ETV Bharat / entertainment

ಕೆಕೆಆರ್‌ನ ರಿಂಕು ರಾಕ್ಸ್! ಅಲ್ಲು ಅರ್ಜುನ್‌ 'ಪುಷ್ಪ' ಸಿನಿಮಾ ಹಾಡಿಗೆ ಮಸ್ತ್‌ ಡ್ಯಾನ್ಸ್- ವಿಡಿಯೋ ನೋಡಿ - Rinku Singh Pushpa Dance - RINKU SINGH PUSHPA DANCE

'ಪುಷ್ಪ-ಪುಷ್ಪ' ಹಾಡಿಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

Rinku Singh dances for Pushpa song
ಪುಷ್ಪ​ ಸಾಂಗ್​​ಗೆ ರಿಂಕು ಸಿಂಗ್​​ ಡ್ಯಾನ್ಸ್ (KKR, Pushpa Twitter)
author img

By ETV Bharat Karnataka Team

Published : May 14, 2024, 2:18 PM IST

ಟಾಲಿವುಡ್​​ ನಟ ಅಲ್ಲು ಅರ್ಜುನ್ ಅಭಿನಯದ ಮುಂದಿನ ಸಿನಿಮಾವೇ 'ಪುಷ್ಪ-2 ದಿ ರೂಲ್'. ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಖತ್​ ಸದ್ದು ಮಾಡುತ್ತಿದೆ. ಪ್ರೇಕ್ಷಕರು ಕೂಡಾ ಸಿನಿಮಾ ನೋಡುವ ಕಾತರದಲ್ಲಿದ್ದಾರೆ. ಮತ್ತೊಂದೆಡೆ, ಸಿನಿಮಾ ಬಿಡುಗಡೆಗೊಳಿಸುವ ಉತ್ಸಾಹದಲ್ಲಿ ಚಿತ್ರತಂಡವೂ ಇದೆ. ಪೋಸ್ಟರ್, ಟೀಸರ್, ಗ್ಲಿಂಪ್ಸ್ ಅಂತೆಲ್ಲಾ ಪ್ರಚಾರದ ಕೆಲಸದಲ್ಲಿ ತಂಡ ಒಂದು ಹೆಜ್ಜೆ ಮುಂದಿದೆ ಎನ್ನಬಹುದು.

ಇತ್ತೀಚೆಗಷ್ಟೇ ಅನಾವರಣಗೊಂಡ ಟೈಟಲ್ ಸಾಂಗ್ 'ಪುಷ್ಪ-ಪುಷ್ಪ' ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆಗಿದೆ. ಈ ಹಾಡಿನ ಹುಕ್ ಸ್ಟೆಪ್ ಟ್ರೆಂಡಿಂಗ್​ನಲ್ಲಿದ್ದು, ರೀಲ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇದೀಗ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಫೋಟಕ ಬ್ಯಾಟರ್ ರಿಂಕು ಸಿಂಗ್ ಅವರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ. ಈ ವಿಡಿಯೋದಲ್ಲಿ ರಿಂಕು 'ಪುಷ್ಪ-ಪುಷ್ಪ' ಹಾಡಿನ ಹುಕ್ ಸ್ಟೆಪ್ ಮಾಡುತ್ತಿರುವುದನ್ನು ನೋಡಬಹುದು.

ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ ಅವರ ವಿಡಿಯೋ ಅಭಿಮಾನಿಗಳ ಮನ ಗೆಲ್ಲುತ್ತಿದೆ. ವಿಡಿಯೋದಲ್ಲಿ, ಡ್ಯಾನ್ಸ್​​ ಮಾಡುತ್ತಿರುವ ರಿಂಕುಗೆ ಸಹ ಆಟಗಾರರು ತಮಾಷೆ ಮಾಡುತ್ತಿರುವುದನ್ನೂ ಕಾಣಬಹುದು.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ತಂಗಿಗೆ ಎಂಡೊಮೆಟ್ರಿಯೊಸಿಸ್; ಚಿಕಿತ್ಸೆ ಪಡೆದ ನಟಿ ಶಮಿತಾ - Shamita Shetty Hospitalized

