ETV Bharat / entertainment

ಬ್ಯಾಡ್ ಕಾಮೆಂಟ್ ಮಾಡೋರಿಗೆ ಬಿಗ್ ಬಾಸ್ ಇಶಾನಿ ಕೊಟ್ರು ಸಖತ್​ ಗೂಸಾ: ಸೋಷಿಯಲ್​​ ಮೀಡಿಯಾದ 'ಅಸಲಿ ಬಣ್ಣ' ಅನಾವರಣ - Asali Banna Song - ASALI BANNA SONG

ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಬಿಗ್ ಬಾಸ್ ಖ್ಯಾತಿಯ ಇಶಾನಿ ಪೋಸ್ಟ್​​ಗಳಿಗೆ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ‌. ಅಂಥವರಿಗಾಗಿಯೇ ''ಅಸಲಿ ಬಣ್ಣ'' ಶೀರ್ಷಿಕೆಯ ಹಿಪಾಪ್​​​ ಸಾಂಗ್ ಮಾಡಿ ಇಶಾನಿ ತಿರುಗೇಟು ಕೊಟ್ಟಿದ್ದಾರೆ.

bigg boss fame Eshani
ಬಿಗ್ ಬಾಸ್ ಖ್ಯಾತಿಯ ಇಶಾನಿ (ETV Bharat)
author img

By ETV Bharat Karnataka Team

Published : Sep 14, 2024, 1:52 PM IST

ಸ್ಯಾಂಡಲ್​ವುಡ್​ನಲ್ಲಿ ಕಂಟೆಂಟ್ ಇರುವ ಆಲ್ಬಂ ಸಾಂಗ್ಸ್​​ ಬರುತ್ತಿವೆ. ಇದೀಗ ಬಿಗ್ ಬಾಸ್ ಖ್ಯಾತಿಯ ಇಶಾನಿ ಅಭಿನಯದ ''ಅಸಲಿ ಬಣ್ಣ'' ಆಲ್ಬಂ ಸಾಂಗ್ ಅನಾವರಣಗೊಂಡಿದೆ. ಹಾಡಿನ ಮೂಲಕ ಹೊಸ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಜೊತೆಗೆ ಸೋಷಿಯಲ್​​ ಮೀಡಿಯಾದಲ್ಲಿ ಮಿತಿ ಮೀರಿ ಕೆಟ್ಟ ಕಾಮೆಂಟ್ಸ್ ಮಾಡುವವರಿಗೆ ಸಖತ್​ ಗೂಸಾ ಕೊಟ್ಟಿದ್ದಾರೆ.

ಕನ್ನಡದಲ್ಲಿ ಮಹಿಳೆಯರ ಹಿಪಾಪ್ ಸಾಂಗ್ ಅಂದಾಗ ಮೊದಲು ನೆನಪಿಗೆ ಬರೋದು ಇಶಾನಿ. ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಇವರ ಪೋಸ್ಟ್​​ಗಳಿಗೆ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ‌. ಯುವತಿಯರು ಮಾಡ್ರನ್ ಡ್ರೆಸ್ ಹಾಕೋದು, ಬೋಲ್ಡ್ ಆಗಿರುವುದು ತಪ್ಪೇ? ತಮ್ಮ ಇಷ್ಟದಂತೆ ತಾವಿರೋದನ್ನು ಏಕೆ ಸಹಿಸಲ್ಲ ಎನ್ನುವುದು ಇವರ ಪ್ರಶ್ನೆ. ಅಂಥವರಿಗಾಗಿಯೇ ''ಅಸಲಿ ಬಣ್ಣ'' ಶೀರ್ಷಿಕೆಯ ಹಿಪಾಪ್​​​ ಸಾಂಗ್ ಮಾಡಿ ಇಶಾನಿ ತಿರುಗೇಟು ಕೊಟ್ಟಿದ್ದಾರೆ.

ಇಶಾನಿ ಅವರ ಯೂಟ್ಯೂಬ್ ಚಾನಲ್​​ನಲ್ಲಿ 'ಅಸಲಿ ಬಣ್ಣ' ಹಿಪ್ ಹಾಪ್ ಸಾಂಗ್​​ ರಿಲೀಸ್ ಆಗಿದೆ. ಈ ಗೀತೆಯನ್ನು ಇಶಾನಿ ಹಾಡುವುದರ ಜೊತೆಗೆ ಸ್ವತಃ ಬಣ್ಣ ಹಚ್ಚಿದ್ದಾರೆ. ಅವರ ಒಂದಷ್ಟು ಸ್ನೇಹಿತರೇ ಸೇರಿ ಈ ಹಾಡನ್ನು ಮಾಡಿದ್ದಾರೆ.

ವೆಂಕಟ್ ಅವರು ಈ ಹಾಡನ್ನು ನಿರ್ಮಿಸಿದ್ದು, ಗಿರಿ ಗೌಡ ಅವರ ನಿರ್ದೇಶನವಿದೆ. ಸಾಹಿತ್ಯಕ್ಕೆ ಇಶಾನಿ ಜೊತೆ ಮಾರ್ಟಿನ್ ಪೆನ್​​ ಹಿಡಿದಿದ್ದಾರೆ. ಕೀರ್ತನ್ ಪೂಜಾರಿ ಅವರ ಕ್ಯಾಮರಾ ಕೈಚಳಕ ಮತ್ತು ಡಿಜೆ ಲೆಥಲ್ ಅವರ ಸಂಗೀತ ಸಂಯೋಜನೆ ಈ ಹಾಡಿಗಿದೆ.

