ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಸಲ್ಮಾನ್ ಖಾನ್ ಮೇಲಿನ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಜೊತೆಗಿನ ವೈಷಮ್ಯ ಕೊನೆಗೊಳಿಸಲು 5 ಕೋಟಿ ರೂ. ನೀಡುವಂತೆ ಇತ್ತೀಚೆಗೆ ಬೆದರಿಕೆ ಹಾಕಿದ ವ್ಯಕ್ತಿ ಇದೀಗ ಕ್ಷಮೆಯಾಚಿಸಿರುವುದಾಗಿ ಮಾಹಿತಿ ಸಿಕ್ಕಿದೆ.
ಈ ವಿಚಾರವನ್ನು ಲಘುವಾಗಿ ಪರಿಗಣಿಸಬೇಡಿ. ಸಲ್ಮಾನ್ ಖಾನ್ ಬದುಕಬೇಕು, ಲಾರೆನ್ಸ್ ಬಿಷ್ಣೋಯ್ ಜೊತೆಗಿನ ವೈಷಮ್ಯವನ್ನು ಕೊನೆಗಾಣಿಸಬೇಕೆಂದರೆ 5 ಕೋಟಿ ರೂ. ನೀಡಬೇಕು. ಹಣ ಪಾವತಿ ಮಾಡದಿದ್ದರೆ, ಸಲ್ಮಾನ್ ಕಾನ್ ಪರಿಸ್ಥಿತಿ ಬಾಬಾ ಸಿದ್ದಿಕಿ ರೀತಿ ಆಗುತ್ತದೆ. ಅದಕ್ಕಿಂತಲೂ ಕೆಟ್ಟದಾಗಬಹುದೆಂದು ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸ್ಆ್ಯಪ್ ಸಂಖ್ಯೆಗೆ ಬೆದರಿಕೆ ಸಂದೇಶವೊಂದು ಬಂದಿತ್ತು. ಇದೀಗ ಅದೇ ಸಂಖ್ಯೆಯಿಂದ ಟ್ರಾಫಿಕ್ ಪೊಲೀಸರ ವಾಟ್ಸ್ಆ್ಯಪ್ಗೆ ಮತ್ತೊಂದು ಸಂದೇಶ ಬಂದಿದೆ.
Mumbai: Man who sent death threat to Salman Khan apologises, claims it was a 'mistake'
— ANI Digital (@ani_digital) October 21, 2024
Read @ANI Story | https://t.co/NTxpIAptgE#SalmanKhan #Mumbai pic.twitter.com/Z9VxLuC3DO
ಬೆದರಿಕೆ ಹಾಕಿದ ವ್ಯಕ್ತಿ ಕ್ಷಮೆಯಾಚಿಸಿರುವ ಮಾಹಿತಿ ಕೂಡ ಇದೆ. ''ನಾನು ಈ ಸಂದೇಶವನ್ನು ತಪ್ಪಾಗಿ ಕಳುಹಿಸಿದ್ದೇನೆ ಮತ್ತು ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ'' ಎಂದು ಬೆದರಿಕೆ ಹಾಕಿದ ವ್ಯಕ್ತಿಯೇ ಪುನಃ ಹೀಗೆ ಮೆಸೇಜ್ ಕಳುಹಿಸಿರುವ ಮಾಹಿತಿ ಇದೆ. ಜಾರ್ಖಂಡ್‌ನಲ್ಲಿ ಈ ಮೆಸೇಜ್ ಕಳುಹಿಸಿದ ವ್ಯಕ್ತಿ ಇರುವ ಸ್ಥಳವನ್ನು ಪತ್ತೆ ಮಾಡಿದ್ದು ಸದ್ಯ ಆತನ ಹುಡುಕಾಟದಲ್ಲಿ ಪೊಲೀಸ್ ತಂಡ ಅಲ್ಲಿಗೆ ಹೋಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಈ ಮೊದಲು ಮಾಡಿದ ಮೆಸೇಜ್ನಲ್ಲಿ ಸಲ್ಮಾನ್ ಖಾನ್ ಮತ್ತು ಲಾರೆನ್ಸ್ ಗ್ಯಾಂಗ್ ನಡುವೆ ರಾಜಿ ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಅದಕ್ಕಾಗಿ ನೀವು 5 ಕೋಟಿ ರೂಪಾಯಿ ನೀಡಬೇಕು. ಹಣ ನೀಡದಿದ್ದರೆ ಸಲ್ಮಾನ್ ಖಾನ್ ಸ್ಥಿತಿ ಬಾಬಾ ಸಿದ್ದಿಕಿಗಿಂತ ಹೀನಾಯವಾಗಲಿದೆ ಎಂದು ಎಚ್ಚರಿಸಿದ್ದ. ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು, ಈ ಪ್ರಕರಣದ ತ್ವರಿತ ತನಿಖೆಗೆ ಮುಂದಾಗಿದ್ದಾರೆ
ನಟ ಸಲ್ಮಾನ್ಗೆ ಹೆಚ್ಚಿನ ಭದ್ರತೆ: ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಮತ್ತು ನಟ ಸಲ್ಮಾನ್ ಖಾನ್ ನಡುವೆ ಆತ್ಮೀಯ ಸಂಬಂಧವಿತ್ತು. ಸಿದ್ದಿಕಿ ಹತ್ಯೆ ಬೆನ್ನಲ್ಲೇ ಇದೀಗ ನಟ ಸಲ್ಮಾನ್ ಖಾನ್ಗೆ ಭದ್ರತೆ ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್ಗೆ ಪದೇ ಪದೇ ಬೆದರಿಕೆ ಸಂದೇಶ ನೀಡುತ್ತಿರುವ ಹಿನ್ನೆಲೆ ವೈ ಪ್ಲಸ್ ಭದ್ರತೆಯನ್ನು ನೀಡಲಾಗಿದೆ. ಅವರ ಮನೆ ಮುಂದೆ 25ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇದರಲ್ಲಿ 2ರಿಂದ 4 ಎನ್ಎಸ್ಜಿ ಕಮಾಂಡೋ ಮತ್ತು ಪೊಲೀಸ್ ಪಡೆ ಇರಲಿದೆ. ಇದರ ಹೊರತಾಗಿ ಸಲ್ಮಾನ್ ಖಾನ್ ಬೆಂಗಾವಲಾಗಿ ಎರಡರಿಂದ ಮೂರು ವಾಹನ ಅವರು ಹೋದಲೆಲ್ಲಾ ಕೊತೆಯಾಗಲಿದೆ. ಸಲ್ಮಾನ್ ಖಾನ್ ಬುಲೆಟ್ಪ್ರೂಫ್ ವಾಹನದಲ್ಲಿ ಸಂಚಾರ ನಡೆಸಲಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಮೇಲಿನ ಬಿಷ್ಣೋಯಿ ವೈಷಮ್ಯ ಕೊನೆಗೊಳಿಸಲು 5 ಕೋಟಿ ನೀಡಿ; ಪೊಲೀಸರಿಗೆ ಬಂತು ಬೆದರಿಕೆ ಸಂದೇಶ