2023ರಲ್ಲಿ ಹಲವು ಚಿತ್ರಗಳು ಸೂಪರ್ ಹಿಟ್ ಆಗಿವೆ. ಗಡಿ ದಾಟಿದ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶ ಕಂಡಿವೆ. ನಿರೀಕ್ಷೆಗೂ ಮೀರಿದ ಯಶಸ್ಸಿನ ಸಾಧನೆಯನ್ನು ಹಲವು ಚಿತ್ರಗಳು ಒಳಗೊಂಡಿವೆ. ಸಿನಿಮಾಗೆ ಭಾಷೆಯ ಅಡೆತಡೆಗಳಿಲ್ಲ ಎಂಬುದನ್ನು ಸಾಬೀತು ಪಡಿಸಿವೆ. ಪ್ರೇಕ್ಷಕರ ವಲಯದಲ್ಲಿ ಸಖತ್ ಸದ್ದು ಮಾಡಿರೋ ಹಲವು ಚಿತ್ರಗಳಿವೆ. ಸೆವೆನ್ ಸ್ಕ್ರೀನ್ ಸ್ಟುಡಿಯೋ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿರೋ 2023ರ ಟಾಪ್ 8 ಚಿತ್ರಗಳ (most talked about Indian films) ಪಟ್ಟಿಯ ಪ್ರಕಾರ, ವಿಜಯ್ ಮುಖ್ಯಭೂಮಿಕೆಯ ಲಿಯೋ ಸಿನಿಮಾ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಆದಿಪುರುಷ್, ಶಾರುಖ್ ಖಾನ್ ಅವರ ಬ್ಲಾಕ್ಬಸ್ಟರ್ಗಳಾದ ಜವಾನ್, ಪಠಾಣ್ ಮತ್ತು ಡಂಕಿ ಚಿತ್ರಗಳನ್ನು ಹಿಂದಿಕ್ಕಿದೆ.
ದಳಪತಿ ವಿಜಯ್ ಅಭಿನಯದ 'ಲಿಯೋ' 2023ರ ಅಕ್ಟೋಬರ್ 18ರಂದು ಬಹುನಿರೀಕ್ಷೆಗಳೊಂದಿಗೆ ಚಿತ್ರಮಂದಿರ ಪ್ರವೇಶಿಸಿತು. 2021ರ ಬ್ಲಾಕ್‌ಬಸ್ಟರ್ ಸಿನಿಮಾ 'ಮಾಸ್ಟರ್' ನಂತರ ವಿಜಯ್ ಮತ್ತು ಕನಕರಾಜ್ ಕಾಂಬಿನೇಶನ್ನಲ್ಲಿ ಬಂದ ಚಿತ್ರವಿದು. ಪ್ರೊಡಕ್ಷನ್ ಹೌಸ್ ಬಿಡುಗಡೆ ಮಾಡಿರುವ ಅಂಕಿ - ಅಂಶಗಳ ಪ್ರಕಾರ, ಲಿಯೋ ನಂಬರ್ ಒನ್ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಅವರ ಸಲಾರ್ ಸಿನಿಮಾವಿದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ವರಿಸು ಮತ್ತು ತುನಿವು ಚಿತ್ರಗಳಿವೆ. ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರ ಜವಾನ್ 5ನೇ ಸ್ಥಾನದಲ್ಲಿದೆ. ನಂತರ ಆದಿಪುರುಷ ಸಿನಿಮಾವಿದೆ. ಕೊನೆಯ ಎರಡು ಸ್ಥಾನಗಳಲ್ಲಿ ಎಸ್ಆರ್ಕೆ ಅಭಿನಯದ ಸೂಪರ್ ಹಿಟ್ ಚಿತ್ರಗಳಾದ ಪಠಾಣ್ ಮತ್ತು ಡಂಕಿ ಸಿನಿಮಾವಿದೆ.
- " class="align-text-top noRightClick twitterSection" data="">
- ಲಿಯೋ
- ಸಲಾರ್
- ವರಿಸು
- ತುನಿವು
- ಜವಾನ್
- ಆದಿಪುರುಷ
- ಪಠಾಣ್
- ಡಂಕಿ
ಇದನ್ನೂ ಓದಿ: 'ನಿರ್ದೇಶಕರ ಪಾತ್ರಕ್ಕೆ ನ್ಯಾಯ ಒದಗಿಸುವುದು ನಟರ ಕರ್ತವ್ಯ': ಕಿರಣ್ ರಾಜ್
'ಲಿಯೋ' ವಿಶ್ವಾದ್ಯಂತ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮೂರನೇ ತಮಿಳು ಸಿನಿಮಾವಾಗಿದೆ. ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳಿಗೆ ಹೋಲಿಸಿದರೆ, 6ನೇ ಸ್ಥಾನದಲ್ಲಿದೆ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 600 ಕೋಟಿ ರೂ. ಕಲೆಕ್ಷನ್ ಮಾಡಿದೆ. ತೆರೆಕಂಡ ಸಂದರ್ಭ ಭಾರತದಾದ್ಯಂತ ಸಖತ್ ಸದ್ದು ಮಾಡಿತ್ತು. ಚಿತ್ರದಲ್ಲಿ ವಿಜಯ್ ಜೊತೆ ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಗಿಲ್ಲಿ, ಕುರುವಿ, ತಿರುಪಾಚಿ ಮತ್ತು ಆಥಿ ಸಿನಿಮಾಗಳಲ್ಲಿ ಈ ಜೋಡಿ ತೆರೆ ಹಂಚಿಕೊಂಡಿದ್ದರು. ಎಸ್ ಎಸ್ ಲಲಿತ್ ಕುಮಾರ್ ಮತ್ತು ಜಗದೀಶ್ ಪಳನಿಸಾಮಿ ನಿರ್ಮಾಣ ಮಾಡಿದ ಚಿತ್ರಕ್ಕೆ ಬಹುತೇಕ ಪಾಸಿಟಿವ್ ರೆಸ್ಪಾನ್ಸ್ ಸ್ವೀಕರಿಸಿತ್ತು.
ಇದನ್ನೂ ಓದಿ: ಸಿಧು ಮೂಸೆವಾಲಾ ತಾಯಿ ಗರ್ಭಿಣಿ ವದಂತಿ: ಗಾಯಕನ ತಂದೆ ಕೊಟ್ಟ ಸ್ಪಷ್ಟನೆಯಿದು