'ರಂಗಿತರಂಗ' ಎಂಬ ಕನ್ನಡ ಚಿತ್ರರಂಗದ ಯಶಸ್ವಿ ಸಿನಿಮಾದ ಜೋಡಿ ನಿರೂಪ್ ಭಂಡಾರಿ ಮತ್ತು ಡೈಲಾಗ್ ಕಿಂಗ್ ಸಾಯಿ ಕುಮಾರ್ ವಿಭಿನ್ನ ಕಥಾವಸ್ತುವನ್ನು ಹೊಂದಿರೋ ಸಿನಿಮಾದಲ್ಲಿ ಮತ್ತೆ ಒಂದಾಗಿರೋದು ನಿಮಗೆ ತಿಳಿದಿರುವ ವಿಚಾರ. ಸಿನಿಮಾಗೀಗ ಅಧಿಕೃತ ಶೀರ್ಷಿಕೆ ಸಿಕ್ಕಿದೆ. ಬಹುನಿರೀಕ್ಷಿತ ಚಿತ್ರದ ಟೈಟಲ್ 'ಸತ್ಯ ಸನ್ ಆಫ್ ಹರಿಶ್ಚಂದ್ರ'. ಈ ಮೂಲಕ ಚಿತ್ರತಂಡ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
-
ಇದೊಂದು ಸಂಘರ್ಷದ ಕಥೆ!
— Nirup Bhandari (@nirupbhandari) February 6, 2024
ಸತ್ಯ- ಸುಳ್ಳಿನ ಕಥೆ,
ತಂದೆ - ಮಗನ ಕಥೆ.
An epic SAGA!
about truth and lie…
about a son and his father.
Thrilled to share the first look poster of our film
𝐒𝐚𝐭𝐲𝐚 𝐒/𝐎 𝐇𝐚𝐫𝐢𝐬𝐡𝐜𝐡𝐚𝐧𝐝𝐫𝐚
My father…My Villain
ಎಂದಿನಂತೆ ನಿಮ್ಮ ಪ್ರೀತಿ ಆಶೀರ್ವಾದ ನಮ್ಮ… pic.twitter.com/bhg4dUkrx9
ಇಂದು ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಶೀರ್ಷಿಕೆ ಬಹಿರಂಗವಾಗಿದೆ. ಮಗನ ಪಾತ್ರದಲ್ಲಿರೋ ನಿರೂಪ್ ಭಂಡಾರಿ ಅವರ ಮೊದಲ ನೋಟ ಆಕರ್ಷಕವಾಗಿದೆ. ಅಪ್ಪನ ಪಾತ್ರದಲ್ಲಿರೋ ಸಾಯಿ ಕುಮಾರ್ ಅವರ ಗತ್ತು ರಾಜ ಗಾಂಭೀರ್ಯದಿಂದ ಕೂಡಿದೆ. ಈ ಫಸ್ಟ್ ಲುಕುನಲ್ಲಿರುವ ''ನನ್ನ ತಂದೆ..... ನನ್ನ ವಿಲನ್'' ಎಂಬ ಬರಹ ನೋಡುಗರ ಕುತೂಹಲ ಕೆರಳಿಸಿದೆ. ನಿರ್ದೇಶಕ ಸಚಿನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ತಂದೆ ಮತ್ತು ಮಗನ ಕಥಾಹಂದರವನ್ನು ಹೊಂದಿರುವುದರಿಂದ ಈ ಚಿತ್ರದ ಫಸ್ಟ್ ಲುಕ್ ಅನ್ನು ನಾಯಕ ಮತ್ತು ನಿರ್ಮಾಪಕರ ತಂದೆಯರು ಜಂಟಿಯಾಗಿ ಅನಾವರಣಗೊಳಿಸಿದ್ದಾರೆ. ಸತ್ಯ ಮತ್ತು ಸುಳ್ಳಿನ ಮಧ್ಯೆ ನಡೆಯುವ ಸಂಘರ್ಷದ ಕಥೆಯನ್ನೊಂದಿರುವ 'ಸತ್ಯ ಸನ್ ಆಫ್ ಹರಿಶ್ಚಂದ್ರ' ಸಿನಿಮಾ ಹಾಸ್ಯಮಯವಾಗಿ ಮೂಡಿಬರಲಿದೆ. ಸದ್ಯ ಕೌಟುಂಬಿಕ ಸಿನಿಮಾದಂತೆ ತೋರುತ್ತಿದ್ದು, ಚಿತ್ರೀಕರಣ ತೀರ್ಥಹಳ್ಳಿ ಮತ್ತು ಚೆನ್ನಗಿರಿಯ ಆಸುಪಾಸಿನ ಸುಂದರ ತಾಣದಲ್ಲಿ ಭರದಿಂದ ಸಾಗಿದೆ.
