ಹಿಂದಿ ಚಿತ್ರರಂಗದಲ್ಲಿ ನಿರ್ದೇಶಕಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಕಿರಣ್ ರಾವ್, ಫೈನಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ 'ಅನಿಮಲ್' ಅನ್ನು ನೋಡಲು ಬಯಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಅನಿಮಲ್ ಚಿತ್ರವನ್ನು ಇನ್ನೂ ನೋಡಿಲ್ಲ. ಪ್ರೇಕ್ಷಕರು ಸಿನಿಮಾ ಆನಂದಿಸಿರೋ ಹಿನ್ನೆಲೆ ವೀಕ್ಷಿಸಲು ಬಯಸುವುದಾಗಿ ಹೇಳಿದ್ದಾರೆ.
ತಮ್ಮ ಲಾಪತಾ ಲೇಡಿಸ್ ಸಿನಿಮಾ ಸ್ವೀಕರಿಸಿದ ಸಕಾರಾತ್ಮಕ ಸ್ಪಂದನೆಗೆ ಪ್ರತಿಕ್ರಿಯಿಸಿದ ಕಿರಣ್ ರಾವ್, ವಿಮರ್ಶಕರು ಹಾಗೂ ಪ್ರೇಕ್ಷಕರು ಚಿತ್ರವನ್ನು ಇಷ್ಟಪಡುವುದು ಸಹಜ ವಿಚಾರವಲ್ಲ. ಪ್ರೇಕ್ಷಕರು ಆ್ಯಕ್ಷನ್ ಚಿತ್ರಗಳನ್ನು ಇಷ್ಟಪಡುತ್ತಾರೆ. ಹಾಗಂತ ವಿಮರ್ಶಕರೂ ಹಾಗೆ ಮಾಡಬೇಕಾಗಿಲ್ಲ. ಆಶ್ಚರ್ಯ ಎಂಬಂತೆ, ನಮ್ಮ ಈ ಚಿತ್ರ ವಿಮರ್ಶಕರು ಮತ್ತು ಪ್ರೇಕ್ಷಕರಿಗಿಬ್ಬರಿಗೂ ಇಷ್ಟವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
"ಲಾಪತಾ ಲೇಡಿಸ್ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದ್ದು, ನಾನು ಕೃತಜ್ಞನಾಗಿದ್ದೇನೆ. ವಿಮರ್ಶಕರು ಕೂಡ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಪ್ರೇಕ್ಷಕರು ಚಿತ್ರವನ್ನು ಇಷ್ಟಪಟ್ಟಾಗ, ವಿಮರ್ಶಕರೂ ಅದನ್ನು ಇಷ್ಟಪಡುವ ಅಗತ್ಯವಿಲ್ಲ. ಪ್ರೇಕ್ಷಕರು ಆ್ಯಕ್ಷನ್-ಪ್ಯಾಕ್ಡ್, ವಿಎಫ್‌ಎಕ್ಸ್ ಹೆಚ್ಚಿರುವ ಚಿತ್ರಗಳನ್ನು ಇಷ್ಟಪಡುತ್ತಾರೆ. ಅನಿಮಲ್‌ನಂತಹ ಚಿತ್ರಗಳು ಚಿತ್ರಗಳು ವೀಕ್ಷಕರ ಆದ್ಯತೆಯಾಗಿದೆ. ನಾನು ಕೂಡ ಈ ಸಿನಿಮಾವನ್ನು ವೀಕ್ಷಿಸಲು ಬಯಸುತ್ತೇನೆ. ಇದು ಅವಶ್ಯಕವಾಗಿದೆ. ಜನರು ಸಿನಿಮಾ ಇಷ್ಟಪಟ್ಟಿದ್ದಾರೆ. ಸಂದೀಪ್ ರೆಡ್ಡಿ ವಂಗಾ ಅವರ ಕಲೆ ಉತ್ತಮವಾಗಿದೆ ಎಂದು ಕೇಳಿದ್ದೇನೆ. ರಣ್ಬೀರ್ ಕಪೂರ್ ಸಹ ಉತ್ತಮ ನಟ. ನನಗಿದು ಇಂಟ್ರೆಸ್ಟಿಂಗ್ ಎನಿಸಬಹುದು ಎಂದು ತಿಳಿಸಿದ್ದಾರೆ.
