ETV Bharat / entertainment

1 ವರ್ಷದ ಸಂಭ್ರಮದಲ್ಲಿ 'ಕೌಸಲ್ಯಾ ಸುಪ್ರಜಾ ರಾಮ': ಸರ್ವರಿಗೂ ಧನ್ಯವಾದ ಅರ್ಪಿಸಿದ ಡಾರ್ಲಿಂಗ್​ ಕೃಷ್ಣ - Kousalya Supraja Rama - KOUSALYA SUPRAJA RAMA

ನಟ ಡಾರ್ಲಿಂಗ್​ ಕೃಷ್ಣ ಮತ್ತು ನಿರ್ದೇಶಕ ಶಶಾಂಕ್​ ಕಾಂಬಿನೇಶನ್​ನಲ್ಲಿ ಮೂಡಿಬಂದಿದ್ದ 'ಕೌಸಲ್ಯಾ ಸುಪ್ರಜಾ ರಾಮ' ಇಂದಿಗೆ ಒಂದು ವರ್ಷ ಪೂರೈಸಿದೆ. ಸಿನಿಮಾದ ಮೊದಲ ಸಾಲಿನ ಸಂಭ್ರಮ ಹಿನ್ನೆಲೆಯಲ್ಲಿ, ನಾಯಕ ನಟ ವಿಶೇಷ ಪೋಸ್ಟ್​ ಶೇರ್ ಮಾಡಿ ಸರ್ವರಿಗೂ ಧನ್ಯವಾದ ಅರ್ಪಿಸಿದ್ದಾರೆ. ನೆಟ್ಟಿಗರೂ ಕೂಡ ತಮ್ಮ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

Kousalya Supraja Rama Poster
'ಕೌಸಲ್ಯಾ ಸುಪ್ರಜಾ ರಾಮ' ಪೋಸ್ಟರ್ (ETV Bharat)
author img

By ETV Bharat Karnataka Team

Published : Jul 28, 2024, 4:19 PM IST

ಕೆಲ ಸಿನಿಮಾಗಳು ಕಂಟೆಂಟ್​, ನಿರೂಪಣಾ ಶೈಲಿಯಿಂದ ಜನಮನದಲ್ಲಿ ಉಳಿದು ಬಿಡುತ್ತದೆ. ತೆರೆಕಂಡು ವರ್ಷಗಳುರುಳಿದರೂ ಕೂಡ ಯಶಸ್ವಿ ಚಿತ್ರವೆಂದು ಸದಾ ಪ್ರೆಕ್ಷಕರ ಚೆರ್ಚೆಯ ವಿಷಯವಾಗಿರುತ್ತದೆ. ಆ ಸಾಲಿನಲ್ಲಿ 'ಕೌಸಲ್ಯಾ ಸುಪ್ರಜಾ ರಾಮ' ಕೂಡ ಒಂದು. ಕಳೆದ ವರ್ಷ ತೆರೆಕಂಡು ಸೂಪರ್​ ಹಿಟ್​ ಆಗಿದ್ದ 'ಕೌಸಲ್ಯಾ ಸುಪ್ರಜಾ ರಾಮ' ಇಂದಿಗೆ ಒಂದು ವರ್ಷದ ಸಂಭ್ರಮದಲ್ಲಿದೆ.

2023ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ 'ಕೌಸಲ್ಯಾ ಸುಪ್ರಜಾ ರಾಮ' ಜುಲೈ 28ರಂದು ತೆರೆಗಪ್ಪಳಿಸಿತ್ತು. ಶಶಾಂಕ್ ಆ್ಯಕ್ಷನ್​ ಕಟ್​​​ ಹೇಳಿದ್ದ ಈ ಚಿತ್ರದಲ್ಲಿ ಡಾರ್ಲಿಂಗ್​ ಕೃಷ್ಣ ಮುಖ್ಯಭೂಮಿಕೆಯಲ್ಲಿದ್ದಾರೆ. ಉಳಿದಂತೆ ಮಿಲನಾ ನಾಗರಾಜ್​, ಬೃಂದಾ ಆಚಾರ್ಯ, ನಾಗಭೂಷಣ್, ಸುಧಾ ಬೆಳವಾಡಿ, ರಂಗಾಯಣ ರಘು, ಅಚ್ಯುತ್​ ಕುಮಾರ್​, ಗಿರಿರಾಜ್​ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಸಿನಿಮಾ ನಿರೀಕ್ಷೆಯಂತೆ ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ಸು ಕಂಡಿತ್ತು.

