ETV Bharat / entertainment

ಇದು 'ಮರ್ಯಾದೆ ಪ್ರಶ್ನೆ' ಅಂತಿದ್ದಾರೆ ಸ್ಯಾಂಡಲ್​ವುಡ್​ನ ರಾಕೇಶ್ ಅಡಿಗ, ಸುನೀಲ್ ರಾವ್, ಶೈನ್‌ ಶೆಟ್ಟಿ - MARYADE PRASHNE

'ಮರ್ಯಾದೆ ಪ್ರಶ್ನೆ' ಸಿನಿಮಾ ತೆರೆಕಾಣಲು ಮುಹೂರ್ತ ನಿಗದಿಯಾಗಿದೆ.

Maryade Prashne film team
'ಮರ್ಯಾದೆ ಪ್ರಶ್ನೆ' ಚಿತ್ರತಂಡ (ETV Bharat)
author img

By ETV Bharat Karnataka Team

Published : Oct 10, 2024, 7:27 PM IST

ಇತ್ತೀಚಿನ ದಿನಗಳಲ್ಲಿ ಹೊಸ ಕಥೆಯ ಕಂಟೆಂಟ್‌ಗಳು ಹಾಗೂ ನಿರೂಪಣೆಯಲ್ಲಿ ಹೊಸತನವಿರುವ ಸಿನಿಮಾಗಳು ಹೆಚ್ಚು ಗಮನ ಸೆಳೆಯುತ್ತಿವೆ. ಈ ಸಾಲಿಗೀಗ 'ಮರ್ಯಾದೆ ಪ್ರಶ್ನೆ' ಸಿನಿಮಾ ಸೇರಿದೆ. ಈಗಾಗಲೇ ಇದು ವಿಭಿನ್ನ ಶೀರ್ಷಿಕೆ ಮೂಲಕ ಸಾಕಷ್ಟು ಸದ್ದು ಮಾಡಿದೆ.

ಆರಂಭದಿಂದಲೂ ನಾನಾ ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿರುವ ಮರ್ಯಾದೆ ಪ್ರಶ್ನೆ ಸಿನಿಮಾ ತೆರೆಕಾಣಲು ಮುಹೂರ್ತ ನಿಗದಿಯಾಗಿದೆ. ಇತ್ತೀಚೆಗೆ ಬೆಂಗಳೂರಿನ ಹೈಡ್ ಪಾರ್ಕ್ ಹೋಟೆಲ್​​ನಲ್ಲಿ ಚಿತ್ರತಂಡ ತಮ್ಮ ಅನುಭವಗಳನ್ನು ಹಂಚಿಕೊಂಡಿದೆ. ಸಕ್ಕತ್ ಸ್ಟುಡಿಯೋದ ಸಂಸ್ಥಾಪಕ ಆರ್.ಜೆ ಪ್ರದೀಪ್, ನಿರ್ದೇಶಕ ನಾಗರಾಜ್ ಸೋಮಯಾಜಿ ಸೇರಿದಂತೆ ಇಡೀ ತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

Maryade Prashne film team
'ಮರ್ಯಾದೆ ಪ್ರಶ್ನೆ' ಚಿತ್ರತಂಡ (ETV Bharat)

ನಿರ್ದೇಶಕ ನಾಗರಾಜ್ ಸೋಮಯಾಜಿ ಮಾತನಾಡಿ, ನಾನು ಪ್ರದೀಪ್ ಕ್ಲೋಸ್ ಫ್ರೆಂಡ್ಸ್. ಅದ್ಭುತ ತಾರಾಬಳಗದೊಂದಿಗೆ ಪ್ರೇಕ್ಷಕರಿಗೆ ಇಷ್ಟವಾಗುವಂತಹ ನೈಜತೆ ಇರುವ ಸಿನಿಮಾ ಮಾಡಿದ್ದೇವೆ. ತಾರಾಬಳಗದ ಜೊತೆಗೆ ನಮ್ ಟೆಕ್ನಿಕಲ್ ಟೀಂ ಕೂಡಾ ಸ್ಟ್ರಾಂಗ್ ಆಗಿದೆ. ಈ ಸಿನಿಮಾವನ್ನು ಜನರಿಗೆ ತಲುಪಿಸಲು ನಿಮ್ಮ ಪ್ರೀತಿ ಬೇಕು. ಉಳಿದುದ್ದನ್ನು ಜನ ದುಪ್ಪಟ್ಟು ಮಾಡುತ್ತಾರೆ ಎಂದರು.

ಮರ್ಯಾದೆ ಪ್ರಶ್ನೆ ಸಿನಿಮಾದಲ್ಲಿ ರಾಕೇಶ್‌ ಅಡಿಗ, ಸುನೀಲ್‌ ರಾವ್‌, ಶೈನ್‌ ಶೆಟ್ಟಿ, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು, ಪ್ರಭು ಮುಂಡ್ಕೂರ್‌, ರೇಖಾ ಕೂಡ್ಲಿಗಿ, ನಾಗೇಂದ್ರ ಶಾ, ಶ್ರವಣ್‌ ಮುಖ್ಯ ತಾರಾಗಣದಲ್ಲಿದ್ದಾರೆ. ಸಕ್ಕತ್‌ ಸ್ಟುಡಿಯೋ ಬ್ಯಾನರ್‌ನಡಿ ಪ್ರದೀಪ್‌ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಚಿತ್ರಕ್ಕೆ ಪ್ರದೀಪ್‌ ಅವರೇ ಕಥೆ ಬರೆದಿದ್ದಾರೆ. ಕ್ರಿಯೇಟಿವ್ ಹೆಡ್ ಕೂಡ ಸಾಥ್ ಕೊಟ್ಟಿದ್ದಾರೆ.

