ETV Bharat / entertainment

'ಅಡ್ಜೆಸ್ಟ್ ಮಾಡಿಕೊಳ್ಳಲು ಒತ್ತಾಯಿಸುವವರಿಗೆ ಹೊಡೆಯುವ ಧೈರ್ಯ ನಟಿಯರಿಗಿರಬೇಕು': ನಟ ವಿಶಾಲ್ - Vishal on harassments

author img

By ETV Bharat Karnataka Team

Published : Aug 29, 2024, 7:26 PM IST

ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಇದೀಗ ತಮಿಳು ಚಿತ್ರರಂಗದಲ್ಲೂ ಸಮಸ್ಯೆಗಳಿರಬಹುದು, ನ್ಯಾಯಮೂರ್ತಿ ಹೇಮಾ ಸಮಿತಿಯಂತೆ ತಮಿಳು ಚಲನಚಿತ್ರ ಸಂಘದ ವತಿಯಿಂದಲೂ ಸಮಿತಿ ರಚಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನಟ ವಿಶಾಲ್​ ತಿಳಿಸಿದ್ದಾರೆ.

Actor Vishal
ನಟ ವಿಶಾಲ್ (ETV Bharat)

ಚೆನ್ನೈ (ತಮಿಳುನಾಡು): ಕಾಲಿವುಡ್​​ ಸೂಪರ್​ ಸ್ಟಾರ್ ವಿಶಾಲ್ ಅವರಿಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 48ನೇ ಹುಟ್ಟುಹಬ್ಬದ ಅಂಗವಾಗಿ ಚೆನ್ನೈನ ಕಿಲ್ಪಾಕ್​​ನ ವೃದ್ಧಾಶ್ರಮದಲ್ಲಿ ಉಪಹಾರ ಒದಗಿಸಿದರು. ಕಾರ್ಯಕ್ರಮದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ನಟ ವಿಶಾಲ್, ನಾನು ಯಾವಾಗಲೂ ಇಲ್ಲಿಗೆ ಭೇಟಿ ನೀಡುವ ಮೂಲಕ ನನ್ನ ಹುಟ್ಟುಹಬ್ಬ ಆಚರಣೆ ಪ್ರಾರಂಭಿಸುತ್ತೇನೆ. ಅವರನ್ನು ಭೇಟಿಯಾಗುವುದು ನನ್ನ ದೊಡ್ಡ ಸೌಭಾಗ್ಯ. ಅವರ ಆಶೀರ್ವಾದವೇ ದೊಡ್ಡ ಭಾಗ್ಯ. ನಾನು ಊಟ ಬಡಿಸಲಿಲ್ಲ. ಅದಾಗ್ಯೂ ಅವರು ನನ್ನನ್ನು ಸ್ವಾಗತಿಸಿದರು, ಆತ್ಮೀಯವಾಗಿ ಮಾತನಾಡಿಸಿದರೆಂದು ತಿಳಿಸಿದರು.

ತಮಿಳುನಾಡಿನಲ್ಲಿ ನಟಿಯರಿಗೆ ಸುರಕ್ಷಿತ ವಾತಾವರಣವಿದೆ. ನಟಿಯರಿಗೆ ವೈಯಕ್ತಿಕ ಅಂಗರಕ್ಷಕರಿರುತ್ತಾರೆ. ಆದ್ರೆ ಶೇ.20ರಷ್ಟು ಜನರಿಗೆ ಮಾತ್ರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಗುತ್ತದೆ. ಇನ್ನು, ಕೆಲವರು ಅವಕಾಶಗಳಿಂದ ವಂಚಿತರಾಗಿ ನಿರಾಶರಾಗಿದ್ದಾರೆ. ಸಿನಿಮಾ ಪ್ರವೇಶಿಸುವಾಗ, ನಾವು ಯಾವ ಸಂಸ್ಥೆಗೆ ಹೋಗುತ್ತಿದ್ದೇವೆ? ಅವು ಅಧಿಕೃತವೇ? ಅವರು ನಿಜವಾಗಿಯೂ ಸಿನಿಮಾ ಮಾಡುತ್ತಿದ್ದಾರೆಯೇ? ಎಂಬುದರ ಬಗ್ಗೆ ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು ಎಂದರು.

