎನ್​ಟಿಆರ್​ ಹುಟ್ಟುಹಬ್ಬದಂದು ಪ್ರಶಾಂತ್​​ ನೀಲ್​ ನಿರ್ದೇಶನದ ಸಿನಿಮಾ ಟೈಟಲ್​ ಘೋಷಣೆ - Jr NTR - JR NTR

ನಟ ಜೂನಿಯರ್ ಎನ್​​​ಟಿಆರ್ ಜನ್ಮದಿನದಂದು ಪ್ರಶಾಂತ್ ನೀಲ್ ನಿರ್ದೇಶನದ 'ಎನ್​ಟಿಆರ್ 31' ಚಿತ್ರದ ಶೀರ್ಷಿಕೆ ಹೊರಬೀಳಲಿದೆ.

JR NTR
ಜೂನಿಯರ್ ಎನ್​ಟಿಆರ್ (ETV Bharat Archives)
author img

By ETV Bharat Karnataka Team

Published : May 17, 2024, 10:39 AM IST

ಟಾಲಿವುಡ್ ನಟ ಜೂನಿಯರ್ ಎನ್​ಟಿಆರ್ ಜನ್ಮದಿನಕ್ಕೆ ಕೌಂಟ್‌ಡೌನ್​​ ಶುರುವಾಗಿದೆ. ನೆಚ್ಚಿನ ತಾರೆಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ, ನಟನ ಹೊಸ ಚಿತ್ರಗಳಿಗೆ ಸಂಬಂಧಿಸಿದ ಅಪ್ಡೇಟ್ಸ್​ ತಿಳಿಯುವ ಕುತೂಹಲ ಅವರಲ್ಲಿದೆ.

ಇನ್ನೊಂದೆಡೆ, ವಿವಿಧ ಚಿತ್ರತಂಡಗಳು ಕೂಡ 'ಆರ್​ಆರ್​ಆರ್'​ ಸ್ಟಾರ್​​ನ ಬರ್ತ್​​ಡೇಗಾಗಿ ಕೆಲವು ಸ್ಪೆಷಲ್​ ಗಿಫ್ಟ್​​​ ರೆಡಿ ಮಾಡಿಕೊಂಡಿವೆ. ಈಗಾಗಲೇ 'ದೇವರ' ಚಿತ್ರದಿಂದ ಮೊದಲ ಹಾಡು ಅನಾವರಣಗೊಳಿಸುವುದಾಗಿ ತಿಳಿಸಿದ್ದಾರೆ.

ಜೂ.ಎನ್​​​ಟಿಆರ್ ಮತ್ತು ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಶನ್​ನಲ್ಲಿ ಮೂಡಿಬರಲಿರುವ 'ಎನ್​ಟಿಆರ್ 31' ಚಿತ್ರಕ್ಕೆ ಪವರ್ ಫುಲ್ ಟೈಟಲ್ ಫಿಕ್ಸ್ ಮಾಡಿದ್ದಾರೆ. 'ಡ್ರ್ಯಾಗನ್' ಹೆಸರು ಪರಿಗಣನೆಯಲ್ಲಿದ್ದು, ಬಹುತೇಕ ಅದೇ ಫಿಕ್ಸ್ ಎಂಬ ಮಾಹಿತಿ ಲಭಿಸಿದೆ. ಹುಟ್ಟುಹಬ್ಬದಂದು ಪೋಸ್ಟರ್ ಬಿಡುಗಡೆಯಾಗಲಿದೆ. ಅಷ್ಟರೊಳಗೆ ಶೀರ್ಷಿಕೆ ಅಂತಿಮವಾದರೆ, ಚಿತ್ರ ನಿರ್ಮಾಪಕರು ಅದೇ ಪೋಸ್ಟರ್ ಮೂಲಕ ಟೈಟಲ್​ ರಿವೀಲ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಆದಾಗ್ಯೂ, ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.