Maryade Prashne film team
'ಮರ್ಯಾದೆ ಪ್ರಶ್ನೆ' ಚಿತ್ರತಂಡ (ETV Bharat)

ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ದಿ ಬೆಸ್ಟ್ ಆ್ಯಕ್ಟರ್, ಮೈಕ್ರೋ ಮೂವಿ ಮಾಡಿದ್ದರು. ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಆರ್.ಜೆ.ಪ್ರದೀಪ್, ಸಕ್ಕತ್ ಸ್ಟುಡಿಯೋ ನಮ್ಮ ಕನಸು. ಒಂದೊಳ್ಳೆ ಸಿನಿಮಾ ಮಾಡಬೇಕು ಅನ್ನೋದು ಇತ್ತು. ನಾನು ನಾಗರಾಜ್ ಕಥೆ ಬಗ್ಗೆ ಚರ್ಚೆ ಮಾಡಿದೆವು. ಇಬ್ಬರೂ ಸೇರಿ ಸಿನಿಮಾಗಾಗಿ ಕೈ ಜೋಡಿಸಿದೆವು. ಹೀಗೆ ಶುರುವಾದ ಜರ್ನಿಯಲ್ಲಿ ನಾವು ಹಿಂದೆ ತಿರುಗಿ ನೋಡಲೇ ಇಲ್ಲ. ಒಂದೊಳ್ಳೆ ಸಿನಿಮಾ ಮಾಡಿಕೊಂಡು ಜನರಿಗೆ ತಲುಪಿಸಲು ಡೇಟ್ ಫಿಕ್ಸ್ ಮಾಡಿಕೊಂಡು ನಿಮ್ಮ ಮುಂದೆ ಬಂದಿದ್ದೇವೆ ಎಂದರು.

ಇದನ್ನೂ ಓದಿ: ಸಸ್ಪೆನ್ಸ್, ಥ್ರಿಲ್ಲರ್ ಕಥೆಯ 'ಸಂಗೀತ ಸಂತೋಷ' ಸಿನಿಮಾ ಟ್ರೇಲರ್ ರಿಲೀಸ್ ಮಾಡಿದ ಚಂದ್ರಶೇಖರ ಶಿವರಾಧ್ಯ ಸ್ವಾಮೀಜಿ

ನವೆಂಬರ್ 22ಕ್ಕೆ ಮರ್ಯಾದೆ ಪ್ರಶ್ನೆ ರಿಲೀಸ್: ಫ್ಯಾಮಿಲಿ ಎಂಟರ್​ಟೈನರ್ 'ಮರ್ಯಾದೆ ಪ್ರಶ್ನೆ' ನವೆಂಬರ್ 22ಕ್ಕೆ ಚಿತ್ರಮಂದಿರ ಪ್ರವೇಶಿಸಲಿದೆ. ಆಕರ್ಷಕ ಪೋಸ್ಟರ್ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಘೋಷಣೆ ಮಾಡಿದೆ.

ಇದನ್ನೂ ಓದಿ: 'ತಮಟೆ' ಚಿತ್ರದ ಮೂಲಕ ಶೋಷಿತ ಜನಾಂಗದ ಬದುಕು ಅನಾವರಣ: ಡಿಸಿಎಂ ಡಿ.ಕೆ.ಶಿವಕುಮಾರ್

ಈ ಚಿತ್ರದ ಪೋಸ್ಟರ್ ಇದೊಂದು ಫ್ಯಾಮಿಲಿ ಸಮೇತ ಒಟ್ಟಿಗೆ ಕುಳಿತು ನೋಡುವ ಸಿನಿಮಾ ಅನ್ನೋದನ್ನು ಹೇಳ್ತಿದೆ. ಮರ್ಯಾದೆ ಪ್ರಶ್ನೆ ಚಿತ್ರಕ್ಕೆ ಸಂದೀಪ್ ವೆಲ್ಲುರಿ ಅವರ ಕ್ಯಾಮರಾ ವರ್ಕ್ ಇದೆ. ಅರ್ಜುನ್ ರಾಮು ಸಂಗೀತ ಕೊಟ್ಟಿದ್ದಾರೆ. ರಾಜ್ಯ ಮಾತ್ರವಲ್ಲ ಹೈದ್ರಾಬಾದ್, ಚೆನ್ನೈ ಹೀಗೆ ಬೇರೆ ರಾಜ್ಯಗಳ ಪ್ರಮುಖ ನಗರಗಳ ಜೊತೆಗೆ ವಿದೇಶದಲ್ಲಿಯೂ ಮರ್ಯಾದೆ ಪ್ರಶ್ನೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.