2023ರಲ್ಲಿ, ಹೆಸರಾಂತ ಭಾರತೀಯ ಸಂಸ್ಥೆಯೊಂದು ನಡೆಸಿದ ಅಧ್ಯಯನ ಉಲ್ಲೇಖಿಸಿ ಕಿರಣ್ ರಾವ್ ಮಾತನಾಡಿದ್ದರು. ಆನ್, ಆಫ್ ಸ್ಕ್ರೀನ್ನಲ್ಲಿ ಮಹಿಳೆಯರ ಚಿತ್ರಣ ಹೇಗಿದೆ ಎಂಬುದರ ಬಗ್ಗೆ ದನಿ ಎತ್ತಿದ್ದರು. ಆ ಸಂದರ್ಭ ಸಂದೀಪ್ ವಂಗಾ ಅವರ ಕಬೀರ್ ಸಿಂಗ್ ಚಿತ್ರವನ್ನು ಉದಾಹರಣೆಯಾಗಿ ಬಳಸಿಕೊಂಡಿದ್ದರು ಎಂದು ಹೇಳಲಾಗಿದೆ. ಕೆಲ ದಿನಗಳವರೆಗೆ ಕಿರಣ್ - ಸಂದೀಪ್ ಶೀತಲ ಸಮರ ನಡೆಯಿತು.
ಇದನ್ನೂ ಓದಿ: ಮಾಲಿವುಡ್ಗೆ ಅನುಷ್ಕಾ ಶೆಟ್ಟಿ ಎಂಟ್ರಿ: ಪ್ಯಾನ್ ಇಂಡಿಯಾವಲ್ಲದೇ, ಕೊರಿಯನ್ನಲ್ಲೂ ಸಿನಿಮಾ ಬಿಡುಗಡೆ
ಕಿರಣ್ ಹೇಳಿಕೆಗೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದ ಸಂದೀಪ್, 1990ರ ಅಮೀರ್ ಖಾನ್ ಅವರ ದಿಲ್ ಚಿತ್ರದಲ್ಲಿನ ಕೆಲ ಸಾಲುಗಳು ಎಷ್ಟರ ಮಟ್ಟಿಗೆ ಸ್ತ್ರೀದ್ವೇಷದ್ದಾಗಿತ್ತು ಎಂಬುದನ್ನು 'ಹೋಗಿ ಅಮೀರ್ ಖಾನ್ ಅವರನ್ನು ಕೇಳಿ' ಎಂದು ತಿಳಿಸಿದ್ದರು. ಈ ಮಧ್ಯೆ 'ಅಮೀರ್ ಅವರ ಹಳೆಯ ಕ್ಷಮೆಯಾಚನೆ' ಕೂಡ ವೈರಲ್ ಆಗಿತ್ತು. ಅದರಲ್ಲಿ, ಅಮೀರ್ ಖಾನ್ ಮಹಿಳೆಯರನ್ನು ಉತ್ತಮವಾಗಿ ಚಿತ್ರಿಸದೇ ಬೇಜವಾಬ್ದಾರಿ ಚಿತ್ರಗಳ ಭಾಗವಾಗಿರುವುದಕ್ಕೆ 'ನಾಚಿಕೆಪಡುತ್ತೇನೆ' ಎಂದು ತಿಳಿಸಿದ್ದರು.
ಇದನ್ನೂ ಓದಿ: ಪಂಜಾಬಿ ಸಂಪ್ರದಾಯದಂತೆ ಕೃತಿ-ಪುಲ್ಕಿತ್ ಮದುವೆ: ಇಂದು ಮೆಹಂದಿ ಶಾಸ್ತ್ರ, ಸಮಾರಂಭಗಳು ಶುರು
ನಂತರ ಕಿರಣ್ ಪ್ರತಿಕ್ರಿಯಿಸಿ, ಸಂದೀಪ್ ಅವರ ಚಿತ್ರಗಳನ್ನು ವೀಕ್ಷಿಸದ ಕಾರಣ ನಾನೆಂದಿಗೂ ಟೀಕೆ ಮಾಡಿಲ್ಲ. ಅವರ ಯಾವುದೇ ಸಿನಿಮಾವನ್ನು ಹೆಸರಿಸಿಲ್ಲ. ಇನ್ನು ಅಮೀರ್ ಕ್ಷಮೆಯಾಚಿಸಿದ್ದಾರೆ, ಆದರೆ ಅವರ ಕೆಲಸಕ್ಕೆ ನಾನು 'ಜವಾಬ್ದಾರಳಲ್ಲ' ಎಂದು ತಿಳಿಸಿದ್ದರು.