ETV Bharat / entertainment

ಮಹೇಶ್​ ಬಾಬು ನಮ್ರತಾ 19ನೇ ವಿವಾಹ ವಾರ್ಷಿಕೋತ್ಸವ: ರೊಮ್ಯಾಂಟಿಕ್​ ಫೊಟೋ ಹಂಚಿಕೊಂಡ ನಟ - ಮಹೇಶ್ ಬಾಬು

ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ತಮ್ಮ 19ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

Mahesh Babu Namrata Shirodkar
ಮಹೇಶ್ ಬಾಬು ನಮ್ರತಾ ಶಿರೋಡ್ಕರ್
author img

By ETV Bharat Karnataka Team

Published : Feb 10, 2024, 2:32 PM IST

ಸೌತ್​ ಸೂಪರ್​ ಸ್ಟಾರ್ ಮಹೇಶ್ ಬಾಬು ಹಾಗೂ ನಟಿ ನಮ್ರತಾ ಶಿರೋಡ್ಕರ್ ದಾಂಪತ್ಯ ಜೀವನಕ್ಕೆ 19 ವರ್ಷಗಳ ಸಂಭ್ರಮ. ಕುಟುಂಬಸ್ಥರು, ಸಿನಿ ಸ್ನೇಹಿತರು ಸೇರಿದಂತೆ ಅಭಿಮಾನಿಗಳು ಈ ಬೆಸ್ಟ್​​ ಕಪಲ್​​ಗೆ ಶುಭಾಶಯ ಕೋರುತ್ತಿದ್ದಾರೆ. ಸ್ಟಾರ್ ಕಪಲ್​ ಕೂಡ ಬಹಳ ಪ್ರೀತಿಯಿಂದ ಪರಸ್ಪರ ವಿಶ್ ಮಾಡಿಕೊಂಡಿದ್ದಾರೆ.

ತಮ್ಮ 19ನೇ ವಿವಾಹ ವಾರ್ಷಿಕೋತ್ಸವ ಹಿನ್ನೆಲೆ ನಟ ಮಹೇಶ್​ ಬಾಬು ಅವರು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಪತ್ನಿ ನಮ್ರತಾ ಶಿರೋಡ್ಕರ್ ಜೊತೆಗಿನ ಬಹಳ ಹಳೇ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ತಮ್ಮ ಮೊದಲ ದಿನಗಳಲ್ಲಿ ಕ್ಲಿಕ್ಕಿಸಿದಂತಿದ್ದು, ಬಹಳ ರೊಮ್ಯಾಂಟಿಕ್​ ಆಗಿದೆ. ಫೋಟೋ ಹಂಚಿಕೊಂಡ ನಟ, ''ಪ್ರೀತಿ, ನಗು ಸೇರಿದಂತೆ ಜೀವನದ ಎಲ್ಲ ಸುಂದರ ಕ್ಷಣಗಳ ಪಾಲುದಾರರು. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎನ್​ಎಸ್​ಜಿ'' ಎಂದು ಬರೆದುಕೊಂಡಿದ್ದಾರೆ. ಫೋಸ್ಟ್ ಶೇರ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ನಮ್ರತಾ, ''ಇಂದು, ಎಂದೆಂದಿಗೂ ನಿಮ್ಮನ್ನು ಪ್ರೀತಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

ನಟಿ ನಮ್ರತಾ ಶಿರೋಡ್ಕರ್ ಕೂಡ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ರೊಮ್ಯಾಂಟಿಕ್​ ಫೊಟೋ ಶೇರ್ ಮಾಡಿ, ''ನಿಮ್ಮೊಂದಿಗೆ ಪ್ರೀತಿ, ನಗು ಮತ್ತು ಸಂತೋಷದ ಮತ್ತೊಂದು ವರ್ಷವನ್ನು ಆಚರಿಸುತ್ತಿದ್ದೇನೆ. ಮೈ ಫಾರೆವರ್​​ ಆ್ಯಂಡ್​ ಆಲ್ವೇಸ್​​'' ಎಂದು ಬರೆದುಕೊಂಡಿದ್ದಾರೆ.

2000ರಲ್ಲಿ ವಂಶಿ ಸಿನಿಮಾ ಸೆಟ್‌ನಲ್ಲಿ ಇಬ್ಬರೂ ಪರಿಚಯರಾದರು. ಈ ಚಿತ್ರದಲ್ಲಿ ಇಬ್ಬರೂ ಸ್ಕ್ರೀನ್​​ ಶೇರ್ ಮಾಡಿದ್ದಾರೆ. ಈ ಸಂದರ್ಭ ಇಬ್ಬರ ನಡುವೆ ಪ್ರೇಮಾಂಕುರವಾಯಿತು. 2005ರ ಫೆಬ್ರವರಿ 10ರಂದು ತಮ್ಮ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದರು. ಈ ತಾರಾ ದಂಪತಿಗೆ ಗೌತಮ್ ಘಟ್ಟಮನೇನಿ ಎಂಬ ಮಗ ಮತ್ತು ಸಿತಾರಾ ಘಟ್ಟಮನೇನಿ ಎಂಬ ಮಗಳು ಇದ್ದಾರೆ. ಬಾಲಿವುಡ್​​ ಸೂಪರ್ ಸ್ಟಾರ್ ಸಲ್ಮಾನ್​ ಖಾನ್​ ಅವರ ಜಬ್ ಪ್ಯಾರ್ ಕಿಸೀಸೆ ಹೋತಾ ಹೈ ಚಿತ್ರದಲ್ಲಿಯೂ ನಮ್ರತಾ ಕಾಣಿಸಿಕೊಂಡಿದ್ದರು. ಆದರೆ ಮದುವೆ ಬಳಿಕ ಸಿನಿಮಾಗಳಿಮದ ದೂರ ಉಳಿದರು. ಅದಾಗ್ಯೂ ಸೋಷಿಯಲ್​ ಮೀಡಿಯಾಗಳಲ್ಲಿ ಸಕ್ರಿಯಾಗಿರೋ ಮುಖೇನ, ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ಇದನ್ನೂ ಓದಿ: ಜೂ.​ಎನ್​​ಟಿಆರ್ ನಟನೆಯ 'ದೇವರ' ಸಿನಿಮಾಗೆ ಮತ್ತೋರ್ವ ನಟಿ ಎಂಟ್ರಿ

ಕೊನೆಯದಾಗಿ, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಗುಂಟೂರು ಕಾರಂ ಚಿತ್ರದಲ್ಲಿ ಮಹೇಶ್ ಬಾಬು ಕಾಣಿಸಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಚಿತ್ರ ಯಶಸ್ವಿಯಾಗಿದೆ. ಸದ್ಯ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

ಇದನ್ನೂ ಓದಿ: ರಿಷಬ್​ ಪ್ರಗತಿ ದಾಂಪತ್ಯಕ್ಕೆ 8 ವರ್ಷಗಳ ಸಂಭ್ರಮ: ಕಾಂತಾರ ಸ್ಟಾರ್​ನ ಲವ್​ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.