ಸರಿಸುಮಾರು ಒಂದು ದಶಕದಿಂದ ಬಾಲಿವುಡ್ನಲ್ಲಿ ಗುರುತಿಸಿಕೊಂಡು, ಕಳೆದ ವರ್ಷವಷ್ಟೇ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿರುವ ನಟಿ ಕೃತಿ ಸನೋನ್ ಮನರಂಜನಾ ಉದ್ಯಮದಲ್ಲಿ ವೇತನ ಸಮಾನತೆಯ ಬಗ್ಗೆ ನಡೆಯುತ್ತಿರುವ ಚರ್ಚೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕರೀನಾ ಕಪೂರ್ ಖಾನ್ ಮತ್ತು ಟಬು ಜೊತೆಗಿನ ಕ್ರ್ಯೂ ಚಿತ್ರದ ಯಶಸ್ಸಿನ ನಂತರ ಕೃತಿ ಸಂಭಾವನೆ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ.
ಯೂಟ್ಯೂಬ್ ಚಾನಲ್ವೊಂದರ ಜೊತೆಗಿನ ಮಾತುಕತೆ ವೇಳೆ, ನಟ ನಟಿಯರ ನಡುವಿನ ಅಸಮಾನ ವೇತನ ಎಂಬ ನಿರಂತರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿದರು. ಪುರುಷ ಮತ್ತು ಮಹಿಳೆಯರ ವೇತನದಲ್ಲಾಗುವ ಅಂತರದ ಹಿಂದಿರುವ ತರ್ಕವನ್ನು ಪ್ರಶ್ನಿಸಿದರು.
ಪಾವತಿಯಲ್ಲಾಗುವ ವ್ಯತ್ಯಾಸ ಅಸಮರ್ಥನೀಯ. ಕೆಲ ಪುರುಷ ಸಹ-ನಟರು ವರ್ಷಕ್ಕೆ ಒಂದು ಹಿಟ್ ಸಿನಿಮಾ ನೀಡದಿದ್ದರೂ ಸಹ ನಟಿಯರಿಗಿಂತ ಹತ್ತು ಪಟ್ಟು ಹೆಚ್ಚು ಗಳಿಸುತ್ತಾರೆ. ಅದೇಕೆ?. ಈ ಅಸಮಾನತೆಯು ಗೊಂದಲಮಯವಾಗಿದೆ. ಅಷ್ಟೇ ಅಲ್ಲ, ಉದ್ಯಮದೊಳಗಿನ ಪಕ್ಷಪಾತವನ್ನು ಸಹ ಇದು ಪ್ರತಿಬಿಂಬಿಸುತ್ತದೆ ಎಂದು ಬಹುಬೇಡಿಕೆ ನಟಿ ಒತ್ತಿ ಹೇಳಿದರು. ಪ್ರಸ್ತುತ ಸಂಭಾವನೆಯಲ್ಲಿ ವ್ಯತ್ಯಾಸ ದೊಡ್ಡ ಮಟ್ಟದಲ್ಲಿದೆ ಎಂದು ಸಹ ತಿಳಿಸಿದರು.
ಕ್ರ್ಯೂನಂತಹ ಮೂರು ಎ-ಲಿಸ್ಟ್ ನಟಿಯರನ್ನು ಒಳಗೊಂಡ ಚಿತ್ರಗಳಿಗೆ ಬಜೆಟ್ ನಿಗದಿಪಡಿಸಲು ನಿರ್ಮಾಪಕರು ಹಿಂದೇಟು ಹಾಕುತ್ತಾರೆ. ಇದು ಫೀಮೇಲ್ ಲೀಡ್ ಪ್ರೊಜೆಕ್ಟ್ ರಚಿಸುವಲ್ಲಿ ಪ್ರಮುಖ ಅಡಚಣೆ ಆಗಿದೆ. 2018 ರಿಂದಲೂ ಈ ಸಮಸ್ಯೆ ಮುಂದುವರಿದಿದೆ ಎಂದು ಸನೋನ್ ತಮ್ಮ ನಿರಾಶೆ ವ್ಯಕ್ತಪಡಿಸಿದರು.
ಕೆಲ ಟಾಪ್ ನಟಿಯರ ಹೆಸರನ್ನು ಉಲ್ಲೇಖಿಸಿ, ಅವರಂತಹ ಬಹುಬೇಡಿಕೆ ನಟಿಯರು ಕೂಡ ಚಿತ್ರದ ಬಜೆಟ್ ಅನ್ನು ಮ್ಯಾನೇಜ್ ಮಾಡಲು, ವೇತನ ಕಡಿತದಂತಹ ಪ್ರಕ್ರಿಯೆಯನ್ನು ಸ್ವೀಕರಿಸಬೇಕಾಯಿತು ಎಂಬುದನ್ನು ಕೃತಿ ಸನೋನ್ ಬಹಿರಂಗಪಡಿಸಿದರು. ಇದು ಮಹಿಳಾ ನೇತೃತ್ವದ ಚಿತ್ರಗಳಲ್ಲಿ ಅಸಮಾನ ಹೂಡಿಕೆಯ ಸಮಸ್ಯೆಯನ್ನು ಒತ್ತಿಹೇಳುತ್ತದೆ.
ಇದನ್ನೂ ಓದಿ: ಸಾನ್ಯಾ ಅಯ್ಯರ್, ಇಂದ್ರಜಿತ್ ಲಂಕೇಶ್ ಪುತ್ರನ 'ಟೈಮ್ ಬರುತ್ತೆ' ಹಾಡಿಗೆ ಫ್ಯಾನ್ಸ್ ಫಿದಾ - Gowri movie
ನಟಿ ತನ್ನ ಮುಂದಿನ ಸಿನಿಮಾ 'ದೋ ಪಟ್ಟಿ'ಗಾಗಿ ಸಜ್ಜಾಗುತ್ತಿದ್ದು, ಈ ಚಿತ್ರದಲ್ಲಿ ನಿರ್ಮಾಪಕಿಯಾಗಿಯೂ ಕೆಲಸ ಮಾಡಲಿದ್ದಾರೆ. ಉದ್ಯಮದಲ್ಲಿನ ವೇತನದ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ. ಚಿತ್ರದಲ್ಲಿ ಕಾಜೋಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ನಟ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲು: ಕಾರಣ? - Allu Arjun
ಕೃತಿ ಸನೋನ್ ಅಭಿನಯದ ಕೊನೆಯ ಚಿತ್ರಗಳು 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಮತ್ತು 'ದಿ ಕ್ರ್ಯೂ'. ಅಮಿತ್ ಜೋಶಿ ಮತ್ತು ಆರಾಧಾನ ಶಾ ನಿರ್ದೇಶನದ ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ಚಿತ್ರದಲ್ಲಿ ಶಾಹಿದ್ ಕಪೂರ್ ಜೊತೆ ತೆರೆ ಹಂಚಿಕೊಂಡಿದ್ದರು. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿರುವ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿದೆ. ಧರ್ಮೇಂದ್ರ ಮತ್ತು ಡಿಂಪಲ್ ಕಪಾಡಿಯಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ದಿ ಕ್ರ್ಯೂ ಕೂಡ ಮಾರ್ಚ್ 29ರಂದು ಬಿಡುಗಡೆ ಆಗಿ ಯಶಸ್ಸು ಕಂಡಿದೆ. 'ದೋ ಪಟ್ಟಿ' ನಟಿಯ ಮುಂದಿನ ಪ್ರಾಜೆಕ್ಟ್.