ಯಾರಾದರೂ ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದರೆ, ಯುವತಿ ಧೈರ್ಯದಿಂದ ರಿಯಾಕ್ಟ್ ಮಾಡಬೇಕು. ಹೊಂದಾಣಿಕೆಗೆ ಅಥವಾ ಅವರ ಬೇಡಿಕೆಗಳಿಗೆ ಸಮ್ಮತಿಸಲು ಒತ್ತಾಯಿಸಿದರೆ ಚಪ್ಪಲಿಯಿಂದ ಹೊಡೆಯುವ ಧೈರ್ಯ ಹೊಂದಿರಬೇಕು. ಮಹಿಳೆಯನ್ನು ಬಳಸಿಕೊಳ್ಳಲು ಬಯಸುವವರಿಗೆ ಶಿಕ್ಷೆಯಾಗಬೇಕು. ತಮಿಳು ಚಿತ್ರರಂಗದಲ್ಲಿ 'ಹೊಂದಾಣಿಕೆ'ಯಂತಹ ಸಮಸ್ಯೆಗಳು ಇಲ್ಲ ಎಂದು ಹೇಳಲಾಗದು. ಇಂತಹ ದೂರುಗಳು ಬಹಳ ಹಿಂದಿನಿಂದಲೂ ಇವೆ. ಇಲ್ಲಿಯೂ ಇದೇ ರೀತಿಯ ಸಮಸ್ಯೆಗಳಿರಬಹುದು. ಕೆಲ ಕಂಪನಿಗಳು ಕಚೇರಿಯನ್ನು ಸ್ಥಾಪಿಸಿ ಫೋಟೋಶೂಟ್‌ಗೆ ಮಹಿಳೆಯರನ್ನು ಬಳಸಿಕೊಳ್ಳುತ್ತವೆ. ನಾನು ಆ ವಿಚಾರವನ್ನು ಅಲ್ಲಗಳೆಯುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಕಿಚ್ಚ ಸುದೀಪ್​​ ಬರ್ತ್​​ಡೇಗೆ 3 ಬಿಗ್ ಅನೌನ್ಸ್​​​ಮೆಂಟ್ಸ್: ಏನವು? - Sudeep movies

ನಾವು ಪೊಲೀಸರಲ್ಲ. ಆದರೆ ಯಾವುದೇ ನಟಿ ಅನುಚಿತ ವರ್ತನೆ ಬಗ್ಗೆ ದೂರು ನೀಡಿದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ನ್ಯಾಯಮೂರ್ತಿ ಹೇಮಾ ಸಮಿತಿಯಂತೆ ತಮಿಳು ಚಲನಚಿತ್ರ ಸಂಘದ ವತಿಯಿಂದಲೂ ಸಮಿತಿ ರಚಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಶಿವಣ್ಣ, ಸುದೀಪ್​​ ನಿವಾಸಕ್ಕೆ ಟಾಲಿವುಡ್ ನ್ಯಾಚುರಲ್​ ಸ್ಟಾರ್ ನಾನಿ ಭೇಟಿ - Nani met Sandalwood stars

ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಹೊರಬಿದ್ದ ಬೆನ್ನಲ್ಲೇ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಯಾಗಿದೆ. ಚಿತ್ರರಂಗದ ಪ್ರಮುಖರ ವಿರುದ್ಧ ಕೆಲ ನಟಿಮಣಿಯರು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ವಿಶೇಷ ತನಿಖಾ ತಂಡ ಬುಧವಾರದಂದು ನಟಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು. ಇದರ ಬೆನ್ನಲ್ಲೇ 7 ನಟರ ವಿರುದ್ಧ ವಿವಿಧ ಪೊಲೀಸ್​ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪಗಳು ಈ ನಟರ ಮೇಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.