ETV Bharat / entertainment

ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಕೃಷ್ಣಂ ಪ್ರಣಯ ಸಖಿ' ಬಿಡುಗಡೆ: ಗಣಿ ಅಭಿಮಾನಿಗಳ ಸಂಭ್ರಮ ನೋಡಿ - Krishnam Pranaya Sakhi

author img

By ETV Bharat Karnataka Team

Published : Aug 15, 2024, 12:46 PM IST

ಇಂದು ಭಾರತೀಯರಿಗೆ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಈ ದಿನ ಹಲವು ಬಹುನಿರೀಕ್ಷಿತ ಚಿತ್ರಗಳು ಥಿಯೇಟರ್​ಗೆ ಎಂಟ್ರಿ ಕೊಟ್ಟಿವೆ. ಈ ಸಾಲಿನಲ್ಲಿ ಕನ್ನಡದ 'ಕೃಷ್ಣಂ ಪ್ರಣಯ ಸಖಿ' ಕೂಡ ಒಂದು. ಅಭಿಮಾನಿಗಳು ಗೋಲ್ಡನ್​ ಸ್ಟಾರ್​ ಗಣೇಶ್​ ಅಭಿನಯದ ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

Krishnam Pranaya Sakhi release
ಕೃಷ್ಣಂ ಪ್ರಣಯ ಸಖಿ ಬಿಡುಗಡೆ (ETV Bharat)

ಈ ಸಾಲಿನ ಆಗಸ್ಟ್ ಸಿನಿಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ.​​ ಪ್ರೇಕ್ಷಕರಿಗೆ ಸಿನಿಸುಗ್ಗಿ ಅಂತಲೇ ಹೇಳಬಹುದು. ಭಾರತೀಯ ಚಿತ್ರಗಳೊಂದಿಗೆ ಸಾಲು ಸಾಲು ಕನ್ನಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದ್ದು, ಇಂದು 10ಕ್ಕೂ ಹೆಚ್ಚು ಬಹುನಿರೀಕ್ಷಿತ ಸಿನಿಮಾಗಳು ತೆರೆಗಪ್ಪಳಿಸಿವೆ. ಈ ಸಾಲಿನಲ್ಲಿ ಕನ್ನಡದ ಬಹುನಿರೀಕ್ಷಿತ ಚಿತ್ರಗಳಾದ 'ಕೃಷ್ಣಂ ಪ್ರಣಯ ಸಖಿ' ಮತ್ತು 'ಗೌರಿ' ಚಿತ್ರಗಳೂ ಸೇರಿವೆ.

ಹೌದು, ಗೋಲ್ಡನ್​ ಸ್ಟಾರ್​ ಗಣೇಶ್​​​ ಅಭಿನಯದ 'ಕೃಷ್ಣಂ ಪ್ರಣಯ ಸಖಿ' ಚಿತ್ರ ಅದ್ಧೂರಿಯಾಗಿ ತೆರೆಗಪ್ಪಳಿಸಿದೆ. ರಾಜ್ಯಾದ್ಯಂತ 350ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿಈ ಸಿನಿಮಾ ಬಿಡುಗಡೆ ಆಗಿದೆ. ಚಿತ್ರಮಂದಿರಗಳೆದುರು ಅಭಿಮಾನಿಗಳ ಸಂಭ್ರಮ ಬಲು ಜೋರು ಅಂತಲೇ ಹೇಳಬಹುದು. ಕನ್ನಡ ಚಿತ್ರರಂಗದ ಖ್ಯಾತ ನಟನ ಸಿನಿಮಾಗೆ ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ.

