ETV Bharat / entertainment

ಮಣಿರತ್ನಂ - ಕಮಲ್​ ಹಾಸನ್​ ಜೋಡಿಯ 'ಥಗ್​ ಲೈಫ್​' ಶೂಟಿಂಗ್​ ಪ್ರಾರಂಭ

35 ವರ್ಷಗಳ ಬಳಿಕ ಕಮಲ್​ ಹಾಸನ್​ ಹಾಗೂ ಮಣಿರತ್ನಂ ಕಾಂಬಿನೇಷನ್​ನಲ್ಲಿ ಬರುತ್ತಿರುವ ಥಗ್​ ಲೈಪ್​ ಸಿನಿಮಾ ಶೂಟಿಂಗ್​ ಆರಂಭಿಸಿರುವ ಚಿತ್ರತಂಡ ಪಾತ್ರವರ್ಗದ ಕುರಿತು ವಿಶೇಷ ವಿಡಿಯೋ ಹಂಚಿಕೊಂಡಿದೆ.

author img

By ETV Bharat Karnataka Team

Published : Jan 24, 2024, 6:52 PM IST

thug-life-shooting-begins-today
ಮಣಿರತ್ನಂ- ಕಮಲ್​ ಹಾಸನ್​ ಜೋಡಿಯ 'ಥಗ್​ ಲೈಫ್​' ಶೂಟಿಂಗ್​ ಪ್ರಾರಂಭ

ಹೈದರಾಬಾದ್​: ತಮಿಳು ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ನಿರ್ದೇಶಕ ಮಣಿರತ್ನಂ ಹಾಗೂ ನಟ ಉಳಗನಾಯಗನ್​ ಕಮಲ್​ ಹಾಸನ್​ ಅವರ ಕಾಂಬಿನೇಷನ್​ನಲ್ಲಿ ಬರುತ್ತಿರುವ 'ಥಗ್​ ಲೈಫ್​' ಸಿನಿಮಾದ ಚಿತ್ರೀಕರಣ ಇಂದು ಚೆನ್ನೈನಲ್ಲಿ ಆರಂಭವಾಗಿದೆ. ಸಿನಿಮಾದ ಪಾತ್ರವರ್ಗದ ಕುರಿತು ವಿಶೇಷ ಪ್ರೋಮೋ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡಿರುವ ಚಿತ್ರ ನಿರ್ಮಾಣ ಸಂಸ್ಥೆಗಳು ಇಂದು ಚಿತ್ರೀಕರಣ ಪ್ರಾರಂಭಿಸಿರುವುದಾಗಿ ಘೋಷಿಸಿವೆ.

ಪ್ಯಾನ್​ ಇಂಡಿಯಾ ಸಿನಿಮಾಗಳಾದ ಕಲ್ಕಿ 2989AD ಹಾಗೂ ಇಂಡಿಯನ್​ 2 ಚಿತ್ರೀಕರಣ ಪೂರ್ಣಗೊಳಿಸಿರುವ ಕಮಲ್​ ಹಾಸನ್​ ಇಂದು ಥಗ್​ ಲೈಪ್​ ಸೆಟ್​ಗೆ ಎಂಟ್ರಿಯಾಗಿದ್ದಾರೆ. ಪಿರಿಯಾಡಿಕಲ್​ ಆ್ಯಕ್ಷನ್​ ಎಂಟರ್​ಟೈನರ್​ ಆಗಿ ಸಿನಿಮಾ ತಯಾರಾಗುತ್ತಿದೆ. 'ನಾಯಗನ್​' ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಈ ಜೋಡಿ 35 ವರ್ಷಗಳ ನಂತರ 'ಥಗ್​ ಲೈಫ್​' ಸಿನಿಮಾದಲ್ಲಿ ಮತ್ತೆ ಒಂದಾಗಿದೆ. ಅಂದು ನಾಯಗನ್​ ಮೂಲಕ ಸಿನಿರಂಗದಲ್ಲಿ ಸಂಚಲನ ಮೂಡಿಸಿದ್ದ ಕಮಲ್​ ಹಾಸನ್​ ಹಾಗೂ ಮಣಿರತ್ನಂ ಕಾಂಬಿನೇಷನ್​ನ ಈ ಸಿನಿಮಾದ ಮೇಲೆ ಇದೀಗ ಸಿನಿಪ್ರಿಯರ ನಿರೀಕ್ಷೆ ಹೆಚ್ಚಾಗಿದೆ. ಇದು ಕಮಲ್​ ಹಾಸನ್​ ಅವರು 234ನೇ ಸಿನಿಮಾವಾಗಿದ್ದು, ಎರಡು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಪ್ರೋಮೋ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ಚಿತ್ರದ ಪಾತ್ರವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು, ಈ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಸೌತ್​ ಸಿನಿಮಾರಂಗದ ಹಲವು ತಾರೆಯರು ಉಳಗನಾಯಗನ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ತಮಿಳು ಚಿತ್ರರಂಗದ ಜಯಂ ರವಿ, ತ್ರಿಶಾ, ಐಶ್ವರ್ಯ ಲಕ್ಷ್ಮೀ, ಗೌತಮ್​ ಕಾರ್ತಿಕ್​, ಮಲಯಾಳಂ ಚಿತ್ರರಂಗದ ದುಲ್ಕರ್​ ಸಲ್ಮಾನ್​, ಜೋಜು ಜಾರ್ಜ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದೊಡ್ಡ ಬಜೆಟ್​ನಲ್ಲಿ ಅದ್ಧೂರಿ ಸಿನಿಮಾ: ತಮಿಳು ಚಿತ್ರರಂಗದ ಸ್ಟಾರ್​ ನಿರ್ದೇಶಕ ಹಾಗೂ ಸ್ಟಾರ್​ ನಟರೊಬ್ಬರ ಪ್ಯಾನ್​ ಇಂಡಿಯಾ ಸಿನಿಮಾಗೆ ಮೂರು ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಬಂಡವಾಳ ಹೂಡುತ್ತಿವೆ. ನಟ ಕಮಲ್​ ಹಾಸನ್​ ಒಡೆತನದ ರಾಜ್​ ಕಮಲ್​ ಫಿಲ್ಮ್ಸ್​ ಇಂಟರ್​ನ್ಯಾಷನಲ್​, ನಟ, ರಾಜಕಾರಣಿ ಉದಯನಿಧಿ ಸ್ಟ್ಯಾಲಿನ್​ ಒಡೆತನದ ರೆಡ್​ ಜೈಂಟ್​ ಪಿಕ್ಚರ್ಸ್​ ಹಾಗೂ ಮಣಿರತ್ನಂ ಅವರ ಮದ್ರಾಸ್​ ಟಾಕೀಸ್​ ದೊಡ್ಡ ಬಜೆಟ್​ನಲ್ಲಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿವೆ. ನಟನೆ ಹಾಗೂ ನಿರ್ದೇಶನದ ಜೊತೆಗೆ ಕಮಲ್​ ಹಾಸನ್​ ಹಾಗೂ ಮಣಿರತ್ನಂ ಅವರು 'ಥಗ್​ ಲೈಫ್'​ ಸಿನಿಮಾ ನಿರ್ಮಾಣದ ಹೊಣೆಯನ್ನೂ ಹೊತ್ತಿರುವ ಕಾರಣ, ಫ್ಯಾನ್ಸ್​ ನಿರೀಕ್ಷೆ ದುಪ್ಪಟ್ಟಾಗಿದೆ.