ಇದನ್ನೂ ಓದಿ: 'ಲಂಗೋಟಿ ಮ್ಯಾನ್' ಸಿನಿಮಾ ಯಾವ ಸಮುದಾಯವನ್ನೂ ಅವಮಾನಿಸಲ್ಲ: ನಿರ್ದೇಶಕಿ ಸಂಜೋತಾ ಭಂಡಾರಿ - Langoti Man movie

ಈ ಬಗ್ಗೆ ಮಾತನಾಡಿರುವ ಇಶಾನಿ, 'ಅಸಲಿ ಬಣ್ಣ' ಮೂಲಕ ಮಹಿಳೆಯರಿಗೆ ಬ್ಯಾಡ್ ಕಾಮೆಂಟ್ ಮಾಡುವವರಿಗೆ ಟಾಂಗ್ ಕೊಟ್ಟಿದ್ದೇನೆ. ಅಂಥವರಿಗೆ ನಮ್ಮ ಫೀಲಿಂಗ್ಸ್ ಅರ್ಥ ಆಗಬೇಕು. ನನ್ನ ಬಗ್ಗೆ ಯಾರೆಲ್ಲಾ ಕೆಟ್ಟ ಪದಗಳನ್ನು ಬಳಸಿದ್ದಾರೋ ಅದೇ ಪದಗಳನ್ನು ಅವರಿಗೆ ವಾಪಸ್ ಕೊಟ್ಟಿದ್ದೇನೆ. ಬಿಗ್ ಬಾಸ್ ನಡೆಯುತ್ತಿರುವಾಗಲೇ ಈ ಹಾಡನ್ನು ಬರೆದಿದ್ದೆ. ನನಗನಿಸಿದ್ದನ್ನು ಹೇಳಿಕೊಳ್ಳಲು ಇದು ಪರ್ಫೆಕ್ಟ್ ವೇ ಅನಿಸಿತು. ಮಾರ್ಟಿನ್ ಇದಕ್ಕೆ ಫೈನಲ್ ಟಚ್ ಕೊಟ್ಟಿದ್ದಾರೆ. ಈ ಹಾಡಿನ ಉದ್ದೇಶ ಶೋಷಣೆಗೆ ಒಳಗಾದ ಹೆಣ್ಣು ಮಕ್ಕಳನ್ನು ಸ್ಟ್ರಾಂಗ್ ಮಾಡುವುದು ಎಂದರು.

ಇದನ್ನೂ ಓದಿ: 'ಸಂಜು ವೆಡ್ಸ್ ಗೀತಾ' ನಿರ್ದೇಶಕರ ಹೊಸ ಸಿನಿಮಾ: ಕನ್ನಡಕ್ಕೆ ಎಂಟ್ರಿ ಕೊಟ್ಟ 'ಮೈನೆ ಪ್ಯಾರ್ ಕಿಯಾ' ಭಾಗ್ಯಶ್ರೀ ಪುತ್ರಿ - Bhagyashree Daughter Kannada Film

ನಿರ್ದೇಶಕ ಗಿರಿ ಗೌಡ ಮಾತನಾಡಿ, ಇಶಾನಿ ಅವರನ್ನು ಇಷ್ಟಪಡುವವರಾಗಿ ನಾವು ಅವರಿಗೆ ಸಹಕಾರ ನೀಡುವ ದೃಷ್ಟಿಯಿಂದ ಈ ಗೀತೆ ಮಾಡಿದ್ದೇವೆ. ಇನ್ನೂ ಒಂದಿಷ್ಟು ಗೀತೆಗಳನ್ನು ಅವರ ಜೊತೆ ಮಾಡುತ್ತೇನೆ. ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಒಂದೇ ದಿನದಲ್ಲಿ ಇದನ್ನು ಚಿತ್ರೀಕರಿಸಿದ್ದೇವೆ ಎಂದರು. ಈ ಸಾಂಗ್​ ಅನ್ನು ವಿಭಿನ್ನ ಬ್ಯುಸಿನೆಸ್​​ಗಳಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳಾದ ಸುರೇಶ್, ಮಂಜೇಶ್ ಹಾಗೂ ಮನೀಶ್ ಬಿಡುಗಡೆ ಮಾಡಿದರು. ಬಿಗ್ ಬಾಸ್ ಸ್ನೇಹಿತೆಯರಾದ ತನಿಷಾ, ಸಿರಿ ಹಾಗೂ ಐಶ್ವರ್ಯಾ ಶುಭ ಹಾರೈಸಿದರು. ನಮಗೂ ಇಂತಹ ಸಾಕಷ್ಟು ಕೆಟ್ಟ ಅನುಭವ ಆಗಿದೆ ಎಂದು ತನಿಷಾ ಕೂಡ ಹೇಳಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.