ಹೈದರಾಬಾದ್: ಲೇಡಿ ಸೂಪರ್‌ಸ್ಟಾರ್ ನಯನತಾರಾ ನಟನೆಯ ಬಹು ನಿರೀಕ್ಷಿತ 'ಮನ್ನಂಗಟ್ಟಿ' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಇನ್ನೇನು ಬಿಡುಗಡೆಯಾಗಲಿದೆ. ಚಿತ್ರತಂಡವು ಗುರುವಾರ ಶೂಟಿಂಗ್ ಸೆಟ್‌ನಲ್ಲಿರುವ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಪ್ರಿನ್ಸ್ ಪಿಕ್ಚರ್ಸ್ ಬ್ಯಾನರ್ ಅಡಿ ಖ್ಯಾತ ನಿರ್ದೇಶಕ ಡ್ಯೂಡ್ ವಿಕ್ಕಿ ಆ್ಯಕ್ಷನ್ ಹೇಳಿದ್ದು, ಲಕ್ಷ್ಮಣ್ ಕುಮಾರ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ನಯನತಾರಾ ಹೊರತು ಯೋಗಿ ಬಾಬು, ದೇವದರ್ಶಿನಿ ಚೇತನ್, ಗೌರಿ ಕಿಶನ್ ಮತ್ತು ನರೇಂದ್ರ ಪ್ರಸಾತ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿ ಬಣ್ಣ ಹಚ್ಚಿದೆ.
ಕಳೆದ ವರ್ಷವೇ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಇದೀಗ ಈ ಚಿತ್ರದ ಚಿತ್ರೀಕರಣ ಮುಗಿದಿದೆ. ಇನ್ನು ಚಿತ್ರದ ಚಿತ್ರೀಕರಣವು ಯಾವುದೇ ತೊಂದರೆ ಇಲ್ಲದೇ ಸಂಪೂರ್ಣವಾಗಿ ಯಶಸ್ವಿಯಾಗಿದ್ದಕ್ಕೆ ಚಿತ್ರತಂಡ ಬೃಹತ್ ಕೇಕ್ ಕತ್ತರಿಸಿತು. ಇದೇ ಖುಷಿಯಲ್ಲಿ ತಾರೆಯರು ಫೋಟೋಗಳಿಗೆ ಪೋಸ್ ನೀಡಿದರು. "ಲೇಡಿ ಸೂಪರ್‌ಸ್ಟಾರ್ ನಯನತಾರಾ ನಾಯಕಿಯಾಗಿ ನಟಿಸಿರುವ ಅವರ ಮುಂದಿನ ಚಿತ್ರ 'ಮನ್ನಂಗಟ್ಟಿ: ಸಿನ್ಸ್ 1960' ಚಿತ್ರೀಕರಣ ಪೂರ್ಣಗೊಂಡಿದೆ. 'ಜೈ ಭೀಮ್' ಮತ್ತು 'ಪಾ ಪಾಂಡಿ' ಖ್ಯಾತಿಯ ಸಂಗೀತ ಸಂಯೋಜಕ ಸೀನ್ ರೋಲ್ಡನ್ ಸಂಗೀತ ಸಂಯೋಜಿಸಿದ್ದಾರೆ. ಆರ್‌ಡಿ ರಾಜಶೇಖರ್ ಛಾಯಾಗ್ರಾಹಕರಾಗಿ, ಜಿ ಮದನ್ ಸಂಕಲನಕಾರರಾಗಿ ಕೆಲಸ ಮಾಡಿದ್ದಾರೆ. ಶೀಘ್ರದಲ್ಲೇ ಅಭಿಮಾನಿಗಳ ಮುಂದೆ ಚಿತ್ರ ಬರಲಿದೆ ಎಂದು ತಂಡ ಹೇಳಿಕೊಂಡಿದೆ.

ಇದರ ಹೊರತು ನಯನತಾರಾ ಶಶಿಕಾಂತ್ ನಿರ್ದೇಶನ 'ಟೆಸ್ಟ್' ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಲಿದ್ದಾರೆ. ಇದೊಂದು ಕ್ರೀಡಾ ಸಂಬಂಧಿತ ಚಿತ್ರವಾಗಿದ್ದು ಆರ್ ಮಾಧವನ್, ಸಿದ್ಧಾರ್ಥ್, ಮೀರಾ ಜಾಸ್ಮಿನ್ ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿ ನಟಿಸಲಿಲಿದೆ. ಇದಲ್ಲದೆ ಸಂದೀಪ್ ಕುಮಾರ್ ಮತ್ತು ಜಾರ್ಜ್ ಫಿಲಿಪ್ ರಾಯ್ ನಿರ್ದೇಶನದ 'ಡಿಯರ್ ಸ್ಟೂಡೆಂಟ್ಸ್' ಎಂಬ ಆ್ಯಕ್ಷನ್ ಚಿತ್ರದಲ್ಲಿಯೂ ನಯನತಾರಾ ನಟಸಲಿದ್ದಾರೆ. ನಿವಿನ್ ಪೌಲಿ ಈ ಚಿತ್ರಕ್ಕೆ ನಾಯಕ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ. 'ಕಣ್ಣಪ್ಪ' ಚಿತ್ರ ಕೂಡ ಪ್ರಗತಿಯಲ್ಲಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ನಟನೆಯ 'ಸಿಖಂದರ್'ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ - Rashmika Mandanna