ಕೆಲವು ತಿಂಗಳ ಹಿಂದೆ ಥಗ್​ ಲೈಫ್​ ಚಿತ್ರದ ಪ್ರೀ ಪ್ರೊಡಕ್ಷನ್​ ಕೆಲಸಗಳನ್ನು ಪ್ರಾರಂಭಿಸಿದ್ದ ಚಿತ್ರತಂಡ, ಇಂದು ಚಿತ್ರೀಕರಣಕ್ಕೆ ನಾಂದಿ ಹಾಡಿದೆ. ಎಕ್ಸ್​ನಲ್ಲಿ ವಿಶೇಷ ವಿಡಿಯೋ ಹಂಚಿಕೊಂಡಿರುವ ಮದ್ರಾಸ್​ ಟಾಕೀಸ್​, 'ಅಧಿಕಾರ, ದಂಗೆ ಮತ್ತು ವಿಜಯದ ಮಹಾಕಾವ್ಯದ ಕಥೆ. #ThugLife ಶೂಟಿಂಗ್​ ಇಂದು ಪ್ರಾರಂಭ' ಎಂದು ಪೋಸ್ಟ್​ಗೆ ಶೀರ್ಷಿಕೆ ನೀಡಿದ್ದಾರೆ.

ಮಣಿರತ್ನಂ ಅವರೇ ಕಥೆ ಬರೆದು ಥಗ್​ ಲೈಪ್​ಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಹಿಂದೆ KH234 ಎಂದು ಕರೆಯಲಾಗುತ್ತಿದ್ದ ಸಿನಿಮಾಗೆ ನವೆಂಬರ್​ನಲ್ಲಿ ಥಗ್​ ಲೈಫ್​ ಎಂದು ಹೆಸರು ಘೋಷಣೆ ಮಾಡಲಾಗಿತ್ತು. ಈ ಸಿನಿಮಾವನ್ನು ದರೋಡೆಕೋರರ ಡ್ರಾಮಾ ಎಂದು ಬಿಂಬಿಸಲಾಗಿದೆ.

ಸಿನಿಮಾದ ತಾಂತ್ರಿಕ ತಂಡವನ್ನು ಗಮನಿಸುವುದಾದರೆ, ರವಿ ಕೆ. ಚಂದ್ರನ್ ಸಿನಿಮಾಟೋಗ್ರಫಿ​, ಶ್ರೀಕಾರ್​ ಪ್ರಸಾದ್ ಸಂಕಲನ​, ಅನ್ಬರಿವ್​ ಸಾಹಸ ನಿರ್ದೇಶನ, ಸಂಗೀತ ಮಾಂತ್ರಿಕ ಎ.ಆರ್​ ರೆಹಮಾನ್​ ಸಂಗೀತ ನಿರ್ದೇಶನ ಈ ಚಿತ್ರಕ್ಕಿರಲಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಚಿತ್ರದ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಈ ವರ್ಷದ ಕೊನೆಯಲ್ಲಿ ಪ್ರಕಟಿಸಲಾಗುವುದು ಎಂದು ಚಿತ್ರತಂಡ ಹೇಳಿದೆ.

ಇದನ್ನೂ ಓದಿ: ಹೊಸ ನಿರ್ಮಾಣ ಸಂಸ್ಥೆ ತೆರೆದ 'ಕಬ್ಜ' ನಿರ್ದೇಶಕ ಆರ್‌.ಚಂದ್ರು; 5 ಪ್ಯಾನ್​​​​​ ಇಂಡಿಯಾ ಸಿನಿಮಾ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.