ETV Bharat / entertainment

'ಮೇಘ' ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದ ಕಿರಣ್ ರಾಜ್: ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ - MEGHA MOVIE

'ರಾನಿ' ಚಿತ್ರದ ಬಳಿಕ ಬರುತ್ತಿರುವ ಕಿರಣ್ ರಾಜ್ ನಟನೆಯ 'ಮೇಘ' ಸಿನಿಮಾದ ಬಿಡುಗಡೆ ದಿನಾಂಕ ಶೀಘ್ರದಲ್ಲೇ ಘೋಷಣೆಯಾಗಲಿದೆ.

Megha poster
ಮೇಘ ಪೋಸ್ಟರ್ (film poster)
author img

By ETV Bharat Entertainment Team

Published : Nov 6, 2024, 2:42 PM IST

'ರಾನಿ' ಚಿತ್ರದ ಬಳಿಕ ಕಿರಣ್ ರಾಜ್ 'ಮೇಘ' ಎಂಬ ಸಿನಿಮಾ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ‌. ಚರಣ್ ನಿರ್ದೇಶನದ ಈ ಚಿತ್ರದಲ್ಲಿ ಕಿರಣ್ ರಾಜ್ ಹಾಗೂ ಕಾಜಲ್ ಕುಂದರ್ ಮುಖ್ಯಭೂಮಿಕೆಯಲ್ಲಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. ಕಿರಣ್ ರಾಜ್ ಹೊಸ ಅವತಾರದಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲು ಉತ್ಸುಕರಾಗಿದ್ದಾರೆ.

'ಮೇಘ' ನಿಜವಾದ ಸ್ನೇಹ ಮತ್ತು ಪ್ರೀತಿಯ ನಡುವೆ ಇರುವ ಸಣ್ಣ ವ್ಯತ್ಯಾಸ ನಿರೂಪಿಸಲಿದೆ. ಭಾವನೆಗಳೇ ಚಿತ್ರದ ಹೀರೋ. ವಿವಿಧ ಸಂಬಂಧಗಳ ಮೌಲ್ಯಗಳನ್ನು ವಿವರಿಸುವ ನಿಟ್ಟಿನಲ್ಲಿ ಕಥೆ ರಚನೆಯಾಗಿದೆ. ಪಾತ್ರಗಳು ಸ್ನೇಹದ ಎಳೆಗಳನ್ನು ಮತ್ತು ನಿಜವಾದ ಪ್ರೀತಿಯ ಆಳವಾದ ಪ್ರಭಾವವನ್ನು ತೋರಿಸೋ ನಿಟ್ಟಿನಲ್ಲಿ ನಿರ್ಮಾಣಗೊಂಡಿವೆ. ಬಲವಾದ ಕಥೆ ಒಳಗೊಂಡಿದ್ದು, ಸಂಬಂಧಗಳ ಸೌಂದರ್ಯ ಮತ್ತು ಅವು ತರುವ ಆಳವಾದ ಸಂತೋಷದ ಸುತ್ತ ಕಥೆ ಸಾಗುತ್ತದೆ.

Kiran raj - Kajal Kunder
ಕಿರಣ್ ರಾಜ್ - ಕಾಜಲ್ ಕುಂದರ್ (ETV Bharat)

ನಟ ಕಿರಣ್ ರಾಜ್ ಮತ್ತು ನಾಯಕಿ ಕಾಜಲ್ ಕುಂದರ್ ಅವರ ಅಭಿನಯದ ಜೊತೆಗೆ ನಾಯಕನ ತಂದೆಯಾಗಿ ರಾಜೇಶ್ ನಟರಂಗ ಅರುವ ನಟಿಸಿದ್ದು, ಈ ಮೂವರೂ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ ಎಂಬುದು ಚಿತ್ರತಂಡದ ವಿಶ್ವಾಸ. ಶೋಭರಾಜ್, ಸಂಗೀತಾ, ಸುಂದರ್ ವೀಣಾ, ಹನುಮಂತೇಗೌಡ, ತರಂಗ ವಿಶ್ವ ಮತ್ತು ಗಿರೀಶ್ ಶಿವಣ್ಣ ಸೇರಿದಂತೆ ಹಿರಿಯ ನಟರ ಪ್ರತಿಭಾವಂತ ತಾರಾಗಣ ಈ ಚಿತ್ರದಲ್ಲಿದೆ.

