ETV Bharat / entertainment

'ಸಂಜು ವೆಡ್ಸ್ ಗೀತಾ' ನಿರ್ದೇಶಕರ ಹೊಸ ಸಿನಿಮಾ: ಕನ್ನಡಕ್ಕೆ ಎಂಟ್ರಿ ಕೊಟ್ಟ 'ಮೈನೆ ಪ್ಯಾರ್ ಕಿಯಾ' ಭಾಗ್ಯಶ್ರೀ ಪುತ್ರಿ - Bhagyashree Daughter Kannada Film - BHAGYASHREE DAUGHTER KANNADA FILM

ಕನ್ನಡದ ಬಹುನಿರೀಕ್ಷಿತ ಚಿತ್ರ 'ಸಂಜು ವೆಡ್ಸ್ ಗೀತಾ 2' ನಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ನಾಗಶೇಖರ್ ಅವರ ಮತ್ತೊಂದು ಚಿತ್ರ 'ಕ್ಯೂ' (Q). ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ‌ ಮಗ ನಿರಂಜನ್ ಸುಧೀಂದ್ರ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ನಾಯಕಿ ಪಾತ್ರದಲ್ಲಿ 'ಮೈನೆ ಪ್ಯಾರ್ ಕಿಯಾ' ಸಿನಿಮಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರ ಪುತ್ರಿ ಅವಂತಿಕಾ ದಸ್ಸಾನಿ ಕಾಣಿಸಿಕೊಳ್ಳಲಿದ್ದಾರೆ.

Avantika Dasani Kannada Film Q
ಕನ್ನಡ ಸಿನಿಮಾದಲ್ಲಿ ನಟಿ ಭಾಗ್ಯಶ್ರೀ ಪುತ್ರಿ ಅವಂತಿಕಾ (ETV Bharat)
author img

By ETV Bharat Entertainment Team

Published : Sep 13, 2024, 12:46 PM IST

ತಾರೆಗಳ ಮಕ್ಕಳು ಹಾಗೂ ಕುಟುಂಬಸ್ಥರು ಸಿನಿಮಾ ಇಂಡಸ್ಟ್ರಿಗೆ ಬರುವ ಟ್ರೆಂಡ್ ಎಲ್ಲ ಭಾಷೆಗಳಲ್ಲೂ ಇದೆ. ಮಿಶ್ರ ಪ್ರತಿಕ್ರಿಯೆಗಳ ನಡುವೆ ಆ ಟ್ರೆಂಡ್​ ಮುಂದುವರಿದಿದೆ ಕೂಡಾ. ಸದ್ಯ ಸ್ಯಾಂಡಲ್​ವುಡ್​​ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ‌ ಮಗ ನಿರಂಜನ್ ಸುಧೀಂದ್ರ ಅವರು 'ಸೆಕೆಂಡ್ ಆಫ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.

ಸದ್ಯ ಸೂಪರ್ ಸ್ಟಾರ್ ಸಿನಿಮಾ ಮಾಡುತ್ತಿರುವ ನಿರಂಜನ್‌ ಸುಧೀಂದ್ರ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರದ ಹೆಸರು 'ಕ್ಯೂ' (Q). ವಿಭಿನ್ನ ಶೀರ್ಷಿಕೆಯ ಸಿನಿಮಾವನ್ನು ನಿರ್ದೇಶಕ ನಾಗಶೇಖರ್ ಆ್ಯಕ್ಷನ್​​ ಕಟ್​ ಹೇಳುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ, ಬಾಲಿವುಡ್​​ನ 'ಮೈನೆ ಪ್ಯಾರ್ ಕಿಯಾ' ಸಿನಿಮಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರ ಪುತ್ರಿ ಅವಂತಿಕಾ ದಸ್ಸಾನಿ ಕನ್ನಡ ಚಿತ್ರರಂಗಕ್ಕೆ ಬರ್ತಿರುವುದು. ಈಗಾಗಲೇ ಅವಂತಿಕಾ ಮಿಥ್ಯಾ ಸಿನಿಮಾದಿಂದ ಬಾಲಿವುಡ್​​ನಲ್ಲಿ ಗಮನ ಸೆಳೆದಿದ್ದು, ಅವರ ಜೊತೆ ನಿರ್ದೇಶಕ ನಾಗಶೇಖರ್ ಮಾತುಕತೆ ನಡೆಸಿದ್ದಾರೆ.

