ETV Bharat / entertainment

ನಾಗ ಚೈತನ್ಯ-ಶೋಭಿತಾ ಧೂಳಿಪಾಲ ಮದುವೆ: ಹಳ್ದಿ ಶಾಸ್ತ್ರದ ಫೋಟೋ, ವಿಡಿಯೋ ನೋಡಿ - NAGA CHAITANYA SOBHITA DHULIPALA

ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಜೋಡಿಯ ಹಳ್ದಿ ಶಾಸ್ತ್ರದ ಫೋಟೋ, ವಿಡಿಯೋ ವೈರಲ್​ ಆಗಿದೆ.

Naga chaitanya Sobhita Dhulipala
ನಾಗ ಚೈತನ್ಯ - ಶೋಭಿತಾ ಧೂಳಿಪಾಲ (ETV Bharat)
author img

By ETV Bharat Entertainment Team

Published : Nov 29, 2024, 1:11 PM IST

ದಕ್ಷಿಣ ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ಜೋಡಿಯ ಅದ್ಧೂರಿ ವಿವಾಹ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಜೋಡಿಯ ಹಳ್ದಿ ಸಮಾರಂಭದ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ವಧು-ವರ ಒಂದೇ ಸ್ಥಳದಲ್ಲಿ ನಡೆದ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ. ಕಾರ್ಯಕ್ರಮ ಅತ್ಯಂತ ಸಾಂಪ್ರದಾಯಿಕವಾಗಿ ನಡೆದಿದೆ. ಈ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಸದ್ಯ ಕಾರ್ಯಕ್ರಮದ ಕೆಲ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇದು ಲವ್ ಕಮ್​​ ಅರೇಂಜ್​ ಮ್ಯಾರೇಜ್​​. ಬಹುದಿನಗಳ ಪ್ರೀತಿಗೆ ಮದುವೆ ಮದ್ರೆ ಒತ್ತಲು ನಾಗ ಚೈತನ್ಯ-ಶೋಭಿತಾ ಸಜ್ಜಾಗಿದ್ದಾರೆ. ಉಭಯ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಡಿಸೆಂಬರ್​ನಲ್ಲಿ ವಿಹಾಹ ನಡೆಯಲಿದ್ದು, ಆಗಸ್ಟ್​​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದ್ಧೂರಿ ಮದುವೆ ಸಮಾರಂಭಕ್ಕೆ ಸಿದ್ಧತೆಗಳು ನಡೆದಿದ್ದು ಫೋಟೋ, ವಿಡಿಯೋಗಳಿಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಆದ್ರೆ ಇದು ಖಾಸಗಿ ಸಮಾರಂಭದಂತೆ ತೋರುತ್ತಿದೆ.

ಡಿಸೆಂಬರ್ 4ರಂದು ನಾಗ-ಶೋಭಿತಾ ಹಸೆಮಣೆ ಏರಲಿದ್ದಾರೆ. ಈ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು, ಸ್ನೇಹಿತರು ಸಾಕ್ಷಿಯಾಗಲಿದ್ದಾರೆ ಎಂದು ವರದಿಯಾಗಿತ್ತು. ಆದ್ರೆ ಜೋಡಿಯಿಂದಾಗಲಿ, ಕುಟುಂಬಸ್ಥರಿಂದಾಗಲಿ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ.

ಬಹಳ ಸಮಯದಿಂದ ಡೇಟಿಂಗ್​ನಲ್ಲಿದ್ದ ಜೋಡಿ ಎಲ್ಲಿಯೂ ತಮ್ಮ ಪ್ರೀತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ವದಂತಿಗಳು ಮಾತ್ರ ಸಿಕ್ಕಾಪಟ್ಟೆ ಹರಡಿದ್ದವು. ವೆಕೇಶನ್​ ಫೋಟೋಗಳು ಸಹ ವೈರಲ್​ ಆಗಿದ್ದವು. ವದಂತಿಗಳನ್ನು ಉದ್ದೇಶಿಸಿ ಎಲ್ಲಿಯೂ ನೇರವಾಗಿ ಏನೂ ಮಾತನಾಡಿರಲಿಲ್ಲ. ಆದ್ರೆ ಇದೇ ಸಾಲಿನ ಆಗಸ್ಟ್ 8ರಂದು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೇಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದರು.

ನಾಗ ಚೈತನ್ಯ ಅವರಿಗಿದು ಎರಡನೇ ಮದುವೆ. 2021ರಲ್ಲಿ ಸೌತ್​ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಅವರಿಂದ ವಿಚ್ಛೇದನ ಪಡೆದ ಅವರೀಗ ನಟಿ, ಬಹುಕಾಲದ ಗೆಳತಿ ಶೋಭಿತಾ ಧೂಳಿಪಾಳ ಅವರೊಂದಿಗೆ ಪಯಣ ಆರಂಭಿಸಲು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಪ್ರೇಕ್ಷಕರ ತಲೆಗೆ ಕೆಲಸ ಕೊಟ್ಟ ರಿಯಲ್​ ಸ್ಟಾರ್ ಉಪ್ಪಿ: ಡಿ.2ಕ್ಕೆ 'UI' ಚಿತ್ರದಿಂದ '𝐖𝐀𝐑𝐍𝐄𝐑'

ಆಗಸ್ಟ್ ತಿಂಗಳಲ್ಲಿ ನಡೆದ ಪ್ರೇಮಪಕ್ಷಿಗಳ ನಿಶ್ಚಿತಾರ್ಥ ಸಮಾರಂಭದ ಫೋಟೋಗಳು ಅಪಾರ ಸಂಖ್ಯೆಯ ಅಭಿಮಾನಿಗಳ ಮೊಗದಲ್ಲಿ ಖುಷಿ ತರಿಸಿತ್ತು. ಮದುವೆ ಯಾವಾಗ ಎಂಬ ಪ್ರಶ್ನೆಯೂ ಎದ್ದಿತ್ತು.

ಇದನ್ನೂ ಓದಿ: ನಾ ಸಾಮಿ ಸಾಂಗ್​ಗೆ ರಶ್ಮಿಕಾ ಮಸ್ತ್​​ ಡ್ಯಾನ್ಸ್​​​: 'ನೀವಿಲ್ಲದೇ ನನಗೆ ನಟಿಸಲು ಸಾಧ್ಯವಾಗುತ್ತಿರಲಿಲ್ಲ'ವೆಂದ ಅಲ್ಲು ಅರ್ಜುನ್

ದಕ್ಷಿಣ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆ ಹೊಂದಿರುವ ನಟಿ ಸಮಂತಾ ರುತ್​ ಪ್ರಭು ಅವರೊಂದಿಗೆ ನಾಗ ಚೈತನ್ಯ 2017ರಲ್ಲಿ ವೈವಾಹಿಕ ಜೀವನ ಆರಂಭಿಸಿದ್ದರು. ಇದು ಕೂಡಾ ಬಹಳ ವರ್ಷಗಳ ಪ್ರೀತಿ ಅಂತಲೇ ಹೇಳಬಹುದು. ಆದ್ರೆ 2021ರಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.