ದಕ್ಷಿಣ ಚಿತ್ರರಂಗದ ಬಹುಬೇಡಿಕೆ ಕಲಾವಿದರಾದ ಸಾಯಿ ಪಲ್ಲವಿ ಹಾಗೂ ನಾಗ ಚೈತನ್ಯ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ 'ತಂಡೆಲ್'. ಇಂದು ವ್ಯಾಲೆಂಟೈನ್ ಡೇ ಹಿನ್ನೆಲೆ, ಚಿತ್ರತಂಡ ಸ್ಪೆಷಲ್ ಆ್ಯಂಡ್ ಲವೆಬಲ್ ವಿಡಿಯೋ ಶೇರ್ ಮಾಡೋ ಮುಖೇನ ಅಭಿಮಾನಿಗಳಿಗೆ ಶುಭ ಕೋರಿದೆ. ಡೈಲಾಗ್ ಪ್ರೋಮೋವೊಂದನ್ನು ಅನಾವರಣಗೊಳಿಸಲಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ನೆಟ್ಟಿಗರು ತಾರೆಯರ ಮೇಲೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ತಮ್ಮ ಸಿನಿಮಾದ ಜನಪ್ರಿಯ ಡೈಲಾಗ್ಗೆ ಲಿಪ್ ಸಿಂಕ್ ಮಾಡಿದ್ದಾರೆ. ನಾಗ ಚೈತನ್ಯ ಡೈಲಾಗ್ ಹೇಳುತ್ತಿದ್ದು, ಸಾಯಿ ಪಲ್ಲವಿ ನಾಚಿ ನೀರಾಗಿದ್ದಾರೆ. ಪ್ರೇಮಿಗಳ ದಿನದ ಹಿನ್ನೆಲೆ, ಅಭಿಮಾನಿಗಳಿಗೆ ವಿಶ್ ಮಾಡುವುದರ ಜೊತೆಗೆ ಈ ಹಿಂದೆ ಬಿಡುಗಡೆ ಆದ ತಂಡೆಲ್ ಗ್ಲಿಂಪ್ಸ್ ಸ್ವೀಕರಿಸಿದ ಮೆಚ್ಚುಗೆಗೂ ಕೃತಜ್ಞತೆ ವ್ಯಕ್ತಪಡಿಸಿದರು.
ಚೈ ಎಂದು ಖ್ಯಾತರಾದ ನಾಗ ಚೈತನ್ಯ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡು, ''ತಂಡೆಲ್ ಗ್ಲಿಂಪ್ಸ್ಗೆ ಸಿಕ್ಕ ಪ್ರತಿಕ್ರಿಯೆಯಿಂದ ಸಖತ್ ಥ್ರಿಲ್ ಆಗಿದ್ದೇನೆ. ನಿಮ್ಮಲ್ಲಿ ಅನೇಕರು ಆ ಗ್ಲಿಂಪ್ಸ್ ಮೂಲಕ ನಿಮ್ಮ ಸ್ವಂತ ರೀಲ್‌ಗಳನ್ನು ಮಾಡುತ್ತಿರುವುದು ನನ್ನ ಮನ ಮುಟ್ಟಿದೆ. ಸಾಯಿ ಪಲ್ಲವಿ ಮತ್ತು ನಾನು ಕೂಡ ಅದನ್ನೇ ಮಾಡಲು ನಿರ್ಧರಿಸಿದೆವು. ಪ್ರೀತಿಯನ್ನು ಪ್ರತಿದಿನ ಆಚರಿಸಿ. ತಂಡೆಲ್ ತಂಡದ ಪರವಾಗಿ ನಿಮಗೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ.
ನಾಗ ಚೈತನ್ಯ ಪ್ರಸ್ತುತ ಹೈದರಾಬಾದ್‌ನಲ್ಲಿದ್ದರೆ, ಸಾಯಿ ಪಲ್ಲವಿ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಅವರೊಂದಿಗೆ ಜಪಾನ್‌ನಲ್ಲಿ ಮತ್ತೊಂದು ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಪ್ರೀತಿಯ ಹಬ್ಬದಂದು ತಮ್ಮ ಅಭಿಮಾನಿಗಳಿಗೆ ಶುಭ ಹಾರೈಸಲು ರೀಲ್ ಮೂಲಕ ಇಬ್ಬರೂ ವರ್ಚುಯಲ್ ಆಗಿ ಒಟ್ಟಿಗೆ ಬಂದಿದ್ದು, ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ಮತ್ತೊಮ್ಮೆ ಹೊಸಬರಿಗೆ ಧನಂಜಯ್ ಸಾಥ್: ಸೆಟ್ಟೇರಿತು 'ಡಾಲಿ ಪಿಕ್ಚರ್ಸ್'ನ 5ನೇ ಸಿನಿಮಾ
ಚಂದೂ ಮೊಂಡೇಟಿ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆಯು ಚಿತ್ರದ ಫಸ್ಟ್ ಲುಕ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. 'ಎಸೆನ್ಸ್ ಆಫ್ ತಂಡೆಲ್' ಶೀರ್ಷಿಕೆಯ ವಿಡಿಯೋ ಸುಮಾರು ಎರಡು ನಿಮಿಷಗಳಷ್ಟಿದ್ದು, ಪಾತ್ರಗಳ ಜೊತೆಗೆ ಕಥೆಯ ಒಂದು ನೋಟವನ್ನೂ ನೀಡಿತ್ತು. ಚೈತನ್ಯ ಆಡುಭಾಷೆಯಲ್ಲಿ ಮಾಸ್ ಡೈಲಾಗ್ ಹೊಡೆದಿದ್ದು, ಆಕರ್ಷಕವಾಗಿತ್ತು. ಕೊನೆಯಲ್ಲಿ ನಾಯಕಿಯ ಎಂಟ್ರಿ ಆಗಿದ್ದು, ಒಂದೆರಡು ಡೈಲಾಗ್ಸ್ ಇದ್ದವು. ಈ ಡೈಲಾಗ್ಸ್ ಸಖತ್ ಫೇಮಸ್ ಆಗಿ ನೆಟ್ಟಿಗರು ರೀಲ್ಸ್ ಮಾಡುವ ಮೂಲಕ ಬೆಂಬಲ ಸೂಚಿಸಿದ್ದರು. ಇದೀಗ ಸ್ವತಃ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಅದೇ ಡೈಲಾಗ್ಸ್ಗೆ ರೀಲ್ಸ್ ಮಾಡಿ ಅಭಿಮಾನಿಗಳನ್ನು ತಲುಪಿದ್ದಾರೆ.
ಇದನ್ನೂ ಓದಿ: ನಟಿ ಶ್ರೀಲೀಲಾ ಕೈ ಹಿಡಿಯೋ ಹುಡುಗ ಯಾವ ಗುಣ ಹೊಂದಿರಬೇಕು ಗೊತ್ತಾ?