ಇದನ್ನೂ ಓದಿ: 'ಲವ್ ಸ್ಟೋರಿಯಾನ್': ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ನಿಜ ಜೀವನದ 6 ಪ್ರೇಮಕಥೆಗಳ ಸೀರೀಸ್
ಈ ಚಿತ್ರದಲ್ಲಿ ಬೃಂದಾ ಆಚಾರ್ಯ, ಅಂಕಿತಾ ಅಮರ್, ಸ್ವಾತಿ ಗುರುದತ್, ಎಂ.ಕೆ ಮಠ, ಚೇತನ್ ದುರ್ಗಾ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಇದೆ. ಸತ್ಯ ಸನ್ ಆಫ್ ಹರಿಶ್ಚಂದ್ರ ಚಿತ್ರವನ್ನು ಸಚಿನ್ ವಾಲಿ ನಿರ್ದೇಶಿಸುತ್ತಿದ್ದು, 'ಅಂಕಿತ್ ಸಿನಿಮಾಸ್' ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ ನಿರ್ಮಿಸುತ್ತಿದ್ದಾರೆ. ಮೂಲತಃ ಪುಣೆಯವರಾದ ಅಂಕಿತ್ ಅವರು ಕನ್ನಡದ ಮೇಲಿನ ಅಭಿಮಾನದಿಂದ ಕನ್ನಡ ಚಿತ್ರವನ್ನು ನಿರ್ಮಿಸುತ್ತಿರುವುದು ಪ್ರಶಂಸನೀಯ.
ಇದನ್ನೂ ಓದಿ: ರಿಲೀಸ್ಗೆ ರೆಡಿ 'ನಗುವಿನ ಹೂಗಳ ಮೇಲೆ': ಹಿರಿತೆರೆಯಲ್ಲಿ ಮೋಡಿ ಮಾಡಲು ಸಜ್ಜಾಯ್ತು ಕಿರುತೆರೆ ಜೋಡಿ
ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರಕ್ಕೆ ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ, ಉಜ್ವಲ್ ಚಂದ್ರ ಸಂಕಲನ, ಜೋಹ ಕಬೀರ್ ವಸ್ತ್ರ ವಿನ್ಯಾಸ ಹಾಗೂ ಉಲ್ಲಾಸ್ ಹೈದೂರ್ ಅವರ ಕಲಾ ನಿರ್ದೇಶನ ಇದೆ. ಸದ್ಯ ಭರದ ಶೂಟಿಂಗ್ನಲ್ಲಿ ಬ್ಯುಸಿಯಾಗಿರೋ 'ಸತ್ಯ ಸನ್ ಆಫ್ ಹರಿಶ್ಚಂದ್ರ' ತಂಡ, ಆದಷ್ಟು ಬೇಗ ಚಿತ್ರೀಕರಣ ಪೂರ್ಣಗೊಳಿಸಿ, ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡಬೇಕೆನ್ನುವ ಯೋಜನೆ ಹಾಕಿಕೊಂಡಿದೆ.