ಕೃಷ್ಣಂ ಪ್ರಣಯ ಸಖಿ ಬಿಡುಗಡೆ (ETV Bharat)

ಶ್ರೀನಿವಾಸರಾಜು ಆ್ಯಕ್ಷನ್​ ಕಟ್​​ ಹೇಳಿರುವ ಈ ಚಿತ್ರವನ್ನು ಪ್ರಶಾಂತ್ ಜಿ ರುದ್ರಪ್ಪ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ನಿರ್ಮಾಣ ಮಾಡಿದ್ದಾರೆ. ಗಣೇಶ್ ಹಾಗೂ ಮಾಳವಿಕ ನಾಯರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶಿವಧ್ವಜ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಸೇರಿದಂತೆ ಹಲವರು ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕೃಷ್ಣಂ ಪ್ರಣಯ ಸಖಿಯು ಗಣೇಶ್ ಅಭಿನಯದ 41ನೇ ಚಿತ್ರವಾಗಿದ್ದು, ಗೆಲ್ಲುವ ಸೂಚನೆ ನೀಡಿದೆ.

ಇದನ್ನೂ ಓದಿ: ನಾಳೆ ಸಿನಿಸುಗ್ಗಿ: ಒಂದೇ ದಿನ 10ಕ್ಕೂ ಹೆಚ್ಚು ಚಿತ್ರಗಳು ತೆರೆಗೆ; ಬಾಕ್ಸ್​ ಆಫೀಸ್​​ ಫೈಟ್​ ಪಕ್ಕಾ - Independence Day Box Office Clash

ಇದೊಂದು ಫ್ಯಾಮಿಲಿ ಡ್ರಾಮಾ ಆಗಿದ್ದು, ಸಿನಿಮಾ ತನ್ನ ಹಾಡುಗಳಿಂದಲೇ ಗಮನ ಸೆಳೆದಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಈ ಚಿತ್ರಕ್ಕಿದೆ. ವೆಂಕಟ್ ಪ್ರಸಾದ್ ಅವರ ಕ್ಯಾಮರಾ ಕೈಚಳಕ, ಕೆ.ಎಂ.ಪ್ರಕಾಶ್ ಅವರ ಸಂಕಲನ ಈ ಸಿನಿಮಾಗಿದೆ. ಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ.ರುದ್ರಪ್ಪ ಅವರು ಚಿತ್ರವನ್ನು ಬಿಗ್​ ಬಜೆಟ್​ನಲ್ಲಿ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾರೆ. ಕನ್ನಡದ ಹಲವು ಯಶಸ್ವಿ ಸಿನಿಮಾಗಳ ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶನದ ಚಿತ್ರದಲ್ಲಿ ಕನ್ನಡದ ಖ್ಯಾತ ನಟ ಅಭಿನಯಿಸಿರುವುದರಿಂದ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಆರಂಭಿಕ ವಿಮರ್ಷೆ ಪ್ರಕಾರ, ಸಿನಿಮಾ ಬಹುತೇಕ ಪ್ರಶಂಸೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಅಂದು 'ಮುಂಗಾರು ಮಳೆ' ಇಂದು 'ಕೃಷ್ಣಂ ಪ್ರಣಯ ಸಖಿ': ಬಾಕ್ಸ್ ಆಫೀಸ್‌ನಲ್ಲಿ 'ಗಣಿ'ಗಾರಿಕೆಗೆ ರೆಡಿ - Krishnam Pranaya Sakhi

ಪ್ರೇಮ್​ಕಹಾನಿ ಹೀರೋ ಗಣೇಶ್​​​​ ಅವರ ಈ ಸಿನಿಮಾ ತನ್ನ ಸುಮಧುರ ಹಾಡುಗಳಿಂದಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಸಾಂಗ್ಸ್​​ ಮಿಲಿಯನ್​ಗಟ್ಟಲೆ ವೀಕ್ಷಣೆಯಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. 'ದ್ವಾಪರ' ಹಾಡಂತೂ ಸಖತ್​​ ಟ್ರೆಂಡಿಂಗ್​ನಲ್ಲಿದ್ದು, ಅದರ ಜನಪ್ರಿಯತೆ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಅಡ್ವಾನ್ಸ್​​ ಟಿಕೆಟ್ ಬುಕ್ಕಿಂಗ್ ವಿಚಾರದಲ್ಲೂ ಒಂದು ಹೆಜ್ಜೆ ಮುಂದಿದ್ದು, ಕಲೆಕ್ಷನ್​ ಮೇಲೆ ಎಲ್ಲರ ಗಮನ ನೆಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.