ಇದನ್ನೂ ಓದಿ: ಕಾಂತಾರ ಸೆಟ್​ನಲ್ಲಿ ರಿಷಬ್​ ಶೆಟ್ಟಿ: 60 ದಿನಗಳ ನಿರಂತರ ಶೂಟಿಂಗ್​; 2 ಶೆಡ್ಯೂಲ್​ ಕಂಪ್ಲೀಟ್, ಬಜೆಟ್​ ಮಾಹಿತಿ ಇಲ್ಲಿದೆ​​

ಕೃಷಿ ಪ್ರೊಡಕ್ಷನ್ಸ್ ಸಂಸ್ಥಾಪಕರಾದ ಯತೀಶ್ ಹೆಚ್ ಆರ್, ಯತೀಶ್ ಆರ್ ಜಿ ಮತ್ತು ರಮೇಶ್ ಹೆಚ್ ಎನ್ ನಿರ್ಮಾಣ ಮಾಡಿದ್ದಾರೆ. ಪ್ರತೀ ವರ್ಷ ಒಂದೊಂದು ಗುಣಮಟ್ಟದ ಚಿತ್ರವನ್ನು ಕನ್ನಡ ಚಿತ್ರರಂಗಕ್ಕೆ ತಲುಪಿಸುವ ಸಂಕಲ್ಪ ತೊಟ್ಟಿದ್ದಾರೆ. 'ಮೇಘ' ಕೃಷಿ ಪ್ರೊಡಕ್ಷನ್ಸ್ ಬ್ಯಾನರ್​​​ನ ಚೊಚ್ಚಲ ಚಿತ್ರವಾಗಿದೆ. ಸಿನಿಮಾದ ಭಾವನಾತ್ಮಕ ಆಳ ಹೆಚ್ಚಿಸುವ ಸಂಗೀತ ಇರಲಿದೆ. ಡಾ.ವಿ. ನಾಗೇಂದ್ರ ಪ್ರಸಾದ್ ಅವರ ಎರಡು ಹಾಡುಗಳು, ನಿರ್ದೇಶಕ ಚರಣ್ ಅವರ ಮೂರು ಹಾಡುಗಳಿದ್ದು, ಜೋಯಲ್ ಸಕ್ಕರಿ ಅವರು ಸಂಯೋಜಿಸಿದ್ದಾರೆ. ಫ್ರಾಂಕ್ಲಿನ್ ರಾಕಿ ಅವರ ಹಿನ್ನೆಲೆ ಸಂಗೀತ ಪ್ರೇಕ್ಷಕರಿಗೆ ಅವಿಸ್ಮರಣೀಯ ಅನುಭವವನ್ನು ನೀಡುವ ಭರವಸೆಯನ್ನು "ಮೇಘ" ಚಿತ್ರತಂಡ ಹೊಂದಿದೆ.

ಇದನ್ನೂ ಓದಿ: 'ರಾಮಾಯಣ'ದಲ್ಲಿ ಯಶ್​, ಸಾಯಿಪಲ್ಲವಿ, ರಣ್​​​ಬೀರ್​ ನಟನೆ ಖಚಿತ: ಬಿಡುಗಡೆಗೂ ಮುಹೂರ್ತ ಫಿಕ್ಸ್

ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್ ಮತ್ತು ವಾಸುಕಿ ವೈಭವ್ ಹಾಡಿರುವ ಹಾಡುಗಳು ಚಿತ್ರದ ಭಾವನಾತ್ಮಕ ಪ್ರಯಾಣವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತವೆ. ಚಿತ್ರದ 'ನಿನ್ನಲ್ಲಿ ನೀನು' ಹಾಡು ಬಿಡುಗಡೆಗೊಂಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಬಿಡುಗಡೆಗೆ ಸಜ್ಜಾಗುತ್ತಿರುವ 'ಮೇಘ' ಚಿತ್ರವನ್ನು ರವಿ ಫಿಲಂಸ್ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.