ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಆಗಮನ ಮುಂದುವರಿದಿದೆ. ಕಂಟೆಂಟ್ ಆಧಾರಿತ ಸಿನಿಮಾಗಳೊಂದಿಗೆ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಗಮನ ಸೆಳೆಯುತ್ತಿದ್ದಾರೆ. ಕೆಲವರಿಗೆ ಈ ಸಿನಿರಂಗ ಕೈ ಹಿಡಿದರೆ, ಒಂದಿಷ್ಟು ಮಂದಿ ಒಂದೆರಡು ಚಿತ್ರಗಳನ್ನು ಮಾಡಿ ಸುಮ್ಮನಾಗುತ್ತಾರೆ. ಇದೀಗ 'ಮಾರಿಗೆ ದಾರಿ' ಎಂಬ ಚಿತ್ರತಂಡ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿಕೊಂಡು, ಬಿಡುಗಡೆಗೆ ಎದುರು ನೋಡುತ್ತಿದೆ.
ಬಿಡುಗಡೆಗೆ ಸಜ್ಜಾಗುತ್ತಿರುವ 'ಮಾರಿಗೆ ದಾರಿ' ತನ್ನ ಫಸ್ಟ್ ಲುಕ್ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಹೊಸತೇನನ್ನೋ ಹೇಳಲು ಹೊರಟಿರುವಂತೆ ಭಾಸವಾಗುವ ಈ ಟೀಸರ್ಲ್ಲಿ ಕಥೆಯ ಸುಳಿವನ್ನು ಬಿಟ್ಟು ಕೊಡದೇ, ಹೀರೋ ಕ್ಯಾರೆಕ್ಟರ್ನ ಒಂದಷ್ಟು ಚಹರೆಗಳನ್ನು ಪ್ರೇಕ್ಷಕರ ಮುಂದಿಡಲಾಗಿದೆ. ಸದ್ಯ ಫಸ್ಟ್ ಲುಕ್ ಟೀಸರ್ ಮೂಲಕ ಗಮನ ಸೆಳೆಯುತ್ತಿರುವ 'ಮಾರಿಗೆ ದಾರಿ' ಪಕ್ಕಾ ಮಾಸ್ ಕಂಟೆಂಟ್ ಹೊಂದಿರುವ ಚಿತ್ರವೆಂಬುದನ್ನು ಸಾರಿ ಹೇಳುವಂತಿದೆ.
ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಈ ಚಿತ್ರವನ್ನು ಅಗಸ್ತ್ಯ ಎಂಬ ಯುವ ಪ್ರತಿಭೆ ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ನಾಯಕನಾಗಿಯೂ ಅವರೇ ನಟಿಸಿದ್ದಾರೆ. ಅವರ ಒಂದಷ್ಟು ಲುಕ್ಗಳ ಝಲಕ್ಗಳು ಫಸ್ಟ್ ಲುಕ್ ಟೀಸರ್ ಮೂಲಕ ಬಹಿರಂಗಪಡಿಸಲಾಗಿದೆ. ನೆಲಮೂಲದ ಕಥೆ, ಮಾಸ್ ದೃಶ್ಯಾವಳಿಗಳ ಸುಳಿವಿನೊಂದಿಗೆ ಮೂಡಿ ಬಂದಿರುವ ಈ ಚಿತ್ರದ ಟೀಸರ್ ಒಂದಷ್ಟು ಆಲೋಚೆನೆಗಳಿಗೆ ನಿಮ್ಮನ್ನು ತಳ್ಳುತ್ತದೆ. ಈ ಮೂಲಕ ಹೊಸಬರೇ ಸೇರಿಕೊಂಡು ಮಾಡಿರುವ 'ಮಾರಿಗೆ ದಾರಿ' ಚಿತ್ರ ಸಿನಿಮಾಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ.
ಇದನ್ನೂ ಓದಿ: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು: ವಿಡಿಯೋ ನೋಡಿ - Pooja to Ambareesh Tomb
ಚಿತ್ರದಲ್ಲಿ ಅಗಸ್ತ್ಯ ಅಲ್ಲದೇ ಮಹಾಲಕ್ಷ್ಮಿ, ಕಾಕ್ರೋಚ್ ಸುಧಿ, ವರ್ಧನ್, ಪ್ರದೀಪ್ ಪೂಜಾರಿ, ಬೆನಕ ನಂಜಪ್ಪ, ಬಾಲ ರಾಜವಾಡಿ ಸೇರಿದಂತೆ ಮೊದಲಾದವರು ನಟಿಸಿದ್ದಾರೆ. ರಾಧಾ ಫಿಲ್ಮ್ಸ್ ಬ್ಯಾನರ್ನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಕನ್ನಡದ ಪ್ರೇಕ್ಷಕರಿಗೆ ತೀರಾ ಫ್ರೆಶ್ ಎನ್ನಿಸುವಂಥ ಕಥೆಯೊಂದಿಗೆ ಈ ಸಿನಿಮಾವನ್ನು ರೂಪಿಸಿರೋದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಒಂದಷ್ಟು ಅಂಶಗಳು ಈ ಟೀಸರ್ನಲ್ಲಿ ಕಾಣಿಸಿವೆ. ಜಗದೀಶ್ ಗೌಡ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಸ್ವಾಮಿನಾಥನ್ ಆರ್.ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಜಗದೀಶ್ ಗೌಡ ಸಂಕಲನ ಈ ಚಿತ್ರಕ್ಕಿದೆ. ಸದ್ಯ ಟೀಸರ್ನಿಂದ ಗಮನ ಸೆಳೆಯುತ್ತಿರುವ ಮಾರಿಗೆ ದಾರಿ ಚಿತ್ರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಯೋಜನೆಯಲ್ಲಿ ಚಿತ್ರತಂಡವಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದನ್ನು ಕಾದು ನೋಡಬೇಕು.
ಇದನ್ನೂ ಓದಿ: ಅಂಬರೀಶ್ ಜನ್ಮದಿನ: ರೆಬಲ್ ಸ್ಟಾರ್ ಕುರಿತ ಆಸಕ್ತಿಕರ ವಿಚಾರಗಳಿವು - Ambareesh Birthday