ನಾಗಶೇಖರ್ ನಿರ್ದೇಶನದ ಬಹುನಿರೀಕ್ಷಿತ 'ಸಂಜು ವೆಡ್ಸ್ ಗೀತಾ 2' ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಈ ಮಧ್ಯೆ ನಾಗಶೇಖರ್ ಈ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿದಂತೆ 3 ಭಾಷೆಗಳಲ್ಲಿ ಸಿನಿಮಾ ಬಿಗ್ ಬಜೆಟ್​​ನಲ್ಲಿ ನಿರ್ಮಾಣವಾಗುತ್ತಿದೆ.

Avantika Dasani
ಕನ್ನಡ ಸಿನಿಮಾದಲ್ಲಿ ನಟಿ ಭಾಗ್ಯಶ್ರೀ ಪುತ್ರಿ ಅವಂತಿಕಾ (ETV Bharat)

ಇದನ್ನೂ ಓದಿ: ಅರ್ಜುನ ಅವಧೂತರ ನಿವಾಸಕ್ಕೆ ನಟ ಧ್ರುವ ಸರ್ಜಾ ಭೇಟಿ: 'ಮಾರ್ಟಿನ್‌' ಯಶಸ್ಸಿಗೆ ಆಶೀರ್ವಾದ ಪಡೆದ ನಟ - Dhruva Sarja

'ಕ್ಯೂ' (Q) ಚಿತ್ರವನ್ನು ನಾಗಶೇಖರ್ ಮ್ಯಾಜಿಕ್ಸ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಆ್ಯಕ್ಷನ್​ ಕಟ್​ ಹೇಳುತ್ತಿರುವ ನಾಗಶೇಖರ್ ಕಥೆ, ಚಿತ್ರಕಥೆಯ ಜೊತೆಗೆ ಸಂಗೀತದ ಜವಾಬ್ದಾರಿಯನ್ನೂ ಸಹ ತಾವೇ ಹೊತ್ತಿದ್ದಾರೆ. ರಾಮ್ ಚಿರು ಲೈನ್ ಪ್ರೊಡ್ಯೂಸರ್ ಆಗಿರುವ ಈ ಚಿತ್ರವನ್ನು ಭಾವನಾ ರವಿ ಪ್ರೆಸೆಂಟ್ ಮಾಡಲಿದ್ದಾರೆ. ಜೆ.ಚಕ್ರವರ್ತಿ ಸಂಭಾಷಣೆ ಬರೆಯುತ್ತಿದ್ದು, ಮುಂದಿನ ತಿಂಗಳಿನಿಂದ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

ಇದನ್ನೂ ಓದಿ: ನಟಿ ಮಲೈಕಾ ಅರೋರಾ ಮಲತಂದೆ ಆತ್ಮಹತ್ಯೆ: ಮರಣೋತ್ತರ ಪರೀಕ್ಷೆಯಲ್ಲೇನಿದೆ? - Malaika Stepfather Autopsy Report

2011ರ ಏಪ್ರಿಲ್​ 1ರಂದು ತೆರೆಕಂಡ 'ಸಂಜು ವೆಡ್ಸ್ ಗೀತಾ' ಸೂಪರ್​ ಹಿಟ್​​ ಆಗಿತ್ತು. ಒಂದು ದಶಕದ ನಂತರ ಸೆಟ್ಟೇರಿದ ಸೀಕ್ವೆಲ್​ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಶ್ರೀನಗರ ಕಿಟ್ಟಿ ಮತ್ತು ಮೋಹಕತಾರೆ ರಮ್ಯಾ ಮೊದಲ ಭಾಗದಲ್ಲಿ ಗಮನ ಸೆಳೆದಿದ್ದರು. ಇದೀಗ ಎರಡನೇ ಭಾಗದಲ್ಲಿ ಶ್ರೀನಗರ ಕಿಟ್ಟಿ ಜೊತೆ ಡಿಂಪಲ್​ ಕ್ವೀನ್​​​ ರಚಿತಾ ರಾಮ್​​​ ತೆರೆಹಂಚಿಕೊಂಡಿದ್ದು, ಮೊದಲ ಭಾಗದ ನಿರ್ದೇಶಕರೇ ಎರಡನೇ ಭಾಗಕ್ಕೂ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.