ರಿಂಕು ಸಿಂಗ್ ನೃತ್ಯದ ವಿಡಿಯೋವನ್ನು ಹಂಚಿಕೊಂಡ ಅಧಿಕೃತ ಕೆಕೆಆರ್ ಎಕ್ಸ್​ ಖಾತೆ, 'ರಾಕೆಟ್​ ರಿಂಕು, ರುಖೇಗಾ ನಹಿ'​ ಎಂಬ ಕ್ಯಾಪ್ಷನ್​ ಕೊಟ್ಟಿದೆ. ಕ್ಲಿಪ್‌ನ ಕೊನೆಯಲ್ಲಿ, ಕೆಕೆಆರ್ ಸ್ಟಾರ್ ಬೌಲರ್ ಹರ್ಷಿತ್ ರಾಣಾ ಕೂಡ ಕಾಣಿಸಿಕೊಂಡರು. ಇಬ್ಬರೂ ಮತ್ತೊಮ್ಮೆ 'ಪುಷ್ಪ-ಪುಷ್ಪ' ಹುಕ್ ಸ್ಟೆಪ್ ಹಾಕಲು ಪ್ರಯತ್ನಿಸಿದ್ದಾರೆ. ಕೆಕೆಆರ್ ಪೋಸ್ಟ್ ಅನ್ನು ಪುಷ್ಪ ತಂಡ ಮರುಪೋಸ್ಟ್‌ ಮಾಡಿದೆ. ಕೊನೆಯ ಪಂದ್ಯದಲ್ಲಿ ರಿಂಕು ಸಿಂಗ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಕೆಕೆಆರ್ ಸಹ-ಮಾಲೀಕ ಶಾರುಖ್ ಖಾನ್ ಸಹ ಸಂದರ್ಶನವೊಂದರಲ್ಲಿ ರಿಂಕು ಸಿಂಗ್‌ರನ್ನು ಹೊಗಳಿದ್ದಾರೆ.

ಇದನ್ನೂ ಓದಿ: ರಾಜಕೀಯಕ್ಕೆ ಬರ್ತಾರಾ ಅಲ್ಲು ಅರ್ಜುನ್? ನಟ ಕೊಟ್ಟ ಸ್ಪಷ್ಟನೆ ಹೀಗಿದೆ - Allu Arjun

ಆಗಸ್ಟ್​​ನಲ್ಲಿ ಚಿತ್ರಮಂದಿರ ಪ್ರವೇಶಿಸಲಿರುವ 'ಪುಷ್ಪ 2: ದಿ ರೂಲ್‌'ನ ಪುಷ್ಪ ಪುಷ್ಪ ಹಾಡು ಇದೇ ಮೇ 1ರಂದು ಬಿಡುಗಡೆ ಆಗಿದ್ದು, ಈಗಲೂ ಟ್ರೆಂಡಿಂಗ್​ನಲ್ಲಿದೆ. ತೆಲುಗು ಮತ್ತು ಹಿಂದಿ ವರ್ಷನ್​​​​​ನ ಪುಷ್ಪ ಟೈಟಲ್​ ಟ್ರ್ಯಾಕ್​ 24 ಗಂಟೆಗಳಲ್ಲಿ ವಿಶ್ವದಾದ್ಯಂತ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳಾಗಿ ಹೊರಹೊಮ್ಮಿತ್ತು. ಅಂದು ಈ ಬಗ್ಗೆ ಚಿತ್ರತಂಡ ಪೋಸ್ಟರ್​ಗಳನ್ನು ಹಂಚಿಕೊಂಡಿತ್ತು. 6 ಭಾಷೆ ಸೇರಿ 24 ಗಂಟೆಯೊಳಗೆ ಅತೀ ಹೆಚ್ಚು ವೀಕ್ಷಿಸಲ್ಪಟ್ಟ ಭಾರತದ ಲಿರಿಕಲ್​​ ವಿಡಿಯೋ ಸಾಂಗ್ ಇದಾಗಿದೆ.​​ 40 ಮಿಲಿಯನ್​ಗೂ ಹೆಚ್ಚು​​ ವೀವ್ಸ್​. 1.27 ಮಿಲಿಯನ್​ ಲೈಕ್ಸ್. 15 ದೇಶಗಳಲ್ಲಿ ಟ್ರೆಂಡಿಂಗ್​ ಎಂದು ಅಂದು ಮಾಹಿತಿ ಕೊಟ್ಟಿದ್ದ ಚಿತ್ರನಿರ್ಮಾಪಕರು ಆಲ್​ ಟೈಮ್​​ ರೆಕಾರ್ಡ್ ಎಂದು ಪೋಸ್ಟರ್​​ನಲ್ಲಿ ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.