Darling Krishna IG Story
ಡಾರ್ಲಿಂಗ್​ ಕೃಷ್ಣ ಇನ್​ಸ್ಟಾಗ್ರಾಮ್​ ಸ್ಟೋರಿ (Darling Krishna Instagram)

'ಲವ್​ ಮಾಕ್ಟೇಲ್​' ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಡಾರ್ಲಿಂಗ್​ ಕೃಷ್ಣ ಅವರು ಮೊಗ್ಗಿನ ಮನಸ್ಸು, ಮುಂಗಾರು ಮಳೆ 2, ಬಚ್ಚನ್​ ಸೇರಿದಂತೆ ಹಲವು ಹಿಟ್​ ಚಿತ್ರಗಳನ್ನು ನೀಡಿರುವ ನಿರ್ದೇಶಕ ಶಶಾಂಕ್​ ಕಾಂಬಿನೇಶನ್​ನಲ್ಲಿ ಬಂದ ಚಿತ್ರ ತನ್ನ ಕಥೆಯ ಸಲುವಾಗಿಯೇ ಹೆಚ್ಚಾಗಿ ಸದ್ದು ಮಾಡಿತ್ತು. ಸರಿಸುಮಾರು 50 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡ ಈ ಚಿತ್ರ ನಂತರ ಓಟಿಟಿಗೆ ಎಂಟ್ರಿ ಕೊಟ್ಟಿತು. ಸದ್ಯ ಅಮೆಜಾನ್​ ಪ್ರೈಮ್​ನಲ್ಲಿ ಲಭ್ಯವಿದೆ.

ಸಿನಿಮಾ ಬಿಡುಗಡೆ, ಚಿತ್ರಮಂದಿರದ ಕ್ಷಣಗಳು, ಸೆಲೆಬ್ರಿಟಿಗಳ ಸಾಥ್ ಸೇರಿದಂತೆ ಯಶಸ್ಸಿನ ಕ್ಷಣಗಳನ್ನೊಳಂಡ ವಿಶೇಷ ವಿಡಿಯೋ ಹಂಚಿಕೊಂಡ ನಾಯಕ ನಟ ಡಾರ್ಲಿಂಗ್​ ಕೃಷ್ಣ, ನನ್ನ ಹೃದಯಕ್ಕೆ ಹತ್ತಿರವಾದ ಈ ಅದ್ಭುತ ಚಿತ್ರಕ್ಕೆ 1 ವರ್ಷ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ಇಂಥ ಭಾವಪೂರ್ಣ ಸಿನಿಮಾ ನೀಡಿದ್ದಕ್ಕಾಗಿ ನಮ್ಮ ನಿರ್ದೇಶಕ ಮತ್ತು ನಿರ್ಮಾಪಕರಿಗೆ ವಿಶೇಷ ಧನ್ಯವಾದ ಎಂದು ತಿಳಿಸಿದ ನಟ ನನ್ನ ಮುತ್ತುಲಕ್ಷ್ಮಿ ಮಿಲನಾ ನಾಗರಾಜ್​​ ಅವರಿಗೆ ವಿಶೇಷವಾಗಿ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪೌಡರ್‌ನಿಂದ 'ಪರಪಂಚ ಘಮ ಘಮ': ಅಭಿಮಾನಿಗಳಿಗೆ ದಿಗಂತ್, ಧನ್ಯಾ ಸಿನಿಮಾ ನೋಡುವ ಹಂಬಲ - Parapancha Gama Gama Song

ಮುಖ್ಯಭೂಮಿಕೆಯಲ್ಲಿ ಅದ್ಭುತವಾಗಿ ನಟಿಸಿದ್ದ ಡಾರ್ಲಿಂಗ್​ ಕೃಷ್ಣ ಅವರ ಪತ್ನಿ ಹಾಗೂ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಮಿಲನಾ ನಾಗರಾಜ್​​​ ಕೂಡ ಈ ವಿಶೇಷ ವಿಡಿಯೋ ಹಂಚಿಕೊಂಡು, ನಮ್ಮ ಸಿನಿಮಾವನ್ನು ಪ್ರೀತಿಸಿದ ಸರ್ವರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ. ನಟ ನಟಿಯರ ಈ ಪೋಸ್ಟ್​​ಗೆ ಅಭಿಮಾನಿಗಳು ಪ್ರೀತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ 'ಹೇಳು ಗೆಳತಿ' ಹಾಡು ನೋಡಿ!: ಕುತೂಹಲ ಕೆರಳಿಸಿದ ರಕ್ಷಿತ್​ ಶೆಟ್ಟಿ ಸಿನಿಮಾ - Ibbani Tabbida Ileyali Movie

ETV Bharat Logo

Copyright © 2024 Ushodaya Enterprises Pvt. Ltd., All Rights Reserved.