ಎನ್​ಟಿಆರ್​ 31 ಚಿತ್ರದ ಶೂಟಿಂಗ್ ಅನ್ನು ಆದಷ್ಟು ಬೇಗ ಆರಂಭಿಸುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ ಎಂದು ವರದಿಯಾಗಿದೆ. ಪ್ರಶಾಂತ್ ನೀಲ್ ಪ್ರಸ್ತುತ ಸ್ಕ್ರಿಪ್ಟ್‌ಗೆ ಫೈನಲ್​ ಟಚ್​ ಅಪ್​​ ನೀಡುವ ಕೆಲಸ ಮಾಡುತ್ತಿದ್ದಾರೆ. ಸಂಪೂರ್ಣ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ ಎಂಬ ಮಾಹಿತಿ ದೊರೆತಿದೆ. ಸದ್ಯ ಜೂ.ಎನ್​ಟಿಆರ್​​ ಸರಣಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಹಿನ್ನೆಲೆಯಲ್ಲಿ ಆ ಚಿತ್ರಗಳು ಪೂರ್ಣಗೊಂಡ ನಂತರವೇ 'ಎನ್‌ಟಿಆರ್ 31' ಸೆಟ್ಟೇರುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಆಂಧ್ರಪ್ರದೇಶದ ಪ್ರಸಿದ್ಧ ದೇಗುಲಕ್ಕೆ ₹12.5 ಲಕ್ಷ ದೇಣಿಗೆ ನೀಡಿದ ಜೂ.ಎನ್​ಟಿಆರ್​ - Jr NTR

ವಿಶ್ವದಾದ್ಯಂತ ಸದ್ದು ಮಾಡಿರುವ 'ಆರ್‌ಆರ್‌ಆರ್' ನಂತರ ಸಣ್ಣ ಬ್ರೇಕ್​​ ತೆಗೆದುಕೊಂಡಿರುವ ಜೂ.ಎನ್‌ಟಿಆರ್ ಸದ್ಯ ಸರಣಿ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ. ದೇವರ, ವಾರ್‌ 2 ಇವರ ಬಳಿ ಇದ್ದು, ಮುಂಬರುವ ಸಿನಿಮಾಗಳ ಬಗ್ಗೆ ಅಭಿಮಾನಿಗಳು ಆಸಕ್ತಿ ತೋರಿಸುತ್ತಿದ್ದಾರೆ.

'ದೇವರ' ಮೂಲಕ ಬಾಲಿವುಡ್​ ಬೆಡಗಿ ಜಾಹ್ನವಿ ಕಪೂರ್​ ಟಾಲಿವುಡ್​​ ಪ್ರವೇಶಿಸಲಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಚಿತ್ರದಲ್ಲಿ ಸೈಫ್​ ಅಲಿ ಖಾನ್​ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೇ ಮೇ 20ರಂದು (ಸೋಮವಾರ) ಜೂ.ಎನ್‌ಟಿಆರ್‌ 41ನೇ ಜನ್ಮದಿನ ಆಚರಿಸಿಕೊಳ್ಳಲಿದ್ದು, ಅಂದು ಮುಂದಿನ ಚಿತ್ರಗಳ ಅಪ್ಡೇಟ್ಸ್ ಹೊರಬೀಳುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಜೂ.ಎನ್​ಟಿಆರ್​ ಜನ್ಮದಿನಕ್ಕೆ 'ದೇವರ' ಫಸ್ಟ್ ಸಾಂಗ್​ ರಿಲೀಸ್​​ - Jr NTR Devara

ಜೂ.ಎನ್​ಟಿಆರ್​ ದೇವಸ್ಥಾನವೊಂದಕ್ಕೆ ದೇಣಿಗೆ ನೀಡಿರುವ ವಿಚಾರ ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಪ್ರಸಿದ್ಧ ಶ್ರೀ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿ ದೇವಾಲಯಕ್ಕೆ 12.5 ಲಕ್ಷ ರೂ. ಹಸ್ತಾಂತರಿಸಿರುವ ಪೋಸ್ಟ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.